ನಾಡಹಬ್ಬ ದಸರಾ ವೇದಿಕೆಯಲ್ಲಿ ಬಿಗ್ ಬಾಸ್ ವಿಜೇತ ಚಂದನ್ ಶೆಟ್ಟಿ ನಿವೇದಿತಾ ಗೌಡರಿಗೆ ಪ್ರಪೋಸ್ ಮಾಡಿ ಉಂಗುರ ತೊಡಿಸಿದ್ದು ಸೋಷಿಯಲ್ ಮೀಡಿಯಾದಲ್ಲಿ ಅತೀವ ಆಕ್ರೋಶ ವ್ಯಕ್ತವಾಗುತ್ತಿದೆ. ತಮ್ಮ ವೈಯಕ್ತಿಕ ವಿಚಾರಗಳಿಗೆ ದಸರಾ ವೇದಿಕೆಯನ್ನು ಬಳಸಿಕೊಂಡಿರುವುದ ಪರ- ವಿರೋಧ ಚರ್ಚೆಯಾಗುತ್ತಿದೆ. 

ನಾವು ಅಸಹ್ಯ ಎನಿಸುವಂತೆ ನಡೆದುಕೊಂಡಿಲ್ಲ: ಚಂದನ್ ಶೆಟ್ಟಿ

ಬಿಗ್ ಬಾಸ್ ಮನೆಗೆ ಹೋಗಿ ಬಂದಾಗಿನಿಂದ ಈ ಯುವ ಜೋಡಿ ಬಗ್ಗೆ ಮಾತುಗಳು ಕೇಳಿ ಬರುತ್ತಿತ್ತು. ಆದರೆ ಇವರಿಬ್ಬರೂ ಗುಟ್ಟನ್ನು ಮಾತ್ರ ಬಿಟ್ಟು ಕೊಟ್ಟಿರಲಿಲ್ಲ. ದಸರಾ ವೇದಿಕೆಯಲ್ಲಿ ನಿವೇದಿತಾಳಿಗೆ ಮದುವೆ ಆಗುತ್ತೀಯಾ ಎಂದು ಕೇಳಿ ಕೈಗೆ ಉಂಗುರ ತೊಡಿಸಿ ಶೀಫ್ರವೇ ಮದುವೆಯಾಗುವುದಾಗಿ ಘೋಷಿಸಿದ್ದಾರೆ.  ಚಂದನ್ ನಡೆ ಸಾಮಾಜಿಕ ಜಾಲತಾಣಗಳಲ್ಲಿ ಚರ್ಚೆಯಾಗುತ್ತಿದೆ. 

ಯುವ ದಸರಾ ವೇದಿಕೆಯಲ್ಲಿ ಪ್ರಪೋಸ್: ನಿವೇದಿತಾ - ಚಂದನ್ ಶೆಟ್ಟಿಗೆ ಸಂಕಷ್ಟ

ಈ ಬಗ್ಗೆ ಕಾಮೆಂಟ್ ಮಾಡಿದವರಿಗೆ ನಿವೇದಿತಾ ಗೌಡ ತಿರುಗೇಟು ನೀಡಿದ್ದಾರೆ. 

 

‘ ನಾನು ಯಾವತ್ತಿದ್ದರೂ ಚಂದನ್ ನನ್ನೇ ಮದುವೆಯಾಗುವುದು. I Love him so much. ಅವನು ಪ್ರಪೋಸ್ ಮಾಡಿದ್ದು ನನ್ನ ಕನಸಲ್ಲಿ ನಡೆದಂತಿದೆ. ಇದರಿಂದ ಇನ್ನೂ ಹೊರ ಬರಲು ಸಾಧ್ಯವಾಗಿಲ್ಲ ಎಂದು ಎಕ್ಸೈಟ್ ಆಗಿ ಹೇಳಿದ್ದಾರೆ. 

ನಾವು ವೇದಿಕೆ ಮೇಲೆ ಎಂಗೇಜ್ ಮೆಂಟ್ ಮಾಡಿಕೊಂಡಿಲ್ಲ. ಅವನು ಪ್ರಪೋಸ್ ಮಾಡ್ದ. ನಾನು ಒಪ್ಪಿಕೊಂಡಿದ್ದೇನೆ ಅಷ್ಟೇ’ ಎಂದು ಹೇಳಿದ್ದಾರೆ.