ಲಂಡನ್[ಫೆ.04] ಭಾರತದ ವಿವಿಧ ಬ್ಯಾಂಕ್‌ಗಳಿಗೆ ಸಾವಿರಾರು ಕೋಟಿ ರೂ. ವಂಚಿಸಿ ವಿದೇಶಕ್ಕೆ ಪರಾರಿಯಾಗಿರುವ ಮದ್ಯದ ದೊರೆ ವಿಜಯ್ ಮಲ್ಯ ಗಡಿಪಾರಿಗೆ ಇಂಗ್ಲೆಂಡ್ ಅಸ್ತು ಎಂದಿದೆ. ಆದರೆ ಮಲ್ಯ ಮೂರನೇ ಅಂಪೈರ್‌ಗೆ ಮನವಿ ಸಲ್ಲಿಸಲು ಅವಕಾಶವೊಂದು ಹಾಗೆ ಉಳಿದುಕೊಂಡಿದೆ.

ಮೋದಿಗೆ ರಾಜತಾಂತ್ರಿಕ ಗೆಲುವು ಸಿಕ್ಕಿದ್ದರೂ ಮಲ್ಯರನ್ನು ಭಾರತಕ್ಕೆ ಕರೆತರುವುದು ಅಷ್ಟು ಸುಲಭವಾದ ಕೆಲಸ ಅಲ್ಲ.  14 ದಿನದ ಒಳಗಾಗಿ ಲಂಡನ್ ಹೈ ಕೋರ್ಟ್‌ಗೆ ಆದೇಶ ಪ್ರಶ್ನೆ ಮಾಡಿ ಮಲ್ಯ ಮನವಿ ಸಲ್ಲಿಸಬಹುದು. ಒಂದು ವೇಳೆ ಲಂಡನ್ ಕೋರ್ಟ್ ನಲ್ಲಿ ಈ ಆದೇಶಕ್ಕೆ ತಡೆ ಸಿಕ್ಕರೆ ಮಲ್ಯ ಮತ್ತೆ ಸೇಫ್ ಆಗುತ್ತಾರೆ.

ಮದ್ಯದ ದೊರೆ ಗಡಿಪಾರಿಗೆ ಬ್ರಿಟನ್ ಸರ್ಕಾರ ಅಸ್ತು, 'ವೆಲ್ ಕಮ್' ಮಲ್ಯ

ಭಾರತದ ವಿವಿಧ ಬ್ಯಾಂಕ್‌ಗಳಿಗೆ 9 ಸಾವಿರ  ಕೋಟಿಗೂ ಅಧಿಕ ಹಣ ವಂಚಿಸಿ ಪರಾರಿಯಾಗಿದ್ದ ಮಲ್ಯ ಆಗಾಗ ಕ್ರಿಕೆಟ್ ಪಂದ್ಯಗಳ ವೇಳೆ ಕಾಣಿಸಿಕೊಳ್ಳುತ್ತಿದ್ದರು. ರಾಜತಾಂತ್ರಿಕ ಮಾರ್ಗದಲ್ಲಿ ಮಲ್ಯರನ್ನು ವಾಪಸ್ ಕರೆತರಲು ಭಾರತ ಯಶಸ್ವಿ ಆಗಿದ್ದರೂ ಇನ್ನೊಂದು ಆಯ್ಕೆ ಹಾಗೆ ಉಳಿದಿದೆ.