ಕತಾರ್(ಮೇ 1)  ಕೊರೋನಾ ವೈರಸ್ ಪ್ರಪಂಚದ ಯಾವ ರಾಷ್ಟ್ರವನ್ನು ಬಿಟ್ಟಿಲ್ಲ. ಕತಾರ್ ಸಹ ಕೊರೋನಾದಿಂದ ಬಳಲುತ್ತಿದ್ದು ಭಾರತೀಯ ಮೂಲದವರಿಗೆ ಭಾರತೀಯ ರಾಯಭಾರ ಕಚೇರಿ ನೆರವು ನೀಡುತ್ತಲೇ ಬಂದಿದೆ.

ಐಸಿಬಿಎಫ್, ಐಸಿಸಿ,  ಮತ್ತು ಇಂಡಿಯನ್ ಡಾಕ್ಟರ್ಸ್ ಕ್ಲಬ್ ಒಂದಾಗಿ ಸೇರಿ ಕೆಲಸ ಮಾಡುತ್ತಿವೆ. 7 ಸಾವವಿರಕ್ಕೂ ಅಧೀಕ ಮಂದಿಗೆ ನೆರವು ನೀಡಲಾಗಿದೆ. ಅಗತ್ಯ ಔಷಧ, ಆಹಾರ ಮತ್ತು ಅತ್ಯವಶ್ಯಕ ವಸ್ತು ನೀಡುವ ಕೆಲಸ ಮಾಡಿಕೊಂಡು ಬಂದಿದ್ದು ಮನೆಯಲ್ಲೇ ಇರಿ ಎಂಬ ಮನವಿ ಮಾಡಿಕೊಳ್ಳುತ್ತಿದೆ.

NRIಗಳೊಂದಿಗೆ ಮಾತನಾಡಿದ ಸಿಎಂ ಹೇಳಿದ್ದು ಒಂದೇ ಮಾತು

ವಾಟ್ರಾಪ್ ಗ್ರೂಪ್,  ಇಂಡಿಯನ್ ಡಾಕ್ಟರ್ಸ್ ಕ್ಲಬ್ ನ್ನು  ಡಾ. ಮೋಹನ್ ಥಾಮಸ್  ಮುನ್ನಡೆಸುತ್ತಿದ್ದು ವಿಶೇಷ ಕಾಳಜಿ ವಹಿಸಿಕೊಂಡಿದ್ದಾರೆ.  ಭಾರತೀಯ ಮೂಲದವರು ಎಂಬ ದಾಖಲೆ ಇದ್ದರೆ ಸಾಕು ನೆರವಿಗೆ ನಿಲ್ಲಲಾಗುತ್ತಿದೆ. ನೂರಾರು ಜನರಿಗೆ ಔಷಧ ಮನೆ ಬಾಗಿಲಿಗೆ ತಲುಪಿಸಲಾಗಿದೆ.

ಭಾರತೀಯರರ ಹಿತ ಕಾಪಾಡುವ ಕೆಲಸ ಮಾಡಿಕೊಂಡು ಬಂದಿದ್ದು ಮೆಡಿಕಲ್ ಬಿಲ್ ನೀಡಲು ಸಾಧ್ಯವಿಲ್ಲದವರಿಗೂ ಈ ಕೊರೋನಾ ಸಂಕಷ್ಟದ ಸಂದರ್ಭದಲ್ಲಿ ನೆರವಾಗುತ್ತಿದೆ. ವಾಟ್ಸಪ್ ಗ್ರೂಪ್ ಮೂಲಕ ಕಾರ್ಯನಿರ್ವಹಿಸುತ್ತಿದ್ದು ನೆರವು ಪಡೆದುಕೊಂಡವರು ಅನಂತ ಧನ್ಯವಾದ ಸಲ್ಲಿಸಿದ್ದಾರೆ.

ಅನಿವಾಸಿ ಭಾರತೀಯ  ಸಂಘಟನೆಗಳು ಮತ್ತು ಭಾರತೀಯ ರಾಯಭಾರ ಕಚೇರಿ ನಿರಂತರವಾಗಿ ಹಿತ ಕಾಪಾಡುವ ಕೆಲಸ  ಮಾಡಿಕೊಂಡು ಬಂದಿದೆ.  ಕತಾರ್ ನಲ್ಲಿ ವಾಸಿಸುತ್ತಿರುವ ಭಾರತೀಯ ಮೂಲದವರು ಸಂಕಷ್ಟದಲ್ಲಿದ್ದೆ ದಿನದ 24 ಗಂಟೆ 0097455667569, 0097455647502 ಮತ್ತು 0097433484669 ದೂರವಾಣಿಗೆ ಸಂಪರ್ಕಿಸಬಹುದು.