ಕೆಂಪೇಗೌಡ ಏರ್ಪೋಟ್ನಲ್ಲಿ ಪ್ರಯಾಣಿಕನ ಬ್ಯಾಗ್‌ನಲ್ಲಿ ಇಲಿ, ಹಲ್ಲಿ, ಆಮೆ ಪತ್ತೆ: ಇಬ್ಬರ ಬಂಧನ!
ವಿದೇಶದಿಂದ ಅಕ್ರಮವಾಗಿ ಸಾಗಾಟ ಮಾಡುತ್ತಿದ್ದ ಪ್ರಾಣಿಗಳನ್ನು ಕೆಂಪೇಗೌಡ ಏರ್‌ಪೋರ್ಟ್‌ನಲ್ಲಿ ಕಸ್ಟಮ್ಸ್ ಅಧಿಕಾರಿಗಳು ವಶಕ್ಕೆ ಪಡೆದು, ಇಬ್ಬರು ಸ್ಮಗ್ಲರ್‌ಗಳನ್ನು ಅಧಿಕಾರಿಗಳು ಬಂಧಿಸಿದ್ದಾರೆ.
ಬೆಂಗಳೂರು (ನ.16): ವಿದೇಶದಿಂದ ಅಕ್ರಮವಾಗಿ ಸಾಗಾಟ ಮಾಡುತ್ತಿದ್ದ ಪ್ರಾಣಿಗಳನ್ನು ಕೆಂಪೇಗೌಡ ಏರ್‌ಪೋರ್ಟ್‌ನಲ್ಲಿ ಕಸ್ಟಮ್ಸ್ ಅಧಿಕಾರಿಗಳು ವಶಕ್ಕೆ ಪಡೆದು, ಇಬ್ಬರು ಸ್ಮಗ್ಲರ್‌ಗಳನ್ನು ಅಧಿಕಾರಿಗಳು ಬಂಧಿಸಿದ್ದಾರೆ. ವಿಮಾನ ನಿಲ್ದಾಣದಲ್ಲಿ ಅಧಿಕಾರಿಗಳಿಂದ ಪ್ರಯಾಣಿಕರ ಪರಿಶೀಲನೆ ವೇಳೆ ಇಬ್ಬರು ಪ್ರಯಾಣಿಕರ ಟ್ರಾಲಿ ಬ್ಯಾಗ್‌ನಲ್ಲಿ ಪ್ರಾಣಿಗಳ ಶಬ್ದ ಕೇಳಿ ಬಂದಿದೆ. ಈ ವೇಳೆ ಟ್ರಾಲಿ ಬ್ಯಾಗ್ ಓಪನ್ ಮಾಡಿದಾಗ ಪ್ಲಾಸ್ಟಿಕ್ ಬಾಕ್ಸ್ ಕಂಡು ಬಂದಿದೆ. ಪ್ಲಾಸ್ಟಿಕ್ ಓಪನ್ ಮಾಡಿದಾಗ ಪ್ರಾಣಿಗಳಿರುವುದು ಪತ್ತೆಯಾಗಿದೆ.
ಬಳಿಕ ವಿಚಾರಣೆ ನಡೆಸಿದಾಗ ಕೌಲಾಲಂಪುರದಿಂದ ಇಬ್ಬರು ಪ್ರಯಾಣಿಕರು ಆಗಮಿಸಿದ್ದು, MHO192 ವಿಮಾನದಲ್ಲಿ ಅಕ್ರಮವಾಗಿ ಪ್ರಾಣಿಗಳ ಸಾಗಾಟ ಪತ್ತೆಯಾಗಿದೆ. ಸದ್ಯ ಅಕ್ರಮ ಪ್ರಾಣಿಗಳ ಸಾಗಟ ನಿಷೇಧ ಕಾಯ್ದೆಯಡಿ ಪ್ರಕರಣ ದಾಖಲಾಗಿದ್ದು, ಇಬ್ಬರು ಪ್ರಯಾಣಿಕರನ್ನ ಕಸ್ಟಮ್ಸ್ ಅಧಿಕಾರಿಗಳು ವಶಕ್ಕೆ ಪಡೆದು ತನಿಖೆ ಮುಂದುವರೆಸಿದ್ದಾರೆ. ಸದ್ಯ ಎರಡು ಟ್ರ್ಯಾಲಿ ಬ್ಯಾಗ್‌ನಲ್ಲಿ ಒಟ್ಟು 40 ವನ್ಯ ಜೀವಿಗಳು ಪತ್ತೆಯಾಗಿದ್ದು, ಒಂದು ಟ್ರ್ಯಾಲಿ ಬ್ಯಾಗ್‌ನಲ್ಲಿ 24 ಪ್ರಾಣಿಗಳು ಮತ್ತೊಂದು ಬ್ಯಾಗ್‌ನಲ್ಲಿ 16 ಪ್ರಾಣಿಗಳು ಪತ್ತೆಯಾಗಿವೆ.
ನೆಲಮಂಗಲ-ತುಮಕೂರಿನವರೆಗೆ 6 ಪಥದ ರಾಷ್ಟ್ರೀಯ ಹೆದ್ದಾರಿ ನಿರ್ಮಾಣ: ಕೇಂದ್ರ ಸಚಿವ ಸೋಮಣ್ಣ
ಅಲ್ಡಬ್ರಾ, ದೈತ್ಯ ಆಮೆ, ಕೆಂಪು ಕಾಲಿನ ಆಮೆ, ಮಣಿ ಹಲ್ಲಿಗಳು, ರೈನೋಸರಸ್ ಇಗುವಾನಾಗಳು, ಆಲ್ಬಿನೋ ಬಾವಲಿಗಳು ಒಂದು ಬ್ಯಾಗ್‌ನಲ್ಲಿ, ಇನ್ನೊಂದು ಬ್ಯಾಗ್‌ನಲ್ಲಿ ಲುಟಿನೋ ಇಗುವನಾ, ಅಮೆರಿಕನ್ ಮೊಸಳೆ ಮರಿಗಳು ಸೇರಿದಂತೆ ಹಲವು ಪ್ರಾಣಿಗಳು ಸಿಕ್ಕಿವೆ. ಸದ್ಯ ಮಲೇಷ್ಯಾದ ಕೌಲಾಲಂಪುರದಿಂದ ಆರೋಪಿಗಳು ವಿಮಾನದಲ್ಲಿ ಬಂದಿದ್ದರು. ಕಸ್ಟಮ್ಸ್ ಆ್ಯಕ್ಟ್ 1962 ಸೆಕ್ಷನ್ 110 ರ ಅಡಿಯಲ್ಲಿ ವಶಪಡಿಸಿಕೊಂಡ ಅಧಿಕಾರಿಗಳು, ಇಬ್ಬರು ಆರೋಪಿಗಳನ್ನ ಬಂಧಿಸಿ ನ್ಯಾಯಾಲಯಕ್ಕೆ ಹಾಜರುಪಡಿಸಿದ್ದಾರೆ. ಇನ್ನು 15 ದಿನಗಳ ಕಾಲ ಆರೋಪಿಗಳನ್ನು ನ್ಯಾಯಾಂಗ ಬಂಧನಕ್ಕೆ ನ್ಯಾಯಾಲಯ ಒಪ್ಪಿಸಿದೆ.