ಬೆಂಗಳೂರು[ಡಿ.20]  5 ಭಾಷೆಗಳಲ್ಲಿ ಬಿಡುಗಡೆಯಾಗಬೇಕಿದ್ದ ಚಿತ್ರಕ್ಕೆ ಬ್ರೇಕ್ ಬ್ರೇಕ್ ಬಿದ್ದಿದೆ. ಇದಕ್ಕೆ ಕೇಳಿ ಬರುತ್ತಿರುವ ಹೆಸರು ಮತ್ತು ಕಾರಣ ಒಂದೇ. ಅದು ರೌಡಿ ತಂಗಂ ಹೆಸರು. ಹಾಗಾದರೆ ಯಾರು ಈ ರೌಡಿ ತಂಗಂ.

ಕೋಲಾರ ಮತ್ತು ಕೆಜಿಎಫ್ ನಲ್ಲಿ ಒಂದು ಕಾಲದಲ್ಲಿ ಸದ್ದು ಮಾಡಿದ್ದ ರೌಡಿ ತಂಗಂ. ಹಿಂದೆ ಲೂಸ್ ಮಾದ ಯೋಗೀಶ್ ಕೋಲಾರ ಸಿನಿಮಾ ಮಾಡಿದ್ದಾಗಲೂ ಈ ತಂಗಂ ಜೀವನಾಧಾರಿತ ಚಿತ್ರ ಎಂಬ ಹೆಸರು ಕೇಳಿ ಬಂದಿತ್ತು.

KGF ರಿಲೀಸ್‌ಗೆ ತಡೆ: ಟಿಕೆಟ್ ಬುಕ್ ಮಾಡಿ ಎಂದ ಯಶ್

ಕೋಲಾರ್ ರೌಡಿ ತಂಗಂ ಬಗ್ಗೆ ಯಾವುದೇ ಸಿನಿಮಾ, ಕಥೆ, ಸಾಕ್ಷ್ಯಚಿತ್ರಕ್ಕೆ ಮಾಡಬೇಕಾದರೆ ತಂಗಂ ಅವರ ತಾಯಿ ಬಳಿ ವೆಂಕಟೇಶ್ ಅವರು ಅನುಮತಿ ಪಡೆದುಕೊಂಡಿದ್ದರು. ಕೆಜಿಎಫ್ ಸಹ ತಂಗಂ ಕತೆ ಆಧಾರಿತ ಎಂಬುದು ಆರೋಪ.

ಈಗ ತಂಗಂ ಬಗ್ಗೆ ಏನೇ ಮಾಡಿದ್ರು. ವೆಂಕಟೇಶ್ ಬಳಿಯೇ ಅನುಮತಿ ಪಡೆಯಬೇಕಿದೆ. ಈ ಹಿಂದೆ 'ಕೋಲಾರ್' ಸಿನಿಮಾ ಮಾಡಿದ್ದ ನಿರ್ಮಾಪಕ ಆರ್ ಲಕ್ಷ್ಮಿ ನಾರಾಯಣ್ ಮತ್ತು ಆರ್ ರಮೇಶ್ ಅವರಿಂದ ವೆಂಕಟೇಶ್ ರೌಡಿ ತಂಗಂ ಕಥೆಯ ಅನುಮತಿ ಪಡದುಕೊಂಡಿದ್ದಾರೆ.  ಕೆಜಿಎಫ್ ಚಿತ್ರದಲ್ಲಿ ರೌಡಿ ತಂಗಂ ಕುರಿತ ದೃಶ್ಯಗಳಿವೆ, ದೃಶ್ಯಗಳಿವೆ. ಇದರಲ್ಲಿ ಅವರ ಕಥೆ ಬಳಸಲಾಗಿದೆ. ಹಾಗಾಗಿ, ಅವರು ಕಥೆಯ ಬಗ್ಗೆ ಎಲ್ಲಿಯೂ ಸುಳಿವು ಬಿಟ್ಟುಕೊಟ್ಟಿಲ್ಲ ಎಂಬುದು ಆರೋಪ. ಕೋಲಾರ್ ಸಿನಿಮಾ ಮಾಡಿದಾಗ ತಂಗಂ ತಾಯಿ ನಿರ್ಮಾಪಕರ ಬಳಿ ಹಣಕ್ಕೆ ಬೇಡಿಕೆ ಇಟ್ಟಿದ್ದರು ಎಂಬ ಮಾತು ಸಹ ಕೇಳಿಬಂದಿತ್ತು.