ಬೆಂಗಳೂರು[ಮಾ. 03]  ಬ್ರಿಟನ್  ಸ್ಥಳೀಯ ಸಂಸ್ಥೆಗಳಿಗೆ ನಡೆದ ಚುನಾವಣೆಯಲ್ಲಿ ಕನ್ನಡಿಗ ವೈದ್ಯ ಡಾ.ಕುಮಾರ್ ನಾಯ್ಕ್ ಜಯಭೇರಿ ಬಾರಿಸಿದ್ದಾರೆ.

ಬ್ರಿಟನ್​ನಲ್ಲಿ ಮೂಳೆ ತಜ್ಞರಾಗಿರುವ ಡಾ. ಕುಮಾರ ನಾಯ್ಕ್​ ಸ್ವಿಂಡನ್​ ಹೇಡನ್​ ವಿಕ್​ ಕ್ಷೇತ್ರದಲ್ಲಿ ಕನ್ಸರ್ವೇಟಿವ್​ ಪಕ್ಷದಿಂದ ಸ್ಪರ್ಧಿಸಿದ್ದರು. ಲೇಬರ್​ ಪಕ್ಷದ ಸಮೀಪ ಪ್ರತಿಸ್ಪರ್ಧಿಯನ್ನು ಸೋಲಿಸಿ ಗೆಲುವು ಕಂಡಿದ್ದಾರೆ.

ಎನ್‌ಆರ್‌ಐ ಕನ್ನಡಿಗರ ಸಾಹಸ 'ರತ್ನಮಂಜರಿ'

ಸ್ವಿಂಡನ್​ ವೆಸ್ಟಿಯಾ ಕ್ಷೇತ್ರದಿಂದ ಮರು ಆಯ್ಕೆ ಬಯಸಿ ಸ್ಪರ್ಧಿಸಿದ್ದ ಸುರೇಶ ಗಟ್ಟಾಪುರ ಕೂಡ ಮತ್ತೊಮ್ಮೆ ಗೆದ್ದು ಸ್ಥಳೀಯ ಆಡಳಿತ ಸಂಸ್ಥೆಯನ್ನು ಪ್ರವೇಶಿಸಿದ್ದಾರೆ. 

ಸ್ವಿಂಡನ್ ಹೇಡನ್ ವಿಕ್ ಕ್ಷೇತ್ರದಲ್ಲಿ ಕನ್ಸರ್ವೇಟಿವ್ ಪಕ್ಷದಿಂದ ಸ್ಪರ್ಧಿಸಿದ್ದ ಡಾ.ಕುಮಾರ್ ನಾಯ್ಕ್ ಲೇಬರ್ ಪಕ್ಷದ ಅಭ್ಯರ್ಥಿಯನ್ನು ಸೋಲಿಸಿ ಚುನಾವಣೆಯಲ್ಲಿ ಗೆಲುವು ಸಾಧಿಸಿದ್ದಾರೆ. ಚಿತ್ರದುರ್ಗದ ಹೊಳಲ್ಕೆರೆ ತಾಲೂಕಿನ ಕೆಂಚಾಪುರ ಗ್ರಾಮದ ಡಾ. ಕುಮಾರ್ ನಾಯ್ಕ್ ಮೂಳೆವೈದ್ಯರಾಗಿ ಸೇವೆ ಸಲ್ಲಿಸುತ್ತಿದ್ದಾರೆ.ಮತ್ತೊಬ್ಬ ಕನ್ನಡಿಗ ಸ್ವಿಂಡನ್ ವೆಸ್ಟಿಯಾ ಕ್ಷೇತ್ರದಿಂದ ಮರು ಆಯ್ಕೆ ಬಯಸಿದ್ದ ಸುರೇಶ ಗಟ್ಟಾಪುರ ಸಹ ಮತ್ತೊಮ್ಮೆ ಗೆದ್ದಿದ್ದಾರೆ. ಕುಮಾರನಾಯ್ಕರ ತಂದೆ, ತಾಯಿ ದಾವಣಗೆರೆಯಲ್ಲಿ ವಾಸ ಮಾಡುತ್ತಿದ್ದಾರೆ.