ಬೆಂಗಳೂರು[ನ.28] ಕೇರಳ ಮತ್ತು ಕೊಡಗಿನಲ್ಲಾದ ಜಲಪ್ರಳಯಕ್ಕೆ ಇಡೀ ಭಾರತವೇ ಮರುಗಿತ್ತು. ಅಪಾರ ಪ್ರಮಾಣದ ನೆರವು ಹರಿದು ಬಂದಿತ್ತು. ಇದೀಗ ಕತಾರ್‌ನಲ್ಲಿ ವಾಸಿಸುತ್ತಿರುವ ಭಾರತೀಯ ಮೂಲದವರು ತಮ್ಮ ನೆರವು ಸಲ್ಲಿಕೆ ಮಾಡಿದ್ದಾರೆ.

ಭಾರತೀಯ ದೂತಾವಾಸದಡಿಯಲ್ಲಿ ಕಾರ್ಯವಹಿಸುತ್ತಿರುವ ಭಾರತೀಯ ಸಮುದಾಯದ ಸೇವಾ ಸಂಸ್ಥೆ (ಇಂಡಿಯನ್ ಕಮ್ಯೂನಿಟಿ ಬೇನೆವೋಲೆಂಟ್ ಫೋರಮ್-ICBF )  ಪ್ರವಾಹ ಪೀಡಿತ ಕೇರಳ  ಮತ್ತು ಕರ್ನಾಟಕದ ಕೊಡಗು ಜಿಲ್ಲೆಯ ಪ್ರವಾಹ ಪೀಡಿತರಿಗೆ ಧನ ಸಂಗ್ರಹಣೆ ಮಾಡಿ ನೀಡಿದೆ.

ದುಬೈ ಭಾರತೀಯರಿಗೆ ಇದಕ್ಕಿಂತ ಸಿಹಿಸುದ್ದಿ ಬೇಕಾ?

ಭಾರತದ ಎಲ್ಲ  ರಾಜ್ಯಗಳ  ಸಂಘ ಸಂಸ್ಥೆಗಳು ಹೃದಯವಂತಿಕೆ ಮೆರೆದಿದ್ದು ಭಾರತೀಯ ರಾಯಭಾರಿಯಾದ ಶ್ರೀ ಪಿ.ಕುಮರನ್ ಅವರ ಮಾರ್ಗದರ್ಶನದಲ್ಲಿ ದೇಣಿಗೆ ಸಂಗ್ರಹ ಅಭಿಯಾನ ನಡೆಯಿತು. ನವೆಂಬರ್ 24ರಂದು ಕತಾರ್‌ನಿಂ ಆಗಮಿಸಿದ್ದ ಪ್ರತಿನಿಧಿಗಳಾದ ICBF ಕಾರ್ಯದರ್ಶಿಯಾದರ್ ಮಹೇಶಗೌಡ ಧನ ಸಹಾಯದ ಚೆಕ್‌ ಹಸ್ತಾಂತರ ಮಾಡಿದರು.

ಬಹರೇನ್ ಕನ್ನಡ ಭವನಕ್ಕೆ ದೇವೇಗೌಡರಿಂದ ಶಿಲಾನ್ಯಾಸ

ಭಾರತೀಯ ಸಾಂಸ್ಕೃತಿಕ ಸಂಸ್ಥೆ ಅಧ್ಯಕ್ಷೆ ಮಿಲನ್ ಅರುಣ್ , ICBF ಮತ್ತು ಕರ್ನಾಟಕ ಸಂಘದ ಮಾಜಿ ಅಧ್ಯಕ್ಷ ಅರವಿಂದ್ ಪಾಟೀಲ್,ಕರ್ನಾಟಕ ಸಂಘದ ಉಪಾಧ್ಯಕ್ಷರಾದ ಶ್ರೀ ರವಿ ಶೆಟ್ಟಿ ಹಾಗೂ ಕರ್ನಾಟಕ ಸಂಘ ಕತಾರ್ ಮಾಜಿ ಉಪಾಧ್ಯಕ್ಷ ಹಾಗೂ ಕತಾರ್ ದಲ್ಲಿ ಕನ್ನಡ ಚಲನಚಿತ್ರಗಳ ವಿತರಕ ಸುಬ್ರಮಣ್ಯ ಹೆಬ್ಬಾಗಿಲು ಇವರೆಲ್ಲರೂ ಕರ್ನಾಟಕದ ಮುಖ್ಯಮಂತ್ರಿಗಳ ಪರಿಹಾರ ನಿಧಿಗೆ 15 ಲಕ್ಷ  ರೂ. ಚೆಕ್ ನೀಡಿದರು.ಮುಖ್ಯಮಂತ್ರಿ ಕುಮಾರಸ್ವಾಮಿಗೆ ಚೆಕ್ ಹಸ್ತಾಂತರ ಮಾಡಲಾಯಿತು.  ದೇಣಿಗೆ ಸ್ವೀಕರಿಸಿದ ಸಿಎಂ ಮಾತನಾಡಿ ಕತಾರ್ ಒಕ್ಕೂಟಕ್ಕೆ ಧನ್ಯವಾದ ಸಲ್ಲಿಸಿದರು.

ಅಂಬಿ, ಜಾಫರ್‌ ನಿಧನಕ್ಕೆ ಸಂತಾಪ: ಅಂಬರೀಶ್ ಅವರ ಅಕಾಲಿಕ ಮರಣ , ಬಸ್ ದುರ್ಘಟನೆ ಮತ್ತು ಹಿರಿಯ ನಾಯಕ ಜಾಫರ್ ಷರೀಫ್ ಅವರ ನಿಧನಕ್ಕೆ ಕತಾರ್ ಪ್ರತಿನಿಧಿಗಳು ಸಂತಾಪ ವ್ಯಕ್ತಪಡಿಸಿದರು.