ಸಂಬಂಧವೊಂದು ಹರಿದುಂಬಿಸಿದಾಗ ಯಶಸ್ಸು ಕಟ್ಟಿಟ್ಟ ಬುತ್ತಿ| UPSC ಟಾಪರ್ ಗೆಲುವಿನ ಶ್ರೇಯ ಅರ್ಪಿಸಿದ್ದು ಯಾರಿಗೆ ಗೊತ್ತಾ?| ಕನಿಷ್ಕ ಕಟಾರಿಯಾ ಯಶಸ್ಸಿನ ಹಿಂದಿದ್ದಾರೆ ಆದರ್ಶ ಗೆಳತಿ| ಯಶಸ್ಸನ್ನು ಆಪ್ತ ಗೆಳತಿಗೆ ಅರ್ಪಿಸಿದ UPSC ಟಾಪರ್| ಪೋಷಕರಿಗೂ ಗೆಲುವಿನ ಶ್ರೇಯ ಸಲ್ಲಿಸಿದ ಕನಿಷ್ಕ ಕಟಾರಿಯಾ|

ಮುಂಬೈ(ಏ.06): UPSC ಪರೀಕ್ಷೆ ಪಾಸಾಗೋದು ಅಷ್ಟು ಸುಲಭದ ಮಾತಲ್ಲ ಬಿಡಿ. ಭಾರತದ ಅತ್ಯಂತ ಪ್ರತಿಭಾವಂತ ಮೆದುಳುಗಳ ಹುಟುಕಾಟದಲ್ಲಿ ನಿರತವಾಗಿರುವ UPSC, ಅಳೆದು ತೂಗಿ ಅಭ್ಯರ್ಥಿಗಳನ್ನು ಆಯ್ಕೆ ಮಾಡುತ್ತದೆ.

Add Asianetnews Kannada as a Preferred SourcegooglePreferred

ಅದರಂತೆ UPSC ಪರೀಕ್ಷೆ ಎಂಬ ಚಾಲೆಂಜ್ ಸ್ವೀಕರಿಸುವ ಅಭ್ಯರ್ಥಿ, ಹಗಲು ರಾತ್ರಿಗಳನ್ನು ಒಂದು ಮಾಡಿ UPSC ಪರೀಕ್ಷೆಯಲ್ಲಿ ತೇರ್ಗಡೆಯಾಗಿರುತ್ತಾರೆ.

ಅದರಲ್ಲೂ UPSC ಪರೀಕ್ಷೆಯಲ್ಲಿ ಇಡೀ ದೇಶಕ್ಕೆ ಪ್ರಥಮ ಸ್ಥಾನ ಗಳಿಸುವ ಅಭ್ಯರ್ಥಿಯ ಪರಿಶ್ರಮಕ್ಕೆ ಸರಿಸಮಾನ ಯಾವುದಿದೆ ಹೇಳಿ?. ಈ ಬಾರಿಯ ಕೇಂದ್ರ ಲೋಕಸೇವಾ ಆಯೋಗದ ಪರೀಕ್ಷೆಯಲ್ಲಿ ದೇಶಕ್ಕೆ ಪ್ರಥಮ ಸ್ಥಾನಗಳಿಸಿರುವ ಕನಿಷ್ಕ ಕಟಾರಿಯಾ, ಇಡೀ ದೇಶದ ಗಮನಸೆಳೆದಿದ್ದಾರೆ. ಭವಿಷ್ಯದ ಲೋಕಸೇವಾ ಅಭ್ಯರ್ಥಿಗಳ ಆದರ್ಶವಾಗಿ ಹೊರಹೊಮ್ಮಿದ್ದಾರೆ.

ಇನ್ನು ತಮ್ಮ ಯಶಸ್ಸಿನ ಶ್ರೇಯಸ್ಸನ್ನು ತಂದೆ-ತಾಯಿ ಮತ್ತು ಸಹೋದರಿಗೆ ಅರ್ಪಿಸಿರುವ ಕನಿಷ್ಕ, ಮತ್ತೊಂದು ವಿಶೇಷ ಹೆಸರನ್ನು ಉಲ್ಲೇಖಿಸಿದ್ದಾರೆ.

Scroll to load tweet…

ತಮ್ಮ ಯಶಸ್ಸಿಗೆ ಬೆಂಬಲವಾಗಿ ನಿಂತ ತಮ್ಮ ಗೆಳತಿಗೂ ಕನಿಷ್ಕ ಶ್ರೇಯ ನೀಡಿದ್ದಾರೆ. ಫಲಿತಾಂಶ ಹೊರ ಬರುತ್ತಿದ್ದಂತೇ ಮಾಧ್ಯಮಗಳೊಂದಿಗೆ ಮಾತನಾಡಿರುವ ಕನಿಷ್ಕ, ಈ ಕಠಿಣ ಹಾದಿಯಲ್ಲಿ ತಮಗೆ ಸದಾ ಬೆಂಬಲವಾಗಿ ನಿಂತ ತಮ್ಮ ಆಪ್ತ ಗೆಳತಿಗೆ ಧನ್ಯವಾದ ಅರ್ಪಿಸಿದ್ದಾರೆ.

ಸಂಬಂಧ ಅದೇನೆ ಇರಲಿ, ಇರೋ ಸಂಬಂಧವನ್ನೂ ನೆಟ್ಟಗಿಟ್ಟುಕೊಳ್ಳದೇ ಕ್ಷುಲ್ಲಕ ಕಾರಣಕ್ಕೆ ನಿತ್ಯವೂ ಕಿತ್ತಾಡುವ, ಶಾಪಿಂಗ್, ಸಿನಿಮಾ, ಹೊಟೇಲ್ ಅಂತಾ ನಿತ್ಯವೂ ಬಡಿದಾಡುವ ಸಂಬಂಧಕ್ಕಿಂತ ಈ ಸಂಬಂಧ ಶ್ರೇಷ್ಠವಾದುದು.

ಆಪ್ತನೋರ್ವ ಕಠಿಣ ಪರಿಶ್ರಮದ ಹಾದಿಯಲ್ಲಿದ್ದಾಗ ಆತನ ಬೆಂಬಲಕ್ಕೆ ನಿಂತು ಹುರಿದುಂಬಿಸಿದ ಕನಿಷ್ಕ ಅವರ ಗೆಳತಿ ನಿಜಕ್ಕೂ ಅಭಿನಂದನಾರ್ಹರು.