ಎರಡು ವರ್ಷ ಪ್ರೀತಿಸಿ, ನಿಶ್ಚಿತಾರ್ಥ ಮಾಡಿಕೊಂಡು ದೈಹಿಕವಾಗಿ ಬಳಸಿಕೊಂಡು ಮದುವೆಯಾಗದೆ ವಂಚಿಸಿದ ಪ್ರಭಾವಿ ರಾಜಕಾರಣಿ ಪುತ್ರನ ವಿರುದ್ಧ ಯುವತಿಯೊಬ್ಬರು ಮಾಧ್ಯಮಗಳ ಮುಂದೆ ಆರೋಪ ಮಾಡಿದ್ದಾರೆ. ಬೀದರ್ ಪೊಲೀಸರು ದೂರು ದಾಖಲಿಸಿಕೊಳ್ಳಲು ಹಿಂದೇಟು ಹಾಕಿದ್ದಾರೆ ಎಂದು ಯುವತಿ ಆರೋಪಿಸಿದ್ದಾರೆ.
ಬೀದರ್ (ಜು.21): ನಾವು ಬಡವರಿದ್ದೇವೆ, ಎರಡು ವರ್ಷ ಲವ್ ಮಾಡಿ, ಮದುವೆ ಮಾಡಿಕೊಳ್ಳುವುದಾಗಿ ಅದ್ಧೂರಿಯಾಗಿ ಎಂಗೇಜ್ಮೆಂಟ್ ಮಾಡಿಕೊಂಡು, ನನ್ನನ್ನು ದೈಹಿಕವಾಗಿ ಬಳಸಿಕೊಂಡಿರುವ ಪ್ರಭಾವಿ ರಾಜಕಾರಣಿ ಪುತ್ರ ಮದುವೆಯಾಗದೇ ವಂಚನೆ ಮಾಡಿದ್ದಾರೆ. ಮದುವೆ ಮಾಡಿಕೊಳ್ಳಲು ಒತ್ತಾಯಿಸಿದಾಗ ಕೈ ಕೊಯ್ದಿದ್ದಾರೆ, ತಲೆಗೆ ಹೊಡೆದಿದ್ದಾರೆ ಎಂದು ಫೋಟೋ ಸಮೇತ ಮಾಧ್ಯಮಗಳ ಮುಂದೆ ಬಂದು ಸಂತ್ರಸ್ತೆ ಅಳಲು ತೋಡಿಕೊಂಡಿದ್ದಾರೆ.
ಈ ಕುರಿತು ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಸೋಷಿಯಲ್ ಮೀಡಿಯಾದಲ್ಲಿ ನಮ್ಮಿಬ್ಬರ ಪರಿಚಯವಾಗಿತ್ತು. ಪರಿಚರ ಪ್ರೀತಿಯಾಯ್ತು, ನಾಲ್ಕು ತಿಂಗಳು ನಾನು ಅವರ ಜೊತೆಯಲ್ಲೆ ಇದ್ದೆ, ಪುಣೆಯಲ್ಲಿ ನಾನು ಅವರನ್ನ ಭೇಟಿ ಮಾಡಿದ್ದೆ, ಆ ಸಮಯದಲ್ಲೆ ನಮ್ಮಿಬ್ಬರ ಮೊಬೈಲ್ ನಂಬರ್ ಎಕ್ಸ್ಚೇಂಜ್ ಆಗಿದ್ದು, ನನ್ನ ಬಳಿ ನಾಲ್ಕು ಮೊಬೈಲ್ ಇದ್ದು ಒಂದು ಮೊಬೈಲ್ ಈಗಲೂ ಅವರ ಬಳಿಯೇ ಇದೆ. ನಾವು ಎರಡು ವರ್ಷಗಳ ಕಾಲ ಪ್ರೀತಿಸಿದ್ದೇವು.
ಪ್ರಭಾವಿ ರಾಜಕಾರಣಿ ಪುತ್ರನ ಜೊತೆ ನಿಶ್ಚಿತಾರ್ಥ ಆಗಿತ್ತು,ನವೆಂಬರ್ 13 ರಂದು ನನಗೆ ನೋಡಲು ಬಂದಿದ್ದರು ಎಲ್ಲರೂ ಖುಷಿಯಿಂದಲೇ ಇದ್ದರು. ಎಂಗೇಜ್ಮೆಂಟ್ ನಲ್ಲಿ 50 ತೋಲೆ ಬಂಗಾರ ಮತ್ತು ವಾಹನ ಕೇಳಿದ್ದಾರೆ.ಇರೊ ಬರೊ ಎಲ್ಲಾ ಆಸ್ತಿ ಮಾರಾಟ ಮಾಡಿ ಅವರು ಕೇಳಿದ್ದ ವಾಹನ ಖರೀದಿಸಿ ಮಾಡಿ ಮನೆಯವರು ಕೊಟ್ಟಿದ್ದರು.ಬೆಂಗಳೂರಿನ ಲಾಡ್ಜ್ ಒಂದರಲ್ಲಿ ಮದುವೆಯಾಗುತ್ತೇನೆಂದು ದೈಹಿಕವಾಗಿ ಬಳಸೊಕೊಂಡಿದ್ದಾನೆ . ಮರುದಿನ ಬೆಂಗಳೂರಿನಿಂದ ಭಯಗೊಂಡು ಊರಿಗೆ ವಾಪಸಾಗಿದ್ದೆ.
ಊರಲ್ಲಿ ಜಾತ್ರೆ ಇದ್ದ ಟೈಮ್ ನಲ್ಲಿನಾನು ಮದುವೆ ಬಗ್ಗೆ ಕೇಳಿದ್ದೆ. ಆಗ ಖೂಬಾ ಸೋತರೆ ಗ್ರ್ಯಾಂಡ್ ಆಗಿ ಮದುವೆ ಆಗೋಣ ಎಂದಿದ್ದ.ನಂತರ ಮದುವೆಗಾಗಿ ರಸ್ತೆ ಮಾಡುತ್ತಿದ್ದೇನೆ ರಸ್ತೆ ಆಗಲಿ ಅಂದ್ರೂ ಆವಾಗಲೂ ನಿಂತೆವು. ಮೋದಿ ಅಮಿತ್ ಶಾಗೆ ಮದುವೆಗೆ ಕರೆಯಬೇಕು ಮಳೆಗಾಲದಲ್ಲಿ ಮದುವೆ ಬೇಡ ಅಂದ್ರು ಹೀಗೆ ಒಂದಾದ ಮೇಲೆ ಒಂದು ನೆಪ ಹೇಳಿ ಮದುವೆ ಮುಂದೂಡಿದ್ದರೂ. ಅವರು ದೊಡ್ಡವರು ನಾವು ಬಡವರು ಎಂದು ನಾವು ಹೇಳಿದ್ದನ್ನ ಕೇಳಿ ಸುಮ್ಮನಿದ್ದೆವೆ.
ಮದುವೆ ಆಗು ಎಂದು ಒತ್ತಡ ಹಾಕಿದ್ದಕ್ಕೆ ನನ್ನ ಮೇಲೆ ಪ್ರಭಾವಿ ರಾಜಕಾರಣಿ ಪುತ್ರ ನ.1 2024ರಂದು ಹಲ್ಲೆ ಮಾಡಿದ್ದ.ಕೈ ಕಟ್ ಮಾಡಿದ್ದುತಲೆ ಮೇಲೂ ಹಲ್ಲೆ ಮಾಡಿದ್ದಾನೆಂದು ಸಂತ್ರಸ್ತೆ ಪೊಟೊ ತೋರಿಸಿದ್ದಾಳೆ.ಹೊಕ್ರಾಣಾ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿಕೊಳ್ಳಲಿಲ್ಲಾ.ಪಿಎಸ್‌ಐ ಅವರು ದೂರು ದಾಖಲಿಸಿಕೊಳ್ಳಲು ಹಿಂದೇಟು ಹಾಕಿದ್ರು.ಹಾಗಾಗಿ ಮಹಿಳಾ ಆಯೋಗದ ಮೊರೆ ಹೋಗಿದ್ದೇವು. ಎಂದು ಬೀದರ್ ಪೊಲೀಸರ ವಿರುದ್ದಸಂತ್ರಸ್ತ ಯುವತಿ ಅಸಮಧಾನ ತೊಡಿಕೊಂಡಿದ್ದಾರೆ. ಆ ರಾಜಕಾರಣಿ ನನ್ನ ತೇಜೋವಧೆ ಮಾಡುತ್ತಿದ್ದಾರೆ. ಅವರು ಹೆಚ್ಚು ಪ್ರಭಾವಿಯಾಗಿದ್ದು ನನ್ನ ಮೇಲೆ ಯಾವುದಾದರೂ ಕೇಸ್ ಹಾಕಬಹದು ಎಂದು ಯುವತಿ ತಮ್ಮ ಅಳಲನ್ನ ತೊಡಿಕೊಂಡಿದ್ದಾರೆ.


