ಬೆಂಗಳೂರು, (ಆ.31): ಮತದಾರರ ಪಟ್ಟಿಯ ಪರಿಶೀಲನೆ ದೃಢೀಕರಣ, ಸೇರ್ಪಡೆ, ತೆಗೆದುಹಾಕುವಿಕೆ ಮತ್ತು ತಿದ್ದುಪಡಿಗೆ ಚುನಾವಣಾ ಆಯೋಗ ಮುಂದಾಗಿದೆ. 

ಮತದಾರರ ಪಟ್ಟಿಗೆ ಹೆಸರು ಸೇರಿಸಲು ಸೆಪ್ಟೆಂಬರ್ 1 ರಿಂದ 30ರ ತನಕ ಅವಕಾಶ ನೀಡಲಾಗಿದೆ. ಈ ಅವಕಾಶವನ್ನು ಕಳೆದುಕೊಳ್ಳಬೇಡಿ ಎಂದು ಚುನಾವಣಾ ಆಯೋಗ ಜನರಿಗೆ ಮನವಿ ಮಾಡಿದೆ. 

ಸೆಪ್ಟೆಂಬರ್ 1ರಂದು ಈ ಅಭಿಯಾನಕ್ಕೆ ಚಾಲನೆ ದೊರೆಯಲಿದ್ದು ಸೆಪ್ಟೆಂಬರ್ 30ರ ತನಕ ಇದು ನಡೆಯಲಿದೆ. ಬೂತ್ ಲೆವಲ್ ಅಫೀಸರ್ (ಬಿ.ಎಲ್.ಓ) ಮನೆ-ಮನೆಗೆ ಭೇಟಿ ಮಾಡಲಿದ್ದು, ಮತದಾರರು ಸಂಬಂಧಿಸಿದ ದಾಖಲೆಗಳೊಂದಿಗೆ ಸಿದ್ಧರಾಗಿರಬೇಕು ಎಂದು ಚುನಾವಣಾ ಆಯೋಗ ಮನವಿ ಮಾಡಿಕೊಂಡಿದೆ.  

ಸಿದ್ಧವಿರಬೇಕಾದ ದಾಖಲಾತಿಗಳು
ಭಾರತೀಯ ಪಾಸ್‌ಪೋರ್ಟ್, ಆಧಾರ್ ಕಾರ್ಡ್, ಸರ್ಕಾರಿ/ ಅರೆ ಸರ್ಕಾರಿ ನೌಕರರು ಹೊಂದಿರುವ ಗುರುತಿನ ಚೀಟಿ, ರೈತರ ಗುರುತಿನ ಚೀಟಿ, ಚಾಲನಾ ಪರವಾನಿಗೆ, ಪಡಿತರ ಚೀಟಿ, ಬ್ಯಾಂಕ್ ಪಾಸ್ ಪುಸ್ತಕ, ಚುನಾವಣಾ ಆಯೋಗ ಅನುಮೋದಿಸಿದ ಯಾವುದಾದರೂ ಇತರ ದಾಖಲೆ.

ಯಾವುದಕ್ಕೆ ಯಾವ-ಯಾವ ಅರ್ಜಿ
ಹೆಸರು/ತಂದೆಯ ಹೆಸರು/ಲಿಂಗ/ಹುಟ್ಟಿದ ದಿನಾಂಕ/ವಿಳಾಸ/ಫೋಟೋ ತಿದ್ದುಪಡಿಗಾಗಿ ನಮೂನೆ 8 ಅರ್ಜಿ ತುಂಬಬೇಕು. ನಮೂನೆ 7ರಲ್ಲಿ ಸ್ಥಳ ಬದಲಾವಣೆ/ಮರಣ. ನಮೂನೆ 6ರಲ್ಲಿ ಸೇರ್ಪಡೆಗಾಗಿ ಹುಟ್ಟಿದ ದಿನಾಂಕ/ವಯಸ್ಸಿನ ದೃಢೀಕರಣ/ವಿಳಾಸ ದೃಢೀಕರಣ/2 ಪಾಸ್ ಪೋರ್ಟ್ ಅಳತೆಯ ಪೋಟೋಗಳು ಅಗತ್ಯವಾಗಿದೆ.

ಹಾಗಿದ್ದರೇ ಇನ್ನೇಕೆ ತಡ ಸೆ.1ರಿಂದ ಸೆ30ರೊಳಿಗೆ  ಬಿ. ಎಲ್. ಓಗಳು ನಿಮ್ಮ ಮನೆಗೆ ಬರಹುದು. ಹಾಗಾಗಿ ಮೇಲೆ ತಿಳಿಸಲಾದ ದಾಖಲಾತಿಗಳನ್ನು ರೆಡಿಮಾಡಿ ಇಟ್ಟುಕೊಳ್ಳಿ.