ಮತದಾರರ ಪಟ್ಟಿಯಲ್ಲಿ ಹೆಸರಿದ್ದು, ಮತದಾರರ ಗುರುತಿನ ಚೀಟಿ ಇಲ್ಲದಿದ್ದರೆ ಇನ್ನಿತರ 11 ದಾಖಲೆಗಳನ್ನು ಬಳಸಿ ಮತದಾನ ಮಾಡಲು ಚುನಾವಣಾ ಆಯೋಗ ಅವಕಾಶ ನೀಡಿದೆ. ಅವು ಇಂತಿವೆ:

1. ಪಾಸ್‌ಪೋರ್ಟ್‌

2. ಡ್ರೈವಿಂಗ್‌ ಲೈಸನ್ಸ್‌

3. ಕೇಂದ್ರ/ರಾಜ್ಯ/ಪಿಎಸ್‌ಯು/ಪಬ್ಲಿಕ್‌ ಲಿಮಿಟೆಡ್‌ ಕಂಪನಿಗಳ ಭಾವಚಿತ್ರ ಹೊಂದಿರುವ ಸೇವಾ ಗುರುತಿನ ಚೀಟಿ

4. ಪೋಸ್ಟ್‌ ಆಫೀಸ್‌ ಮತ್ತು ಬ್ಯಾಂಕುಗಳಲ್ಲಿ ನೀಡಿರುವ ಪಾಸ್‌ ಬುಕ್‌ಗಳು

5. ಪ್ಯಾನ್‌ ಕಾರ್ಡ್‌

6. ಆರ್‌ಜಿಐ ಮತ್ತು ಎನ್‌ಪಿಆರ್‌ ಮೂಲಕ ನೀಡಿರುವ ಸ್ಮಾಟ್‌ ಕಾರ್ಡ್‌

7. ಉದ್ಯೋಗ ಖಾತ್ರಿ ಗುರುತಿನ ಚೀಟಿ (ಎಂಎನ್‌ಆರ್‌ಇಜಿಎ ಜಾಬ್‌ ಕಾರ್ಡ್‌)

8. ಕಾರ್ಮಿಕ ಇಲಾಖೆಯಿಂದ ನೀಡಲಾಗಿರುವ ಆರೋಗ್ಯ ವಿಮಾ ಸ್ಮಾರ್ಟ್‌ ಕಾರ್ಡ್‌

9. ಭಾವಚಿತ್ರ ಹೊಂದಿರುವ ಪೆನ್ಷನ್‌ ಕಾರ್ಡ್‌ಗಳು

10. ಲೋಕಸಭಾ ಸದಸ್ಯರು /ರಾಜ್ಯಸಭಾ ಸದಸ್ಯರುಗಳು/ಶಾಸಕರು/ವಿಧಾನಸಭಾ ಸದಸ್ಯರಿಗೆ ನೀಡಿರುವ ಅಧಿಕೃತ ಗುರುತಿನ ಚೀಟಿ

11. ಆಧಾರ್‌ ಕಾರ್ಡ್‌