ಬೆಂಗಳೂರು (ಸೆ. 01): ಮತದಾರರ ಪಟ್ಟಿಪರಿಷ್ಕರಣೆ ಅಭಿಯಾನವು ಭಾನುವಾರದಿಂದ ಆರಂಭವಾಗಲಿದ್ದು, 2020 ರ ಜ.1ಕ್ಕೆ 18 ವರ್ಷ ತುಂಬುವವರು ಮತದಾರರ ಪಟ್ಟಿಯಲ್ಲಿ ತಮ್ಮ ಹೆಸರನ್ನು ನೋಂದಾಯಿಸಿಕೊಳ್ಳಲು ಅವಕಾಶ ಇದೆ ಎಂದು ರಾಜ್ಯ ಮುಖ್ಯ ಚುನಾವಣಾಧಿಕಾರಿ ಸಂಜೀವ್‌ ಕುಮಾರ್‌ ತಿಳಿಸಿದ್ದಾರೆ.

ಚುನಾವಣಾ ಆಯೋಗದ ಕಚೇರಿಯಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, 18 ವರ್ಷ ತುಂಬಿದವರು ಮತದಾರರ ಪಟ್ಟಿಗೆ ಹೊಸದಾಗಿ ಹೆಸರು ಸೇರ್ಪಡೆ ಮಾಡಬಹುದಾಗಿದೆ. 2020ರ ಜ.1ರವರೆಗೆ ಮತದಾರರ ಪಟ್ಟಿಯಲ್ಲಿ ಸೇರ್ಪಡೆಗೆ ಅವಕಾಶವಿದೆ.

ಮತದಾರರ ಪಟ್ಟಿಗೆ ಹೆಸರು ಸೇರ್ಪಡೆ, ಡಿಲೀಟ್, ತಿದ್ದುಪಡಿಗೆ ಅವಕಾಶ

ಜ.8ರಂದು ಅಂತಿಮ ಮತದಾರರ ಪಟ್ಟಿಯನ್ನು ಪ್ರಕಟಿಸಲಾಗುವುದು. ಅಲ್ಲದೇ, ಅಕ್ಟೋಬರ್‌ 15ರವರೆಗೆ ಹೆಸರು ತಿದ್ದುಪಡಿ, ಲೋಪದೋಷಗಳನ್ನು ಸರಿಪಡಿಸಿಕೊಳ್ಳಲು ಅವಕಾಶ ನೀಡಲಾಗಿದೆ. ಆಧಾರ್‌ ಕಾರ್ಡ್‌, ಚಾಲನಾ ಪರವಾನಗಿ, ಪಾಸ್‌ಪೋರ್ಟ್‌ ಸೇರಿದಂತೆ ಇತರೆ ದಾಖಲೆಗಳನ್ನು ಸಲ್ಲಿಸಿ ಲೋಪದೋಷಗಳನ್ನು ಸರಿಪಡಿಸಿಕೊಳ್ಳಬಹುದಾಗಿದೆ ಎಂದು ಹೇಳಿದರು.

ಮತದಾರರ ಪಟ್ಟಿಪರಿಷ್ಕರಣೆ ವೇಳೆ ರಾಜಕೀಯ ಪಕ್ಷಗಳ ಪಾತ್ರ ಬಹಳ ಮುಖ್ಯವಾಗಿರುತ್ತದೆ. ರಾಜಕೀಯ ಪಕ್ಷಗಳು ತಮ್ಮ ಪಕ್ಷದ ಬೂತ್‌ ಏಜೆಂಟ್‌ಗಳನ್ನು ನಿಯೋಜಿಸಿ ಮತದಾರರ ಪಟ್ಟಿಯ ಪರಿಷ್ಕರಣೆ ಮಾಡಲು ಅಧಿಕಾರಿಗಳಿಗೆ ಸಹಕರಿಸಬೇಕು ಎಂದರು.

ಸೆ.1ರಿಂದ ಸೆ.30ರವರೆಗೆ ಬೂತ್‌ಮಟ್ಟದ ಚುನಾವಣಾಧಿಕಾರಿಗಳು ಮನೆ ಮನೆಗೆ ತೆರಳಿ ಮತದಾರರ ಮಾಹಿತಿಯನ್ನು ಕ್ರೋಢೀಕರಿಸಲಿದ್ದಾರೆ. ಅ.15ರಿಂದ ನ.30ವರೆಗೆ ಆಕ್ಷೇಪಣೆ ಸಲ್ಲಿಕೆ ಮಾಡಬಹುದಾಗಿದೆ. ಮತದಾರರ ಪಟ್ಟಿಪರಿಷ್ಕರಣೆಯ ವಿಶೇಷ ಅಭಿಯಾನವು ನ. 2 ಮತ್ತು 3 ಹಾಗೂ ನ.9 ಮತ್ತು 10ರಂದು ನಡೆಯಲಿದೆ. ಡಿ.12ರ ವೇಳೆಗೆ ಆಕ್ಷೇಪಣಾ ಅರ್ಜಿಗಳನ್ನು ವಿಲೇವಾರಿ ಮಾಡಲಾಗುತ್ತದೆ.

ಮತದಾರರ ಪಟ್ಟಿಯಲ್ಲಿ ಹೆಸರು ಸೇರ್ಪಡೆ ಮಾಡುವುದು, ಲೋಪದೋಷಗಳನ್ನು ಸರಿಪಡಿಸಲು ಚುನಾವಣಾಧಿಕಾರಿಗಳಿಗೆ ಅರ್ಜಿ ಸಲ್ಲಿಸುವ ಜತೆಗೆ ನಾಗರಿಕ ಸೇವಾ ಕೇಂದ್ರಗಳನ್ನು ಆರಂಭಿಸಲಾಗಿದ್ದು, ರಾಜ್ಯದಲ್ಲಿ 6151 ಕೇಂದ್ರಗಳಿವೆ.

ವೋಟರ್‌ ಐಡಿ ಇಲ್ವಾ? ಈ 11 ದಾಖಲೆಗಳಲ್ಲೊಂದು ಸಾಕು

ಇದಲ್ಲದೇ, ಬಾಪೂಜಿ ಕೇಂದ್ರ ಮತ್ತು ಅಟಲ್‌ ಜನಸ್ನೇಹಿ ಕೇಂದ್ರದಲ್ಲಿಯೂ ಅರ್ಜಿ ಸಲ್ಲಿಸಬಹುದು. ಬೆಂಗಳೂರು ಒನ್‌ನಲ್ಲಿಯೂ ವ್ಯವಸ್ಥೆ ಮಾಡುವ ಚಿಂತನೆ ನಡೆಸಲಾಗಿದ್ದು, ಮಾತುಕತೆ ಬಳಿಕ ಅಂತಿಮಗೊಳಿಸಲಾಗುವುದು ಎಂದು ಮಾಹಿತಿ ನೀಡಿದರು.

ಮತ ಪಟ್ಟಿಯಿಂದ ಹೆಸರು ತೆಗೆಸಲು ಅರ್ಜಿ ಕೊಟ್ಟರೆ ಮನೆಗೆ ಭಿತ್ತಿ ಪತ್ರ!

ಮತದಾರರ ಪಟ್ಟಿಯಿಂದ ಹೆಸರು ತೆಗೆದು ಹಾಕುವುದು ಮೊದಲಿನಂತೆ ಇನ್ನು ಮುಂದೆ ಸುಲಭವಲ್ಲ. ಸಾರ್ವಜನಿಕರು ಕಠಿಣ ಕ್ರಮಗಳನ್ನು ಅನುಸರಿಸಬೇಕಾಗಿದೆ ಎಂದು ರಾಜ್ಯ ಮುಖ್ಯ ಚುನಾವಣಾಧಿಕಾರಿ ಸಂಜೀವ್‌ ಕುಮಾರ್‌ ಹೇಳಿದ್ದಾರೆ. ಸದ್ಯದ ಪರಿಸ್ಥಿತಿಯಲ್ಲಿ ಮತದಾರರು ಮತದಾರರ ಪಟ್ಟಿಯಿಂದ ಹೆಸರು ತೆಗೆದು ಹಾಕಲು ಫಾರಂ ನಂ.7 ನೀಡಿದರೆ ಸಾಕಾಗಿತ್ತು. ಆದರೆ, ಪಟ್ಟಿಯಿಂದ ಹೆಸರು ತೆಗೆದುಹಾಕುವಲ್ಲಿ ಲೋಪದೋಷಗಳು ಆಗುತ್ತಿರುವ ಬಗ್ಗೆ ಹಲವು ದೂರುಗಳು ಬಂದಿರುವ ಕಾರಣ ಕಠಿಣ ಕ್ರಮ ಕೈಗೊಳ್ಳಲು ಆಯೋಗವು ಮುಂದಾಗಿದೆ.

ಇನ್ನು ಮುಂದೆ ಮತದಾರರ ಪಟ್ಟಿಯಿಂದ ಹೆಸರು ತೆಗೆದು ಹಾಕಲು ಫಾರಂ ನಂ.7 ಅರ್ಜಿ ನೀಡಿದ ಬಳಿಕ ಆಯೋಗವು ಪತ್ರಿಕೆಯಲ್ಲಿ ನೋಟಿಫಿಕೇಷನ್‌ ಪ್ರಕಟಿಸಲಿದೆ. ಅಲ್ಲದೇ, ಮತದಾರರ ಮನೆ ಬಾಗಿಲಿಗೆ ಭಿತ್ತಿ ಪತ್ರವನ್ನು ಅಂಟಿಸಲಿದೆ ಎಂದು ಸುದ್ದಿಗಾರರಿಗೆ ತಿಳಿಸಿದರು.

ಸದ್ಯಕ್ಕೆ ರಾಜ್ಯದ ಜನಸಂಖ್ಯೆಯು 5.10 ಕೋಟಿ ಇದ್ದು, ಈ ಪೈಕಿ 2.58 ಕೋಟಿ ಪುರುಷರು ಮತ್ತು 2.52 ಕೋಟಿ ಮಹಿಳೆಯರು ಹಾಗೂ 4651 ಮಂದಿ ಇತರರು ಇದ್ದಾರೆ. ಮತದಾರಪಟ್ಟಿಯಲ್ಲಿ ಯುವಜನಾಂಗದವರು ತಮ್ಮ ಹೆಸರನ್ನು ನೋಂದಣಿ ಮಾಡಿಕೊಂಡು ಮುಂಬರುವ ಚುನಾವಣೆಯಲ್ಲಿ ತಮ್ಮ ಹಕ್ಕನ್ನು ಚಲಾಯಿಸಬೇಕು ಎಂದು ಮನವಿ ಮಾಡಿದರು.

ಮತ ಪಟ್ಟಿಯಿಂದ ಹೆಸರು ತೆಗೆಸಲು ಅರ್ಜಿ ಕೊಟ್ಟರೆ ಮನೆಗೆ ಭಿತ್ತಿ ಪತ್ರ!

ಮತದಾರರ ಪಟ್ಟಿಯಿಂದ ಹೆಸರು ತೆಗೆದು ಹಾಕುವುದು ಮೊದಲಿನಂತೆ ಇನ್ನು ಮುಂದೆ ಸುಲಭವಲ್ಲ. ಸಾರ್ವಜನಿಕರು ಕಠಿಣ ಕ್ರಮಗಳನ್ನು ಅನುಸರಿಸಬೇಕಾಗಿದೆ ಎಂದು ರಾಜ್ಯ ಮುಖ್ಯ ಚುನಾವಣಾಧಿಕಾರಿ ಸಂಜೀವ್‌ ಕುಮಾರ್‌ ಹೇಳಿದ್ದಾರೆ. ಸದ್ಯದ ಪರಿಸ್ಥಿತಿಯಲ್ಲಿ ಮತದಾರರು ಮತದಾರರ ಪಟ್ಟಿಯಿಂದ ಹೆಸರು ತೆಗೆದು ಹಾಕಲು ಫಾರಂ ನಂ.7 ನೀಡಿದರೆ ಸಾಕಾಗಿತ್ತು. ಆದರೆ, ಪಟ್ಟಿಯಿಂದ ಹೆಸರು ತೆಗೆದುಹಾಕುವಲ್ಲಿ ಲೋಪದೋಷಗಳು ಆಗುತ್ತಿರುವ ಬಗ್ಗೆ ಹಲವು ದೂರುಗಳು ಬಂದಿರುವ ಕಾರಣ ಕಠಿಣ ಕ್ರಮ ಕೈಗೊಳ್ಳಲು ಆಯೋಗವು ಮುಂದಾಗಿದೆ.

ಇನ್ನು ಮುಂದೆ ಮತದಾರರ ಪಟ್ಟಿಯಿಂದ ಹೆಸರು ತೆಗೆದು ಹಾಕಲು ಫಾರಂ ನಂ.7 ಅರ್ಜಿ ನೀಡಿದ ಬಳಿಕ ಆಯೋಗವು ಪತ್ರಿಕೆಯಲ್ಲಿ ನೋಟಿಫಿಕೇಷನ್‌ ಪ್ರಕಟಿಸಲಿದೆ. ಅಲ್ಲದೇ, ಮತದಾರರ ಮನೆ ಬಾಗಿಲಿಗೆ ಭಿತ್ತಿ ಪತ್ರವನ್ನು ಅಂಟಿಸಲಿದೆ ಎಂದು ಸುದ್ದಿಗಾರರಿಗೆ ತಿಳಿಸಿದರು.

ಮತದಾರರ ಪಟ್ಟಿಯಿಂದ ಹೆಸರು ತೆಗೆದು ಹಾಕಲು ಬಯಸುವ ವ್ಯಕ್ತಿಯ ಬಗ್ಗೆ ಯಾವುದಾದರೂ ಆಕ್ಷೇಪಣೆ ಬಂದಲ್ಲಿ ಆ ಬಗ್ಗೆ ಪರಿಶೀಲನೆ ನಡೆಸಲಾಗುವುದು. ಒಂದು ವೇಳೆ ಯಾವುದೇ ಆಕ್ಷೇಪಣೆ ಬಾರದಿದ್ದರೆ ಹೆಸರು ತೆಗೆದು ಹಾಕಲಾಗುವುದು ಎಂದು ಮಾಹಿತಿ ನೀಡಿದರು.