ಬೆಂಗಳೂರು[ಅ. 07]  ಪ್ರೇಮಿಗಳ ದಿನಾಚರಣೆಗೆ ವಿರೋಧ ವ್ಯಕ್ತಪಡಿಸಿದ್ದವರ ವಿರುದ್ಧ ಹರಿಹಾಯ್ದಿದ್ದ ಕನ್ನಡ ಹೋರಾಟಗಾರ ವಾಟಾಳ್ ನಾಗರಾಜ್ ಇದೀಗ ಚಂದನ್ ಶೆಟ್ಟಿ ಪರ ನಿಂತಿದ್ದಾರೆ.

ಚಂದನ್ ಶೆಟ್ಟಿ ನಿವೇದಿತಾ ಪ್ರೇಮ ನಿವೇದನೆ ವಿಚಾರ ಇಟ್ಟುಕೊಂಡು  ಕೇಸ್ ದಾಖಲಿಸಿದ್ರೆ ರಾಜ್ಯಾದ್ಯಂತ ಉಗ್ರ ಹೋರಾಟ ಮಾಡುವುದಾಗಿ ವಾಟಾಳ್ ಎಚ್ಚರಿಕೆ ನೀಡಿದ್ದಾರೆ.

ಮೈಸೂರಿನ ‌ಯುವದಸರಾ ವೇದಿಕೆಯಲ್ಲಿಯೇ ಕನ್ನಡದ ಗಾಯಕ ಚಂದನ್ ಶೆಟ್ಟಿ ಗೆಳತಿ ನಿವೇದಿತಾ ಗೌಡ ಅವರಿಗೆ ಪ್ರಪೋಸ್ ಮಾಡಿದ್ದರು. ವೇದಿಕೆಯಲ್ಲೇ ರಿಂಗ್ ತೊಡಿಸಿ ಮದುವೆಯಾಗುವುದಾಗಿ ಘೋಷಿಸಿದ್ದರು.

ದಸರಾ ವೇದಿಕೆಯಲ್ಲಿ ಚಂದನ್ ಪ್ರಪೋಸ್; ಟೀಕಿಸಿದವರಿಗೆ ಉತ್ತರ ಕೊಟ್ಟ ನಿವೇದಿತಾ ಗೌಡ!

ಪ್ರಪೋಸ್ ಮಾಡಿದ್ದು ಅಕ್ಷಮ್ಯ ಅಪರಾಧ ಅಲ್ಲ. ಇಂತಹ ಸಂಧರ್ಭದಲ್ಲಿ ನಾವೆಲ್ಲ ಪ್ರೀತಿಯಿಂದ ಹರಸಿ ಹಾರೈಸಬೇಕು. ಅವ್ರ ನಡೆಗೆ ನಮ್ಮ ಸಂಪೂರ್ಣ ಬೆಂಬಲವಿದೆ. ಇದು ಕೇಸು ದಾಖಲಿಸುವಂತ ಅಪರಾಧವಲ್ಲ. ಕೇಸ್ ಹಾಕಿದ್ರೆ ಪೋಲಿಸರ ವಿರುದ್ಧ ನಾನೇ ಧರಣಿ ಮಾಡುತ್ತೇನೆ ಎಂದು ನಾಗರಾಜ್ ಎಚ್ಚರಿಕೆ ನೀಡಿದ್ದಾರೆ.

ಯುವದಸರಾ ವೇದಿಕೆಯಲ್ಲೇ ನಿವೇದಿತಾಗೆ ಚಂದನ್ ಶೆಟ್ಟಿ ಪ್ರಪೋಸ್.. ವಿಡಿಯೋ...

ವೇದಿಕೆ ಮೇಲೆ ಪ್ರಪೋಸ್ ಮಾಡಿದ ನಂತರ ಪರ ವಿರೋಧದ ಮಾತುಗಳು ಜೋರಾಗಿ ಕೇಳಿ ಬಂದಿದ್ದವು. ದಸರಾ ಉಸ್ತುವಾರಿ ಹೊತ್ತಿದ್ದ ವಿ.ಸೋಮಣ್ಣ ಸಹ ಅಸಮಾಧಾನದ ಮಾತುಗಳನ್ನು ಆಡಿದ್ದರು. ನಂತರ ಗಾಯಕ ಚಂದನ್ ಕ್ಷಮೆ ಯಾಚಿಸಿದ್ದರು. ಇದೀಗ ಕೇಸು ದಾಖಲಿಸುವ ಮಾತುಗಳು ಬಂದಿದ್ದು ಕನ್ನಡ ಪರ ಹೋರಾಟಗಾರ ವಾಟಾಳ್ ಪ್ರೇಮಿಗಳ ಪರವಾಗಿ ನಿಂತಿದ್ದಾರೆ.