ಮುಂಬಬೈ(ಫೆ.26): ಪುಲ್ವಾಮಾ ದಾಳಿಯಿಂದ ಸೇಡು ತೀರಿಸಿಕೊಳ್ಳಲು ಕಾಯುತ್ತಿದ್ದ ಭಾರತ, ಇಂದು(ಫೆ.26) ಬೆಳಗ್ಗೆ ಪಾಕಿಸ್ತಾನ ಮೇಲೆ ಬಾಂಬ್ ದಾಳಿ ನಡೆಸಿದೆ. ಇಂಡೋ-ಪಾಕ್ ಗಡಿ ದಾಟಿದ ಭಾರತೀಯ ವಾಯುಸೇನೆ ಭಯೋತ್ಪಾದಕ ಕ್ಯಾಂಪ್ ಮೇಲೆ ದಾಳಿ ನಡೆಸಿದೆ. ಭಾರತದ ದಾಳಿಗೆ 200ಕ್ಕೂ ಹೆಚ್ಚಿನ ಉಗ್ರರು ಹತ್ಯೆಯಾಗಿರುವ ಕುರಿತು ಪಾಕಿಸ್ತಾನ ಮಾಧ್ಯಮಗಳು ವರದಿ ಮಾಡಿದೆ.

ಇದನ್ನೂ ಓದಿ: ಪಾಕ್ ಮೇಲೆ ಬಾಂಬ್ ದಾಳಿ: ಸೆಹ್ವಾಗ್ ಟ್ವೀಟ್ ಅದ್ಭುತ!

ವಾಯುಸೇನೆ ಯಶಸ್ವಿ ಕಾರ್ಯಚರಣೆ ನಡೆಸಿದ ಬೆನ್ನಲ್ಲೇ ಭಾರದಲ್ಲಿ ಸಂಭ್ರಮಾಚರಣೆ ಶುರುವಾಗಿದೆ. ವಾಯುಸೇನೆ ದಾಳಿಯನ್ನ ಟೀಂ ಇಂಡಿಯಾದ ಹಾಲಿ ಹಾಗೂ ಮಾಜಿ ಕ್ರಿಕೆಟಿಗರು ಶ್ಲಾಘಿಸಿದ್ದಾರೆ. ಮಾಸ್ಟರ್ ಬ್ಲಾಸ್ಟರ್ ಸಚಿನ್ ತೆಂಡೂಲ್ಕರ್ ಸೇರಿದಂತೆ ದಿಗ್ಗಜ ಕ್ರಿಕೆಟಿಗರು ಟ್ವೀಟ್ ಮೂಲಕ ಸಂತಸ ವ್ಯಕ್ತಪಡಿಸಿದ್ದಾರೆ.

 

 

 

;