ಅತೀ ದೊಡ್ಡ ರೈಲ್ವೇಯಾದರೂ ಭಾರತದ ಈ ರಾಜ್ಯದಲ್ಲಿಲ್ಲ ಒಂದೇ ಒಂದು ರೈಲು ನಿಲ್ದಾಣ!
ಭಾರತೀಯ ರೈಲ್ವೇ ವಿಶ್ವದಲ್ಲೇ 4ನೇ ಅತೀ ದೊಡ್ಡ ರೈಲು ನೆಟ್‌ವರ್ಕ್ ಹೊಂದಿದೆ. ಆದರೆ ಭಾರತದ ಈ ರಾಜ್ಯದಲ್ಲಿ ಒಂದೇ ಒಂದು ರೈಲು ನಿಲ್ದಾಣವಿಲ್ಲ. ಈ ರಾಜ್ಯಕ್ಕೆ ರೈಲು ಸಂಪರ್ಕವೂ ಇಲ್ಲ.
ವಿಶ್ವದ ಅತೀ ದೊಡ್ಡ ರೈಲ್ ನೆಟ್‌ವರ್ಕ್ ಪೈಕಿ ಭಾರತ ನಾಲ್ಕನೇ ಸ್ಥಾನದಲ್ಲಿದೆ. ಪ್ರತಿ ದಿನ ಕೋಟಿ ಜನರು ರೈಲಿನ ಮೂಲಕ ಪ್ರಯಾಣ ಮಾಡುತ್ತಾರೆ. ಭಾರತದ ಮೂಲೆ ಮೂಲೆಗಳಿಗೆ ರೈಲು ಸಂಪರ್ಕವಿದೆ. ಅತೀ ಕಡಿಮೆ ದರದಲ್ಲಿ ಪ್ರಯಾಣದ ಅನುಕೂಲ ರೈಲ್ವೇ ನೀಡುತ್ತಿದೆ. ಇದೀಗ ವಂದೇ ಭಾರತ್ ಸೇರಿದಂತೆ ಅತ್ಯಾಧುನಿಕ ರೈಲು ಸೇವೆಗಳನ್ನು ನೀಡುತ್ತಿದೆ.
ಜಮ್ಮು ಮತ್ತು ಕಾಶ್ಮೀರದಿಂದ ಹಿಡಿದು ಕನ್ಯಾಕುಮಾರಿವರೆಗೆ ರೈಲು ಸೇವೆ ಇದೆ. ಎಲ್ಲಾ ರಾಜ್ಯದಲ್ಲಿ ರೈಲು ನಿಲ್ದಾಣವಿದೆ. ಆದರೆ ದೇಶದ ಒಂದು ರಾಜ್ಯದಲ್ಲಿ ಒಂದೇ ಒಂದು ರೈಲು ನಿಲ್ದಾಣವಿಲ್ಲ. ಈ ರಾಜ್ಯ ಸಿಕ್ಕಿಮ್. ಹೌದು, ಭಾರತದ ಸಿಕ್ಕಿಮ್ ರಾಜ್ಯದಲ್ಲಿ ರೈಲು ಹಳಿಗಳಿಲ್ಲ. ರೈಲು ನಿಲ್ದಾಣಗಳಿಲ್ಲ.
ಹಿಮಾಲಯ ವಲಯದ ಈ ರಾಜ್ಯದಲ್ಲಿ ಬೆಟ್ಟ ಗುಡ್ಡ ಪರ್ವತಗಳೇ ಹೆಚ್ಚು. ಭೌಗೋಳಿಕವಾಗಿ ಇಲ್ಲಿ ರೈಲು ಸೇವೆ ನೀಡುವುದು ಅತ್ಯಂತ ಸವಾಲಾಗಿದೆ. ಹೀಗಾಗಿ ಇಲ್ಲಿ ರೈಲು ನಿಲ್ದಾಣಗಳೇ ಇಲ್ಲ. ಸಿಕ್ಕಿಮ್ ದೇಶದ ರೈಲು ನಿಲ್ದಾಣಗಳಿಲ್ಲದ ರಾಜ್ಯ ಎಂದೇ ಗುರುತಿಸಿಕೊಂಡಿದೆ. ಹೀಗಾಗಿ ಸಿಕ್ಕಿಂ ಜನತೆ ರಸ್ತೆ ಮಾರ್ಗವನ್ನೇ ಹೆಚ್ಚಾಗಿ ಅವಲಂಬಿಸಿದ್ದಾರೆ.
ಸಿಕ್ಕಿಂ ರಾಜ್ಯದಲ್ಲಿ ಬಹುತೇಕ ಎಲ್ಲಾ ಭಾಗಕ್ಕೆ ರಸ್ತೆ ಮಾರ್ಗವಿದೆ. ಸಿಕ್ಕಿಂನಲ್ಲಿ ರೈಲು ಸೇವೆ ಕೊರತೆಗೆ ಕೇವಲ ಭೌಗೋಳಿಕ ಕಾರಣ ಮಾತ್ರವಲ್ಲ. ಸಿಕ್ಕಿಂ ಅಂತಾರಾಷ್ಟ್ರೀಯ ಗಡಿ ಹೊಂದಿದೆ. ಹೀಗಾಗಿ ಸುರಕ್ಷತಾ ವಿಚಾರವೂ ಇಲ್ಲಿ ಮುಖ್ಯವಾಗಿದೆ. ಹೀಗಾಗಿ ಹೊಸ ರೈಲು ಸೇವೆಗಳ ಆರಂಭಕ್ಕೂ ಅಡ್ಡಿಯಾಗಿದೆ. ಸಿಕ್ಕಿಂನಲ್ಲಿ ರೈಲು ಸೇವೆ ನೀಡುವುದು ಅತ್ಯಂತ ದುಬಾರಿ ವೆಚ್ಚದ ಕಾಮಗಾರಿಯಾಗಲಿದೆ.
ಸಿಕ್ಕಿಂನಲ್ಲಿ ರಸ್ತೆ ಮಾರ್ಗ, ಕೇಬಲ್ ಕಾರು, ವಿಮಾನ ಸೇವೆ ಸೇರಿದಂತೆ ಇತರ ಸಾರಿಗೆ ಸಂಪರ್ಕ ಮಾರ್ಗಗಳಿವೆ. 1975ರಲ್ಲಿ ಸಿಕ್ಕಿಂ ಭಾರತದ 22ನೇ ರಾಜ್ಯವಾಗಿ ರೂಪುಗೊಂಡಿತು. ಸಿಕ್ಕಿಂ ರೀತಿ ಡಾರ್ಜಲಿಂಗ್ ಹಾಗೂ ಊಟಿ ಪರ್ವತ ಶ್ರೇಣಿ ಪ್ರದೇಶವಾಗಿದ್ದರೂ ಬ್ರಿಟೀಷರು ಈ ಭಾಗದಲ್ಲಿ ರೈಲು ಸೇವೆ ನೀಡಿದ್ದರು. ಆದರೆ ಸಿಕ್ಕಿಂನಲ್ಲಿ ರೈಲು ಸೇವೆ ನೀಡುವ ಸಾಹಸವನ್ನು ಬ್ರಿಟಿಷರು ಮಾಡಲಿಲ್ಲ.