ವಾಷಿಂಗ್ಟನ್(ಡಿ.12): ಕರ್ನಾಟಕದಲ್ಲಿ ಕನ್ನಡ ಬಳಕೆ ಕಡಿಮೆಯಾಗಿ ಇತರ ಭಾಷೆಗಳ ಅಧಿಪತ್ಯ ಹೆಚ್ಚಾಗುತ್ತಿದೆ ಎಂಬ ಕೂಗಿನ ನಡುವೆಯೇ ಅಮೆರಿಕಾದ ಶಾಲೆಯಲ್ಲಿ ಮೊದಲ ಬಾರಿಗೆ ವಿದೇಶಿ ಭಾಷೆಯಾಗಿ ಕನ್ನಡ ಕಲಿಯಲು ಅವಕಾಶ ನೀಡಲಾಗಿದೆ. ಇದು ಕನ್ನಡಿಗರು ಹಾಗೂ ಕರ್ನಾಟಕದ ಮಂದಿಗೆ ಹೆಮ್ಮೆ ಪಡುವಂತಹ ವಿಚಾರವಾಗಿದೆ.

ಕನ್ನಡದಲ್ಲೂ ಇನ್ನು ಎಂಜಿನಿಯರಿಂಗ್: ಐಐಟಿ, ಎನ್‌ಐಟಿಯಲ್ಲಿ ಮಾತೃಭಾಷೆಯಲ್ಲಿ ಶಿಕ್ಷಣ!

ಉತ್ತರ ಅಮೆರಿಕಾ ನಾರ್ತ್ ಕೆರೋಲಿನಾ ರಾಜ್ಯದ ರಾಜಧಾನಿ ರೇಲಿಗ್ ಭಾಗದ ಪ್ರಸಿದ್ದ ಶಾಲೆ ವೇಕ್ ಕೌಂಟಿ ಪಬ್ಲಿಕ್ ಸ್ಕೂಲ್ ಪ್ರೌಢಶಾಲಾ ವಿದ್ಯಾರ್ಥಿಗಳಿಗೆ ಕನ್ನಡವನ್ನು ವಿದೇಶೀ ಭಾಷೆಯಾಗಿ ಕಲಿಯಲು ಅವಕಾಶ ನೀಡಿದೆ.

ಅಲರ್: ಕನ್ನಡ ಪದಗಳ ಹುಡುಕಾಟಕ್ಕೊಂದು ಆನ್‌ಲೈನ್ ತಾಣ..!

ಅಮೆರಿಕಾದಲ್ಲಿ ಈ ಪ್ರೌಢಶಾಲೆಯಲ್ಲಿ ಕನ್ನಡವನ್ನು  ಕಲಿಸುವುದು ಗ್ರೇಡ್ ಪಾಯಿಂಟ್ ರಹಿತವೆಂದು ಅನುಮೋದಿಸಿದೆ. ಶಾಲೆಯ ಈ ನಿರ್ಧಾರಕ್ಕೆ ಎಲ್ಲೆಡೆಗಳಿಂದ ವ್ಯಾಪಕ ಪ್ರಶಂಸೆ ವ್ಯಕ್ತವಾಗುತ್ತಿದೆ. ಅಮೆರಿಕದಲ್ಲಿರುವ ಕನ್ನಡಿಗರಿಗೂ ಇದು ಖುಷಿ ಕೊಟ್ಟಿದೆ.