ಹೀಗಿತ್ತು ಜೋಷ್: ದಾಳಿಗೆ ಹೊರಟಾಗ ಎಲ್ಲಿದ್ರು ಪ್ರಧಾನಿ ಮೋದಿ?
ಪಾಕಿಸ್ತಾನದ ಮೇಲೆ ದಾಳಿಗೆ ಹೊರಟಾಗ ಪ್ರದಾನಿ ಎಲ್ಲಿದ್ರು ಗೊತ್ತಾ?| ಮಧ್ಯರಾತ್ರಿ 3.30ಕ್ಕೂ ತಮ್ಮ ಕಚೇರಿಯಲ್ಲಿಯೇ ಇದ್ದರು ಪ್ರಧಾನಿ ಮೋದಿ| ದೆಹಲಿಯ ಸೌತ್ ಬ್ಲಾಕ್ನ ಪ್ರಧಾನಮಂತ್ರಿ ಕಚೇರಿಯಲ್ಲಿದ್ದ ಪ್ರಧಾನಿ ಮೋದಿ| ಮೋದಿಗೆ ಸಾಥ್ ನೀಡಿದ್ದ ರಾಷ್ಟ್ರೀಯ ಭದ್ರತಾ ಸಲಹೆಗಾರ ಅಜಿತ್ ಧೋವಲ್| ವಾಯುಸೇನಾ ಮುಖ್ಯಸ್ಥರು ಆಪರೇಷನ್ ಸಂಪೂರ್ಣ ಉಸ್ತುವಾರಿ|
ನವದೆಹಲಿ(ಫೆ.26): ಪುಲ್ವಾಮಾ ದಾಳಿಗೆ ಪ್ರತೀಕಾರವಾಗಿ ಭಾರತೀಯ ವಾಯುಸೇನೆ ಪಾಕ್ ನೆಲದಲ್ಲಿ ಸರ್ಜಿಕಲ್ ಸ್ಟ್ರೈಕ್ ಮಾಡಿದೆ. ಮಧ್ಯರಾತ್ರಿ ನಡೆದ ಈ ಕಾರ್ಯಾಚರಣೆಯ ಪಿನ್ ಟು ಪಿನ್ ಮಾಹಿತಿಯನ್ನು ಪ್ರಧಾನಿ ನರೇಂದ್ರ ಮೋದಿ ಪಡೆದಿದ್ದರು.
ಪ್ರಧಾನಿ ನರೇಂದ್ರ ಮೋದಿ, ಮಧ್ಯರಾತ್ರಿ 3-30ರವರೆಗೂ ಪ್ರಧಾನಿ ಕಚೇರಿಯಲ್ಲೇ ಇದ್ದು, ದಾಳಿಯ ಸಂಪೂರ್ಣ ಮಾಹಿತಿ ಪಡೆದಿದ್ದಾರೆ. ದಾಳಿಯ ಕ್ಷಣ ಕ್ಷಣದ ಮಾಹಿತಿ ಪಡೆಯುತ್ತಿದ್ದ ಮೋದಿ, ದಾಳಿ ಯಶಸ್ವಿಯಾದ ನಂತರವಷ್ಟೇ ಪ್ರಧಾನಿ ಕಚೇರಿಯಿಂದ ತೆರಳಿದರು.
ಪಾಕ್ ವಿರುದ್ಧದ ದಾಳಿಗೆ ಎಲ್ಲೆಡೆ ಸಂಭ್ರಮ
ಈ ವೇಳೆ ಮೋದಿ ಅವರೊಂದಿಗೆ ರಾಷ್ಟ್ರೀಯ ಭದ್ರತಾ ಸಲಹೆಗಾರ ಅಜಿತ್ ಧೋಔಲ್ ಕೂಡ ಜೊತೆಗಿದ್ದು, ವಾಯುಸೇನೆ ಮುಖ್ಯಸ್ಥರು ಆಪರೇಷನ್ ಮೇಲುಸ್ತುವಾರಿ ವಹಿಸಿದ್ದರು.