Asianet Suvarna News Asianet Suvarna News

ಮದ್ಯದ ದೊರೆ ಗಡಿಪಾರಿಗೆ ಬ್ರಿಟನ್ ಸರ್ಕಾರ ಅಸ್ತು, 'ವೆಲ್ ಕಮ್' ಮಲ್ಯ

ಭಾರತಕ್ಕೆ ರಾಜತಾಂತ್ರಿಕ ಗೆಲುವು! ಉದ್ಯಮಿ ವಿಜಯ್ ಮಲ್ಯ ಗಡಿಪಾರಿಗೆ ಇಂಗ್ಲೆಂಡ್ ಅಸ್ತು! ಲಂಡನ್ ನಿಂದ ವಿಜಯ್ ಮಲ್ಯ ಗಡಿಪಾರಿಗೆ ಒಪ್ಪಿಗೆ! ಗಡಿಪಾರು ಮಾಡಲು ಸಹಿ ಹಾಕಿದ ಬ್ರಿಟನ್ ಸಚಿವಾಲಯ 

The UK Home Secretary has formally signed the extradition order for Vijay Mallya
Author
Bengaluru, First Published Feb 4, 2019, 9:46 PM IST

ಲಂಡನ್, [ಫೆ.04]  ಭಾರತದ ವಿವಿಧ ಬ್ಯಾಂಕ್‌ಗಳಿಗೆ ಸಾವಿರಾರು ಕೋಟಿ ರೂ. ವಂಚಿಸಿ ವಿದೇಶಕ್ಕೆ ಪರಾರಿಯಾಗಿರುವ ಮದ್ಯದ ದೊರೆ ವಿಜಯ್ ಮಲ್ಯ ಗಡಿಪಾರಿಗೆ ಇಂಗ್ಲೆಂಡ್ ಅಸ್ತು ಎಂದಿದೆ.

ವಿಜಯ್ ಮಲ್ಯ ಗಡಿಪಾರು ಮಾಡಲು ಬ್ರಿಟನ್ ಸಚಿವಾಲಯ ಒಪ್ಪಿಗೆ ಸೂಚಿಸಿದೆ. ಈ ಮೂಲಕ ಮೋದಿಗೆ ರಾಜತಾಂತ್ರಿಕ ಗೆಲುವು ಸಿಕ್ಕಿದಂತಾಗಿದೆ.

ಈ ಹಿಂದೆ ಮಲ್ಯ ಗಡಿಪಾರಿಗೆ ಲಂಡನ್‌ನ ವೆಸ್ಟ್ ಮಿನಿಸ್ಟರ್ ಕೋರ್ಟ್ ಒಪ್ಪಿಗೆ ನೀಡಿತ್ತು. ಅದಾದ ಬಳಿಕ ಆದೇಶವನ್ನು, ಬ್ರಿಟನ್ ಸರ್ಕಾರದ ಗೃಹ ಸಚಿವಾಲಯ​ದ ಒಪ್ಪಿಗೆಗೆ ಕಳುಹಿಸಲಾಗಿತ್ತು. ಇದೀಗ ಬ್ರಿಟನ್ ಸಚಿವಾಲಯವು ಕೂಡ ಮಲ್ಯ ಗಡಿಪಾರಿಗೆ ಅಸ್ತು ಎಂದಿದ್ದು ಭಾರತಕ್ಕೆ ರಾಜತಾಂತ್ರಿಕ ಗೆಲುವು ಸಿಕ್ಕಿದೆ.

ಭಾರತದ ವಿವಿಧ ಬ್ಯಾಂಕ್‌ಗಳಿಗೆ ವಿಜಯ್ ಮಲ್ಯ ಒಟ್ಟು 9 ಸಾವಿರ ಕೋಟಿ ರೂ. ಸಾಲ ನೀಡಬೇಕಿದ್ದು, ಇದಕ್ಕೂ ಮೊದಲೇ ಮಲ್ಯ ಗೌಪ್ಯವಾಗಿ ಲಂಡನ್‌ಗೆ ಪರಾರಿಯಾಗಿದ್ದರು.
 

Follow Us:
Download App:
  • android
  • ios