ಬೆಂಗಳೂರು(ಡಿ. 20) ಹೊರ ದೇಶಗಳಲ್ಲೂ ಕೆಜಿಎಫ್ ಹವಾ ಎಬ್ಬಿಸಿದೆ.  ವಿದೇಶದ 375 ಸೆಂಟರ್‌ಗಳಲ್ಲಿ ಕೆಜಿಎಫ್ ಪ್ರದರ್ಶನ ಕಾಣಲಿದೆ. ಆಮೇರಿಕಾ , ಕೆನಡಾ, ಇಟಲಿ, ಜರ್ಮನಿ, ಇಂಗ್ಲೆಂಡ್, ಉಕ್ರೇನ್, ಫಿನ್ ಲ್ಯಾಂಡ್,  ಫ್ರಾನ್ಸ್, ನೆದರ್ ಲ್ಯಾಂಡ್ ಸೇರಿ ಸುಮಾರು 20 ದೇಶಗಳಲ್ಲಿ ಕೆಜಿಎಫ್ ಅಬ್ಬರಿಸಲಿದೆ.

ಕೆಜಿಎಫ್‌ಗೆ ತಡೆಯಾಜ್ಞೆ ಬರಲು ಕಾರಣವಾದ ತಂಗಂ ಯಾರು?

ಸ್ಯಾಂಡಲ್ ವುಡ್ ಮಟ್ಟಿಗೆ ಇದು ಹೊಸ ದಾಖಲೆಯಾಗಿದ್ದು ಜರ್ಮನಿಯಲ್ಲೂ ಕೆಜಿಎಫ್ ಪ್ರದರ್ಶನ ಕಾಣಲಿದೆ. ಜರ್ಮನಿಯಲ್ಲಿ ಬುಕಿಂಗ್ ಓಪನ್ ಆದ 2 ಗಂಟೆಗಳಲ್ಲಿ ಟಿಕೆಟ್ ಸೋಲ್ಡ್ ಔಟ್ ಆಗಿದ್ದು ಕೆಜಿಎಫ್ ಕ್ರೇಜ್‌ಗಿರುವ ತಾಕತ್ತು.

ಒಂದು ಕಡೆ ಕೆಜಿಎಫ್ ಬಿಡುಗಡೆಗೆ ನ್ಯಾಯಾಲಯ ತಡೆಯಾಜ್ಞೆ ನೀಡಿದೆ. ಆದರೆ ಚಿತ್ರವನ್ನು ಈಗಾಗಲೆ ವಿತರಣೆ ಮಾಡಲಾಗಿದ್ದು ಕೊನೆ ಕ್ಷಣದಲ್ಲಿ ನೋಟಿಸ್ ನೀಡಲು ಸಾಧ್ಯವಿಲ್ಲ. ಅಲ್ಲದೇ ಎಲ್ಲರ ಕೈಗೂ ನೋಟಿಸ್ ನೀಡಲು ಸಾಧ್ಯವಿಲ್ಲ ಎಂದು ಹೇಳಿರುವ ಚಿತ್ರತಂಡ ಸಿನಿಮಾ ಬಿಡುಗಡೆ ಮಾಡೇ ಮಾಡುತ್ತೇನೆ ಎಂದು ಹೇಳಿದೆ.