ದೋಹಾ, ಕತಾರ್(ಫೆ.21]  ಭಾರತೀಯ ಮೂಲದ ನಾಗರಿಕರೆಲ್ಲರೂ ಒಂದಾಗಿ ಪುಲ್ವಾಮಾ ದಾಳಿಯಲ್ಲಿ ಹುತಾತ್ಮರಾದ ಯೋಧರಿಗೆ ಶ್ರದ್ಧಾಂಜಲಿ ಸಲ್ಲಿಸಿದರು.

ಫೆಬ್ರವರಿ 18ರಂದು  ಟಿ.ಸಿ.ಎ (ಸೃಜನ ಕಲೆ) ಆವರಣದಲ್ಲಿ ಸೈನಿಕರ ಭಾವಚಿತ್ರಕ್ಕೆ ನಮಿಸಿದರು. 'ಗಂಧದ ಗುಡಿ’ ಕನ್ನಡಿಗರ ಬಳಬಳಗದ ಸುಬ್ರಹ್ಮಣ್ಯ ಹೆಬ್ಬಾಗಿಲು ಎಲ್ಲ ನಾಗರಿಕರನ್ನು ಒಂದೆಡೆ ಸೇರಿಸಿದ್ದರು.

ಕತಾರ್‌ನಲ್ಲೂ ಸದ್ದು ಮಾಡುತ್ತಿದೆ ’ನಟಸಾರ್ವಭೌಮ’

ಸೂರ್ಯದೇವರಿಂದ ಕರ್ಣನಿಗೆ ದೊರೆತ ಕವಚದಂತೆ ಸೈನಿಕರು ನಮ್ಮ ಭಾರತ ದೇಶ ಕವಚವಿದ್ದಂತೆ, ಉಗ್ರಗಾಮಿಗಳ ಇಂತಹ ದುಷ್ಕೃತ್ಯ ದೇಶದ ಕವಚಕ್ಕೆ ಆಘಾತವಾದಂತೆ. ಸೈನಿಕರು ನಮ್ಮ ದೇಶವನ್ನು ಕಾಪಾಡುತ್ತಿರುವರು ಎಂಬ ನಂಬಿಕೆಯಿಂದ ಎಲ್ಲರೂ ಕುಟುಂಬ ಸಮೇತ ಶಾಂತಿ-ನೆಮ್ಮದಿಯಿಂದ ಮಲಗಲು ಸಾಧ್ಯ. ಇಂತಹ ಭೀಕರ ಅಮಾನವೀಯ ಘಟನೆಗಳು ನಮ್ಮ ಜೀವನದಲ್ಲೆ ಮರೆಯಲಾಗದ ಗಾಯವನ್ನುಂಟು ಮಾಡುತ್ತದೆ ಎಂದು ಪ್ರತಿಯೊಬ್ಬರು ಕಣ್ಣೀರಾದರು.