ನನ್ನ ಮಗ ಯಾವುದೇ ತಪ್ಪು ಮಾಡಿಲ್ಲ. ಅದ್ಧೂರಿಯಾಗಿ ನೆಂಟಸ್ತನ ಕಾರ್ಯಕ್ರಮ ಮಾಡಿದ್ದೇವೆ ಎಂದು ಶಾಸಕ ಪ್ರಭು ಚವ್ಹಾಣ್ ಹೇಳಿದರು.
ಬೀದರ್ (ಜು.21): ನನ್ನ ಮಗ ಯಾವುದೇ ತಪ್ಪು ಮಾಡಿಲ್ಲ. ಅದ್ಧೂರಿಯಾಗಿ ನೆಂಟಸ್ತನ ಕಾರ್ಯಕ್ರಮ ಮಾಡಿದ್ದೇವೆ. ಆದರೆ ಯುವತಿಗೆ ಮತ್ತೊಬ್ಬ ಯುವಕನೊಂದಿಗೆ ಅಕ್ರಮ ಸಂಬಂಧ ಇರುವುದನ್ನು ಅರಿತು ಮಕ್ಕಳ ಭವಿಷ್ಯದ ಹಿತದೃಷ್ಟಿಯಿಂದ ಎರಡೂ ಕುಟುಂಬಸ್ಥರು ಸೇರಿ ರಾಜಿ ಸಂಧಾನ ಮೂಲಕ ಸಂಬಂಧ ಸ್ಥಗಿತಗೊಳಿಸಿದ 9 ತಿಂಗಳ ನಂತರ ಷಡ್ಯಂತ್ರ ರಚಿಸಿ ಮಾಜಿ ಸಂಸದ ಭಗವಂತ ಖೂಬಾ ಮತ್ತು ಅವರ ಟೀಮ್ ಕೆಲಸ ಮಾಡುತ್ತಿದೆ ಎಂದು ಶಾಸಕ ಪ್ರಭು ಚವ್ಹಾಣ್ ಆರೋಪಿಸಿದರು.
ಭಾನುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಮಾಜಿ ಕೇಂದ್ರ ಸಚಿವ ಸ್ವಪಕ್ಷೀಯರೇ ಆದ ಭಗವಂತ ಖೂಬಾ ಅವರು 2014ರಿಂದ ಸತತವಾಗಿ ಇಂಥ ಕೆಲಸ ಮಾಡುತ್ತಿದ್ದಾರೆ ಎಂದು ಕೆಲವು ವಿಡಿಯೋ ಮತ್ತು ಫೋಟೋಗಳನ್ನು ಪ್ರದರ್ಶಿಸಿ ಖೂಬಾ ವಿರುದ್ಧ ಅಸಮಾಧಾನ ಹೊರ ಹಾಕಿದರು.
ಶಾಸಕ ಪ್ರಭು ಚವ್ಹಾಣ್ ಪುತ್ರನ ವಿರುದ್ಧ ರೇ*ಪ್ ಕೇಸ್ ದಾಖಲು: ಮಹಾರಾಷ್ಟ್ರ ಯುವತಿಯೊಂದಿಗೆ ಅತ್ಯಾ*ಚಾರ ಮಾಡಿರುವುದಾಗಿ ಮಾಜಿ ಸಚಿವ, ಶಾಸಕ ಪ್ರಭು ಚವ್ಹಾಣ್ ಪುತ್ರ ಪ್ರತೀಕ್ ಚವ್ಹಾಣ್ ವಿರುದ್ಧ ಬೀದರ್‌ನ ಮಹಿಳಾ ಪೊಲೀಸ್ ಠಾಣೆಯಲ್ಲಿ ಭಾನುವಾರ ಲೈಂಗಿಕ ದೌರ್ಜನ್ಯ, ಬೆದರಿಕೆ ಪ್ರಕರಣ ದಾಖಲಾಗಿದೆ. ಪ್ರತೀಕ್ ಚವ್ಹಾಣ್ ಮದುವೆಯಾಗುವದಾಗಿ ನಂಬಿಸಿ ಲೈಂಗಿಕ ದೌರ್ಜನ್ಯ ಎಸಗಿರುವ ಕುರಿತು ಯುವತಿ ನೀಡಿದ ದೂರಿನ ಹಿನ್ನೆಲೆಯಲ್ಲಿ ಬಿಎನ್‌ಎಸ್ ಕಲಂ 376/2/n, 506, 366 ಹಾಗೂ 324 ಅಡಿಯಲ್ಲಿ ಪ್ರಕರಣ ದಾಖಲಾಗಿದೆ.
ಆಡಿಯೋ ಕ್ಲಿಪ್ ಪ್ರದರ್ಶನ: ಪ್ರತೀಕ್ ಚವ್ಹಾಣ್ ಜೊತೆ ನಿಶ್ಚಿತಾರ್ಥ ನಂತರವೂ ಮಹಾರಾಷ್ಟ್ರದ ಯುವತಿ ತನ್ನ ಪ್ರಿಯಕರನ ಜೊತೆ ನಿರಂತರವಾಗಿ ಮೊಬೈಲ್‌ನಲ್ಲಿ ಮಾತನಾಡಿರುವುದು. ವಿಡಿಯೋ ಕಾಲ್‌ನಲ್ಲಿ ಗಂಡನೆಂದು ಸಂಬೋಧಿಸಿ ಚಾಟ್ ಮಾಡಿರುವುದು ಅಲ್ಲದೆ ಪ್ರತೀಕ್ ಚವ್ಹಾಣ್ ಜತೆ ಮಾತನಾಡಿ, ನಾನು ತಪ್ಪು ಮಾಡಿದ್ದೇನೆ ಇನ್ನೊಂದು ಬಾರಿ ಇಂಥ ಕೆಲಸ ಮಾಡೋದಿಲ್ಲ ಎಂಬ ಮರಾಠಿ ಭಾಷೆಯ ಸಂಭಾಷಣೆಯ ಆಡಿಯೊ ಕ್ಲಿಪ್‌ವೊಂದು ಚವ್ಹಾಣ್ ಸುದ್ದಿಗೊಷ್ಠಿಯಲ್ಲಿ ಪ್ರದರ್ಶನ ಮಾಡಿದರು.
