ನವದೆಹಲಿ[ಫೆ.26]: 40 ದಶಕಗಳಲ್ಲಿ ಇದೇ ಮೊದಲ ಬಾರಿ ಗಡಿ ನಿಯಂತ್ರಣಾ ರೇಖೆ ದಾಟಿದ ಭಾರತೀಯ ವಾಯು ಸೇನೆಯು, ಪುಲ್ವಾಮಾ ದಾಳಿಗೆ ಸೇಡು ತೀರಿಸಿದೆ.   ಮಂಗಳವಾರ ಮುಂಜಾನೆ ಸುಮಾರು 03.30ಕ್ಕೆ ನಡೆದ 21 ನಿಮಿಷಗಳ ಈ ದಾಳಿಯಲ್ಲಿ ಭಾರತೀಯ ವಾಯು ಸೇನೆಯ 12 ಮಿರಾಜ್ 2000 ಫೈಟರ್ ಜೆಟ್ ಗಳು ಖೈಬರ್ ಪ್ರಾಂತ್ಯದಲ್ಲಿರುವ ಬಾಲಾಕೋಟ್ ನಲ್ಲಿರುವ ಹಲವಾರು ಉಗ್ರ ನೆಲೆಗಳನ್ನು ಯಶಸ್ವಿಯಾಗಿ ಧ್ವಂಸಗೊಳಿಸಿದೆ. ಹಾಗಾದರೆ ಈ ದಾಳಿಯಲ್ಲಿ ಪ್ರಮುಖ ಪಾತ್ರ ವಹಿಸಿದ ಭಾರತೀಯ ವಾಯುಸೇನೆಯ ಲೋಹದ ಹಕ್ಕಿ ಮಿರಾಜ್ 2000 ಸಾಮರ್ಥ್ಯವೇನು? ಇದರ ವೈಶಿಷ್ಟ್ಯವೇನು? ಇಲ್ಲಿದೆ ವಿವರ

ನಮ್ಮ ಮೌನವನ್ನು ಹೇಡಿತನ ಎಂದರಿತ ಕೌರವ: ಸೇನೆಯ ಟ್ವೀಟ್ ನೋಡವ್ವ!

-ಮಿರಾಜ್ 2000 ಭಾರತೀಯ ವಾಯುಸೇನೆಯ ಅತ್ಯಂತ ಬಲಶಾಲಿ ಯುದ್ಧ ವಿಮಾನಗಳಲ್ಲಿ ಒಂದು. 'ಡಸ್ಸಾಲ್ಟ್ ಮಿರಾಜ್ ಏವಿಯೇಷನ್' ನಿರ್ಮಿಸಿದ ಈ ಯುದ್ಧ ವಿಮಾನವನ್ನು ಭಾರತವು 1980 ರ ದಶಕದಲ್ಲಿ ಫ್ರಾನ್ಸ್ ನಿಂದ ಖರೀದಿಸಿತ್ತು. ಈ ಯುದ್ಧ ವಿಮಾನದ ನಿರ್ವಹಣೆ ಹಿಂದುಸ್ತಾನ್​ ಏರೋನಾಟಿಕ್ಸ್ ಲಿಮಿಟೆಡ್​(HAL​) ನೋಡಿಕೊಳ್ಳುತ್ತಿದೆ. 

-1982ರಲ್ಲಿ ಪಾಕಿಸ್ತಾನವು ಅಮೆರಿಕದಿಂದ AF​​-16 ವಿಮಾನಗಳನ್ನು ಖರೀದಿಸಿದ್ದ ಸಂದರ್ಭದಲ್ಲಿ, ಭಾರತವು ಒಂದು ಸೀಟಿನ 36 ಮಿರಾಜ್​-2000 ಮತ್ತು ಎರಡು ಸೀಟುಗಳುಳ್ಳ 4 ಮಿರಾಜ್​-2000 ಫೈಟರ್ ಜೆಟ್ ಖರೀದಿಸುವ ಒಪ್ಪಂದಕ್ಕೆ ಸಹಿ ಹಾಕಿತ್ತು.

ಇದು ಮೋದಿ ಭಾರತ: ನುಗ್ಗಿ ಹೊಡೆಯುವ ಛಾತಿ ಇದೆ ಎಂದ ಕೇಂದ್ರ ಸಚಿವ!

-1999ರಲ್ಲಿ ನಡೆದಿದ್ದ ಕಾರ್ಗಿಲ್​ ಯುದ್ಧದಲ್ಲಿ ಮಿರಾಜ್​-2000 ಪ್ರಮುಖ ಪಾತ್ರ ವಹಿಸಿದೆ. ಈ ಯುದ್ಧದಲ್ಲಿ ಮಿರಾಜ್ ಶತ್ರುಗಳನ್ನು ಗುರಿಯಾಗಿಸಿ ಲೇಸರ್-ನಿರ್ದೇಶಿತ ಬಾಂಬುಗಳನ್ನು ಸಿಡಿಸಿ ಶತ್ರುಗಳ ಬಂಕರ್ ನಾಶ ಮಾಡಿತು. ಹೀಗಾಗಿ ಭಾರತವು 2004ರಲ್ಲಿ ಹೆಚ್ಚುವರಿಯಾಗಿ 10 ಮಿರಾಜ್​-2000 ವಿಮಾನ ಖರೀದಿಗೆ ಒಪ್ಪಂದಕ್ಕೆ ಸಹಿ ಹಾಕಿತು. ಕಳೆದ 30 ವರ್ಷಗಳ ಅವಧಿಯಲ್ಲಿ 'ಡಸ್ಸಾಲ್ಟ್ ಮಿರಾಜ್ ಏವಿಯೇಷನ್' 580 ಮಿರಾಜ್​-2000 ವಿಮಾನಗಳನ್ನು ನಿರ್ಮಾಣ ಮಾಡಿದೆ.

- ಇಂಡಿಯನ್ ಏರ್ ಫೋರ್ಸ್ ಬಳಿ ಒಟ್ಟು  50 'ಮಿರಾಜ್-2000' ಯುದ್ಧ ವಿಮಾನಗಳಿವೆ. ಪುಲ್ವಾಮ ಆತ್ಮಾಹುತಿ ದಾಳಿಗೆ ಪ್ರತೀಕಾರಕ್ಕೆ ವಾಯುಸೇನೆಯು 12 ವಿಮಾನಗಳನ್ನು ಬಳಸಿದೆ. ಈ ಹಿಂದೆ ಭಾರತವು ತಾನು ಖರೀದಿಸಿದ್ದ ವಿಮಾನವನ್ನು ಉನ್ನತೀಕರಣಕ್ಕಾಗಿ ಫ್ರಾನ್ಸ್ ನ  'ಡಸ್ಸಾಲ್ಟ್ ಮಿರಾಜ್ ಏವಿಯೇಷನ್' ನೊಂದಿಗೆ ಒಪ್ಪಂದಕ್ಕೆ ಸಹಿ ಹಾಕಿತ್ತು. ಈ ಮೂಲಕ ವಿಮಾನದಲ್ಲಿ ಕೆಲವೊಂದುನವೀಕರಣ ಮಾಡಿ ಹಿಂದೆಂದಿಗಿಂತ ಹೆಚ್ಚು ಶಕ್ತಿಶಾಲಿಯನ್ನಾಗಿ ಮಾಡಿತು.

ನಾಲ್ಕು ದಶಕದ ನಂತರ LOC ದಾಟಿದ ಭಾರತದ ಲೋಹದ ಹಕ್ಕಿಗಳು!

- ವಿಶ್ವದ ಅತ್ಯುತ್ತಮ ಫೈಟರ್ ಜೆಟ್ ಗಳ ಪಟ್ಟಿಯಲ್ಲಿ, 'ಮಿರಾಜ್ -2000' 10ನೇ ಸ್ಥಾನ ಪಡೆದಿದೆ. ಈ ಯುದ್ಧ ವಿಮಾನವು 1978 ಮಾರ್ಚ್ 10 ರಂದು ತನ್ನ ಮೊದಲ ಹಾರಾಟ ನಡೆಸಿತು. ಫ್ರಾನ್ಸ್ ಕಂಪೆನಿಯಿಂದ ನಿರ್ಮಾಣಗೊಂಡ ಮಿರಾಜ್-2000, ಯಾವುದೇ ಅಡೆ ತಡೆಗಳಿಲ್ಲದೆ ಎಲ್ಲಾ ರೀತಿಯ ವಾತಾವರಣದಲ್ಲಿ ಹಾರುವ ಸಾಮರ್ಥ್ಯವನ್ನು ಹೊಂದಿದೆ.

-ರೆಕ್ಕೆ ಸೇರಿ ಒಟ್ಟು 91.3 ಮೀಟರ್ ಉದ್ದ ಹಾಗೂ 7,500 ಕೆ.ಜಿ ತೂಕವಿರುವ ಈ ಲೋಹದ ಹಕ್ಕಿ ಬರೋಬ್ಬರಿ 17,000 ಕೆಜಿ ಭಾರವನ್ನು ಹೊರುವ ಸಾಮರ್ಥ್ಯ ಹೊಂದಿದೆ. 2,336 ಕಿ.ಮೀ ವೇಗದಲ್ಲಿ ಸಾಗುವ ಶಕ್ತಿ ಇರುವ ಈ ಯುದ್ಧ ವಿಮಾನವು, ಪ್ಲೈ-ಬೈ-ವೈರ್​ ಫ್ಲೈಟ್ ಕಂಟ್ರೋಲ್​ ವ್ಯವಸ್ಥೆ ಹೊಂದಿದೆ. 

- ಈ ವಿಮಾನವು ನೆಲದ ಮೇಲೆ ಬೃಹತ್ ಪ್ರಮಾಣದ ಬಾಂಬ್ ದಾಳಿ ಮಾಡುವುದರೊಂದಿಗೆ, ಗಾಳಿಯಲ್ಲಿ ಇತರ ವಿಮಾನಗಳನ್ನು ಗುರಿಪಡಿಸುವ ಸಾಮರ್ಥ್ಯವನ್ನೂ ಹೊಂದಿದೆ. ತುರ್ತು ಪರಿಸ್ಥಿತಿಯಲ್ಲಿ ಇದನ್ನು ರಾಷ್ಟ್ರೀಯ ಹೆದ್ದಾರಿಯಲ್ಲಿ ಬಳಸಬಹುದಾಗಿದೆ.

ಪುಲ್ವಾಮಾ ಸೇಡು: LOC ದಾಟಿದ ಭಾರತೀಯ ವಾಯುಸೇನೆಯಿಂದ ಉಗ್ರರ ಕ್ಯಾಂಪ್ ಉಡೀಸ್!

- ಇದರ ವ್ಯಾಪ್ತಿಯು 1480 ಕಿ.ಮೀ. ಅಂದರೆ 1480 ಕಿ.ಮೀ ದೂರದಲ್ಲಿರುವ ಶತ್ರು ತಳಹದಿಗಳನ್ನು ಸ್ಫೋಟಿಸಬಹುದು. ಡಸ್ಸಾಲ್ಟ್ 'ಮಿರಾಜ್ -2000' ಯು ಕ್ಷಿಪಣಿಗಳು ಮತ್ತು ಶಸ್ತ್ರಾಸ್ತ್ರಗಳನ್ನು ಬಳಸಿ ವಾಯು ಮಾರ್ಗದ ಮೂಲಕ ಮೇಲ್ಮೈಯನ್ನು ಆಕ್ರಮಣ ಮಾಡುವ ಸಾಮರ್ಥ್ಯವನ್ನು ಹೊಂದಿದೆ, ಮತ್ತು ಲೇಸರ್ ನಿರ್ದೇಶಿತ ಬಾಂಬ್ ದಾಳಿ ನಡೆಸುವ ಸಾಮರ್ಥ್ಯವವೂ ಇದಕ್ಕಿದೆ.

"