ಇದಕ್ಕೂ ಹಿಂದೆ ತಮ್ಮ ಪಾರ್ಸ್‌ಪೋರ್ಟ್‌ ಫೆäಟೋ ಟ್ವೀಟ್‌ ಮಾಡಿದ್ರು. ಜೊತೆಗೆ ‘ಅಂತೂ ಇಂತೂ 2020 ರಲ್ಲಿ ಪಾಸ್‌ಪೋರ್ಟ್‌ ಮೇಲೆ ಒಂದು ಸ್ಟಾಂಪ್‌ ಬಿತ್ತು’ ಅನ್ನೋ ಕನ್ನಡದ ಒಕ್ಕಣೆ ಇತ್ತು. ಏನಿದರ ಹಿಂದಿನ ಕಥೆ ಅಂತ ಮೇಘನಾಗೆ ಫೋನ್‌ ಹಚ್ಚಿದರೆ ಅವರು ಅಮೆರಿಕಾದಲ್ಲಿ ಸೂರ್ಯೋದಯ ನೋಡ್ತಾ ಇದ್ರು! ಯಾಕೆ, ಏನು, ಎತ್ತ ಅನ್ನೋದನ್ನು ಮೇಘನಾ ಹೇಳಿದ್ದು ಹೀಗೆ..

ಕೋವಿಡ್‌ ಟೈಮ್‌ನಲ್ಲಿ ಮೇಘನಾ ಗಾಂವ್ಕರ್‌ ಅಮೆರಿಕಾದಲ್ಲಿ! 

ಡಿಸ್ಟರ್ಬೆನ್ಸ್‌ನಿಂದ ಆಚೆ ಬರಬೇಕಿತ್ತು

ಯುಎಸ್‌ಎನಲ್ಲಿ ನನ್ನ ತಂಗಿ ಮನೆ ಇದೆ. ಅವಳು ಫ್ಯಾಮಿಲಿಯನ್ನು ಬಹಳ ಮಿಸ್‌ ಮಾಡ್ತಿದ್ಲು. ಹಾಗಾಗಿ ನಾನು ಹೊರಟು ಬಂದೆ. ಜೊತೆಗೆ ನಾನೀಗ ಪಿಎಚ್‌ಡಿ ಮಾಡ್ತಿದ್ದೀನಿ. ಬಹಳ ಸ್ಟಡೀ ಮಾಡೋದಿದೆ. ಅದಕ್ಕೆ ತಕ್ಕಂಥಾ ಪ್ರಶಾಂತ ವಾತಾವರಣ ಇಲ್ಲಿದೆ. ಬೆಂಗ್ಳೂರಲ್ಲಿ ತುಂಬ ಡಿಸ್ಟರ್ಬೆನ್ಸ್‌ ಇತ್ತು. ಓದೋದು ಕಷ್ಟಆಗ್ತಿತ್ತು.

 

ಕೋವಿಡ್‌ ಭಯದಲ್ಲಿ ಫ್ಲೈಟ್‌ ಫುಲ್‌ ಜನ

ನಾನೊಬ್ಳೇ ಬೆಂಗಳೂರಿಂದ ಅಮೆರಿಕಾಗೆ ಬಂದೆ. ಸುಮಾರು ಒಂಭತ್ತೂವರೆ ಗಂಟೆಗೂ ಹೆಚ್ಚು ಮಾಸ್ಕ್‌ ಹಾಕ್ಕೊಂಡೇ ಇದ್ದದ್ದು ಹೊಸ ಅನುಭವ. ಜೀವಮಾನದಲ್ಲಿ ಯಾವತ್ತೂ ಇಷ್ಟುಹೊತ್ತು ಮಾಸ್ಕ್‌ ಹಾಕ್ಕೊಂಡಿದ್ದಿಲ್ಲ. ಸುಮಾರು ಹೊತ್ತು ಒದ್ದಾಡಿದೆ, ಆಮೇಲೆ ಅಡ್ಜೆಸ್ಟ್‌ ಆಯ್ತು. ಮತ್ತೊಂದು ವಿಷಯ ಅಂದರೆ ಜನ ಕೋವಿಡ್‌ ಬಗ್ಗೆ ಅಂಥಾ ಭಯದಲ್ಲಿದ್ದ ಹಾಗೆ ಕಾಣಲಿಲ್ಲ. ಏರ್‌ಪೋರ್ಟ್‌ನಲ್ಲಿ ಎಂದಿನ ರಶ್‌ ಇತ್ತು. ಆದರೆ ಎಲ್ಲರೂ ಮಾಸ್ಕ್‌ ಹಾಕ್ಕೊಂಡಿದ್ರು ಅನ್ನೋದಷ್ಟೇ ವ್ಯತ್ಯಾಸ. ನಮ್ಮ ಫ್ಲೈಟ್‌ ಅಂತೂ ಫುಲ್‌ ಆಗಿತ್ತು. ಇನ್ನೊಂದು ತಿಂಗಳಮಟ್ಟಿಗಂತೂ ಅಮೆರಿಕಾದಿಂದ ಹೊರಡೋ ಯೋಚನೆ ಇಲ್ಲ. ಆಮೇಲೆ ಗೊತ್ತಿಲ್ಲ.

ಬರ್ತಿದೆ ಕರ್ವ-3; ಭಯ ಹುಟ್ಟಿಸುವ ಅವತಾರದಲ್ಲಿ ಮೇಘನಾ! 
 

ಶೂಟಿಂಗ್‌ ಕತೆ

ನಮ್ಮ ‘ಕರ್ವ 3’ ಟೀಂ ನವ್ರು ಒಂದು ನಿರ್ಧಾರಕ್ಕೆ ಬಂದಿದ್ದೀವಿ. ಥಿಯೇಟರ್‌ಗಳಲ್ಲಿ ಸಿನಿಮಾ ಪ್ರದರ್ಶನ ಶುರುವಾದ ಮೇಲೆ ಅದಕ್ಕೆ ಜನರ ಪ್ರತಿಕ್ರಿಯೆ ನೋಡ್ಕೊಂಡು ಶೂಟಿಂಗ್‌ಗೆ ಹೊರಡೋದು ಅಂತ. ಏಕೆಂದರೆ ಅಷ್ಟುಖರ್ಚು ಮಾಡಿ, ಸಿನಿಮಾ ಥಿಯೇಟರ್‌ನಲ್ಲಿ ಓಡಲಿಲ್ಲ ಅಂದರೆ ಅದು ಬಹಳ ದೊಡ್ಡ ನಷ್ಟ. ಅದಕ್ಕಿಂತಲೂ ಅಷ್ಟುಕಷ್ಟಪಟ್ಟು ಮಾಡಿದ ಸಿನಿಮಾ ಜನರನ್ನು ತಲುಪಿಲ್ಲ ಅಂದರೆ ನಮ್ಮ ಪ್ರಯತ್ನಗಳೆಲ್ಲ ನೀರಲ್ಲಿ ಹೋಮ ಮಾಡಿದ ಹಾಗಾಗುತ್ತೆ. ಹೀಗಾಗಿ ಸದ್ಯಕ್ಕೆ ಕಾದು ನೋಡುವ ತಂತ್ರಕ್ಕೆ ಬದ್ಧವಾಗಿದ್ದೇವೆ.