ಕತಾರ್[ನ.29]  ಕತಾರ್ ಕರ್ನಾಟಕ ಮುಸ್ಲಿಂ ಸಾಂಸ್ಕೃತಿಕ ಕೇಂದ್ರ ಕನ್ನಡ ರಾಜ್ಯೋತ್ಸವವನ್ನು ಸಡಗರ ಸಂಭ್ರಮದಿಂದ ಆಚರಣೆ ಮಾಡಿದೆ. ನವೆಂಬರ್ 22 ರಂದು ರಾಜ್ಯೋತ್ಸವ  ಆಚರಿಸಿ ಕನ್ನಡ ಪ್ರೇಮ ಮೆರೆದಿದೆ.

ನಗರಾಭಿವೃದ್ಧಿ ಮತ್ತು ವಸತಿ ಸಚಿವ ಯು.ಟಿ.ಖಾದರ್ ಕಾರ್ಯಕ್ರಮದ ಮುಖ್ಯ ಅತಿಥಿಯಾಗಿ ಪಾಲ್ಗೊಂಡಿದ್ದರು. ಬೆಳಪು ಗ್ರಾಮ ಪಂಚಾಯಿತಿ ಅಧ್ಯಕ್ಷ ದೇವಿಪ್ರಸಾದ್ ಶೆಟ್ಟಿ, ಸಾಮಾಜಿಕ ಕಾರ್ಯಕರ್ತ ಉಸ್ಮಾನ್ ಶೇಖ್  ಅವರನ್ನು ಸನ್ಮಾನಿಸಲಾಯಿತು.

ಕತಾರ್‌ನಿಂದ ಬಂದು ಕೊಡಗು ನೋವಿಗೆ ಸ್ಪಂದಿಸಿದ ಕನ್ನಡಿಗರು

ಕತಾರ್ ಕರ್ನಾಟಕ ಮುಸ್ಲಿಂ ಸಾಂಸ್ಕೃತಿಕ ಕೇಂದ್ರದ ಅಧ್ಯಕ್ಷ ಇಬ್ರೀಜ್ ಖಾನ್, ಕಾರ್ಯದರ್ಶಿ ಖಲೀಲ್ ಅಹಮದ್, ಸಂಘದ ಮಾಜಿ ಅಧ್ಯಕ್ಷ ಅಬ್ದುಲ್ಲಾ ಮೊನು, ರಾಯಭಾರ ಕಚೇರಿಯ ಅಸಿಂ ಅನ್ವರ್ ಹಾಜರಿದ್ದರು.

ಸಾನಿಧ್ಯ ಕಲಾವಿದರ ತಂಡ ನಡೆಸಿಕೊಟ್ಟ ನೃತ್ಯ ಮತ್ತು ನಾಟಕ ಗಮನ ಸೆಳೆಯಿತು. ಚಂದ್ರಶೇಖರ ಅಂಗಡಿಯವರ ಹಾಸ್ಯ ಚಟಾಕಿ ನಗೆಯ ಹೊಳೆ ಹರಿಸಿತು. ಕಾರ್ಯಕ್ರಮದ ನಿರೂಪಣೆಯನ್ನು ಮಂಜುನಾಥ್ ನಡೆಸಿಕೊಟ್ಟರು.