ಕುವೈತ್(ಜೂ. 16)  ಕಿಚ್ಚ ಸುದೀಪ್ ಗಲ್ಫ್ ಕನ್ನಡಿಗರೊಂದಿಗೆ ಮಾತನಾಡಲಿದ್ದಾರೆ.  ಜೂನ್  19  ಶುಕ್ರವಾರ ಸುದೀಪ್ ಸಂವಾದ ನಡೆಸಲಿದ್ದಾರೆ.  ಕಿಚ್ಚನ ಮಾತುಕತೆ ಗಲ್ಫ್ ಕನ್ನಡಿಗರ ಜತೆ ಕಾರ್ಯಕ್ರಮ ನಿಗದಿಯಾಗಿದೆ.

ಹೃದಯ ಚಕ್ರವರ್ತಿ; ಶಾಲಾ ಬಾಲಕಿ ಫೀಸ್ ಕಟ್ಟಿದ ಸುದೀಪ್ 

ಶುಕ್ರವಾರ ಸಂಜೆ  5  ಗಂಟೆಗೆ ಬಹರೇನ್, ಕತಾರ್, ಕುವೈತ್ ಕನ್ನಡಿಗರೊಂದಿಗೆ ಮಾತುಕತೆ ನಡೆಸಲಿದ್ದಾರೆ.  6 ಗಂಟೆಗೆ ಯುಎಇ, ಓಮನ್ ಕನ್ನಡಿಗರೊಂದಿಗೆ ಮಾತನಾಡಲಿದ್ದಾರೆ.

ಜಗತ್ತಿನಾದಂತ್ಯ ಕಿಚ್ಚ ಸುದೀಪ್ ದೊಡ್ಡ ಅಭಿಮಾನಿ ಬಳಗ ಹೊಂದಿದ್ದು ಈ ಮಾತುಕತೆಯನ್ನು ನಾವೆಲ್ಲ ಎದುರು ನೋಡುತ್ತಿದ್ದೇವೆ ಎಂದು ಗಲ್ಫ್ ಕನ್ನಡಿಗರು ತಿಳಿಸಿದ್ದಾರೆ.

"