2018ನೇ ಸಾಲಿನ ಲೋಕಸೇವಾ ಆಯೋಗದ ಪರೀಕ್ಷೆಗೆ ದೇಶಾದ್ಯಂತ ಒಟ್ಟು 10,65,552 ಮಂದಿ ಅಭ್ಯರ್ಥಿಗಳು ಅರ್ಜಿ ಸಲ್ಲಿಸಿದ್ದರು. ಇದರಲ್ಲಿ ಕಳೆದ ವರ್ಷದ ಜೂ.3ರಂದು ನಡೆದ ಪರೀಕ್ಷೆಯಲ್ಲಿ 4,93,972 ಅಭ್ಯರ್ಥಿಗಳಷ್ಟೇ ಹಾಜರಾಗಿದ್ದರು. ಇದರಲ್ಲಿ 10,468 ಅಭ್ಯರ್ಥಿಗಳು ಮುಖ್ಯ ಪರೀಕ್ಷೆಗೆ ಅರ್ಹರಾಗಿದ್ದರು.

ನವದೆಹಲಿ(ಏ.06): ಕೇಂದ್ರ ಲೋಕಸೇವಾ ಆಯೋಗ ನಡೆಸಿದ್ದ 2018ನೇ ಸಾಲಿನ ನಾಗರಿಕ ಸೇವಾ ಪರೀಕ್ಷೆಗಳ ಅಂತಿಮ ಪರೀಕ್ಷಾ ಫಲಿತಾಂಶ ಪ್ರಕಟವಾಗಿದೆ. ಇದರಲ್ಲಿ ಬಾಂಬೆ ಐಐಟಿಯ ಬಿ.ಟೆಕ್‌ ವಿದ್ಯಾರ್ಥಿಯಾಗಿದ್ದ ಕನಿಷ್ಕ್ ಕಟಾರಿಯಾ ಟಾಪರ್‌ ಆಗಿ ಹೊರಹೊಮ್ಮಿದ್ದಾರೆ. ಇನ್ನು ದೇಶಕ್ಕೆ 5ನೇ ಶ್ರೇಯಾಂಕ ಪಡೆದ ಸೃಷ್ಟಿಜಯಂತ್‌ ದೇಶಮುಖ್‌ ಮಹಿಳಾ ವಿಭಾಗದ ಟಾಪರ್‌ ಆಗಿದ್ದಾರೆ. ದೇಶಮುಖ್‌ ಅವರು ಭೋಪಾಲ್‌ನಲ್ಲಿರುವ ರಾಜೀವ್‌ ಗಾಂಧಿ ಪ್ರೌದ್ಯೋಗಿಕಿ ವಿಶ್ವವಿದ್ಯಾಲಯದಲ್ಲಿ ಬಿ.ಇ(ಕೆಮಿಕಲ್‌ ಇಂಜಿನಿಯರಿಂಗ್‌) ಪದವಿ ಪೂರೈಸಿದ್ದರು. ಇನ್ನು ಗುವಾಹಟಿಯ ಐಐಟಿಯಲ್ಲಿ ಇಂಜಿನಿಯರಿಂಗ್‌ ಪದವೀದರ ಅಕ್ಷತ್‌ ಜೈನ್‌ 2ನೇ ಶ್ರೇಯಾಂಕ ಪಡೆದಿದ್ದಾರೆ.

Scroll to load tweet…

ಈ ಬಗ್ಗೆ ಶುಕ್ರವಾರ ಪತ್ರಿಕಾ ಪ್ರಕಟಣೆ ಹೊರಡಿಸಿದ ಕೇಂದ್ರ ಲೋಕಸೇವಾ ಆಯೋಗ, ಯುಪಿಎಸ್‌ಸಿ ಪರೀಕ್ಷೆಯಲ್ಲಿ ತೇರ್ಗಡೆಯಾದ 759 ಅಭ್ಯರ್ಥಿಗಳನ್ನು ಐಎಎಸ್‌, ಐಪಿಎಸ್‌ ಮತ್ತು ಐಎಫ್‌ಎಸ್‌ ಸೇರಿದಂತೆ ಇತರ ಇಲಾಖೆಗಳಲ್ಲಿ ನೇಮಿಸಿಕೊಳ್ಳುವಂತೆ ಶಿಫಾರಸು ಮಾಡಿದೆ. ಯುಪಿಎಸ್‌ಸಿ ಪರೀಕ್ಷೆಯಲ್ಲಿ ತೇರ್ಗಡೆಯಾದ 759 ಮಂದಿ ಪೈಕಿ 577 ಪುರುಷರು ಮತ್ತು 182 ಮಹಿಳೆಯರಿದ್ದಾರೆ. ಈ ಪೈಕಿ ಟಾಪ್‌ 25 ರಾರ‍ಯಂಕ್‌ ಪಡೆದವರಲ್ಲಿ 15 ಪುರುಷರು ಮತ್ತು 10 ಮಹಿಳೆಯರಿದ್ದಾರೆ.

2018ನೇ ಸಾಲಿನ ಲೋಕಸೇವಾ ಆಯೋಗದ ಪರೀಕ್ಷೆಗೆ ದೇಶಾದ್ಯಂತ ಒಟ್ಟು 10,65,552 ಮಂದಿ ಅಭ್ಯರ್ಥಿಗಳು ಅರ್ಜಿ ಸಲ್ಲಿಸಿದ್ದರು. ಇದರಲ್ಲಿ ಕಳೆದ ವರ್ಷದ ಜೂ.3ರಂದು ನಡೆದ ಪರೀಕ್ಷೆಯಲ್ಲಿ 4,93,972 ಅಭ್ಯರ್ಥಿಗಳಷ್ಟೇ ಹಾಜರಾಗಿದ್ದರು. ಇದರಲ್ಲಿ 10,468 ಅಭ್ಯರ್ಥಿಗಳು ಮುಖ್ಯ ಪರೀಕ್ಷೆಗೆ ಅರ್ಹರಾಗಿದ್ದರು. ಕೊನೆಗೆ 1994ರ ಅಭ್ಯರ್ಥಿಗಳು ಮುಖ್ಯ ಪರೀಕ್ಷೆಯಲ್ಲಿಯೂ ತೇರ್ಗಡೆಯಾಗಿ ಸಂದರ್ಶನಕ್ಕೆ ಅರ್ಹರಾಗಿದ್ದರು. ಇದರಲ್ಲಿ ಕೊನೆಯದಾಗಿ 759 ಅಭ್ಯರ್ಥಿಗಳು ಐಎಎಸ್‌ ತೇರ್ಗಡೆಯಾಗಿದ್ದಾರೆ.