ಯೋಗಿ ಕೊಂಡಾಡಿದ ಟ್ರಂಪ್,ಅಂತರ್ ಜಿಲ್ಲಾ ಓಡಾಟಕ್ಕೆ ಬ್ರೇಕ್; ಜೂ.27ರ ಟಾಪ್ 10 ಸುದ್ದಿ!

ಅಮೆರಿಕ ಅಧ್ಯಕ್ಷ ಡೋನಾಲ್ಡ್ ಟ್ರಂಪ್ ಇದೀಗ ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಕೊಂಡಾಡಿದ್ದಾರೆ. ಯುಪಿ ಮಾಡೆಲ್ ಇದೀಗ ವಿಶ್ವದಲ್ಲೇ ಸದ್ದು ಮಾಡುತ್ತಿದೆ. ಕೊರೋನಾ ವಕ್ಕಸಿದ ಬಳಿಕ ವಿಶ್ವ ಸಂಸ್ಥೆಯನ್ನು ದೂರುವ ರಾಷ್ಟ್ರಗಳು ಹೆಚ್ಚಾಗಿದೆ. ಇದರ ಬೆನ್ನಲ್ಲೇ ವಿಶ್ವಸಂಸ್ಥೆ ಸೇರಿದ ಕಾರಿನಲ್ಲಿ ಅಧಿಕಾರಿಯೊಬ್ಬರು ಸೆಕ್ಸ್ ಮಾಡಿ ಸುದ್ದಿಯಾಗಿದ್ದಾರೆ. ಕರ್ನಾಟಕದಲ್ಲಿ ಕೊರೋನಾ ಹೆಚ್ಚಾಗತ್ತಿರುವ ಕಾರಣ ಅಂತರ್ ಜಿಲ್ಲಾ ಓಡಾಟಕ್ಕೆ ಬ್ರೇಕ್ ಹಾಕಲು ಮುಂದಾಗಿದೆ. ಸಲ್ಮಾನ್ ಖಾನ್ ಪೋಸ್ಟ್, ಚೀನಾ ವಸ್ತುಗಳ ನಿಷೇಧಿಸಿದ ಗ್ರಾಮ ಸೇರಿದಂತೆ ಜೂನ್ 27ರ ಟಾಪ್ 10 ಸುದ್ದಿ ಇಲ್ಲಿವೆ.

UP Cm Yogi adityanath to Karnataka Coronavirus top 10 news of June 27

ಯೋಗಿ ಮಾಡೆಲ್'ಗೆ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್‌ ಫುಲ್ ಫಿದಾ!...

UP Cm Yogi adityanath to Karnataka Coronavirus top 10 news of June 27

ಅಮೆರಿಕದಲ್ಲಿ ಯೋಗಿ ಮಾಡೆಲ್ ಭಾರೀ ಸದ್ದು ಮಾಡುತ್ತಿದೆ. ಅರೆ... ಅಮೆರಿಕದಲ್ಲಿ ಯೋಗಿ ಮಾಡೆಲ್‌ ಯಾಕಾಗಿ? ಎಂದು ಭಾವಿಸಬಹುದು. ಆದ್ರೆ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್‌ಗೆ ಯೋಗಿ ಮಾಡೆಲ್ ಭಾರೀ ಇಷ್ಟವಾಗಿದೆ ಎಂಬುವುದು ಮಾತ್ರ ಸತ್ಯ. ಉತ್ತರ ಪ್ರದೇಶದ ಯೋಗಿ ಮಾಡೆಲ್ ಲಕ್ನೋದಿಂದ 12,346 ಕಿ. ಮೀ ದೂರದಲ್ಲಿರುವ ಅಮೆರಿಕದ ವೈಟ್‌ ಹೌಸ್‌ನಲ್ಲಿ ಸದ್ಯ ಪ್ರತಿಧ್ವನಿಸುತ್ತಿದೆ.

ಭಾರತದ ನೆರವಿಗೆ ನಿಂತಿದೆ ಅಮೆರಿಕಾ; ಚೀನಾಗೆ ಶುರುವಾಗಿದೆ ನಡುಕ

UP Cm Yogi adityanath to Karnataka Coronavirus top 10 news of June 27

ಭಾರತ ಸೇರಿದಂತೆ ಆಗ್ನೇಯ ಏಷ್ಯಾ ದೇಶಗಳು ಚೀನಾದಿಂದ ಎದುರಿಸುತ್ತಿರುವ ಸವಾಲುಗಳ ಹಿನ್ನೆಲೆಯಲ್ಲಿ, ತನ್ನ ಸೇನೆಯನ್ನು ಯುರೋಪ್‌ ಬದಲು ಇತರೆ ದೇಶಗಳತ್ತ ರವಾನಿಸುತ್ತಿರುವುದಾಗಿ ಅಮೆರಿಕ ವಿದೇಶಾಂಗ ಸಚಿವ ಮೈಕ್‌ ಪೊಂಪೆ ಘೋಷಿಸಿದ್ದಾರೆ. ಈ ಮೂಲಕ ಇದೇ ಮೊದಲ ಬಾರಿಗೆ ಚೀನಾ ವಿರುದ್ಧದ ಹೋರಾಟದಲ್ಲಿ ಭಾರತದ ಬೆಂಬಲಕ್ಕೆ ನಿಂತಿರುವ ಬಹಿರಂಗ ಘೋಷಣೆ ಮಾಡಿದ್ದಾರೆ. ಅಲ್ಲದೆ ಈ ಮೂಲಕ ನೆರೆ ಹೊರೆಯ ದೇಶಗಳ ಜೊತೆ ಗಡಿ ಕ್ಯಾತೆ ತೆಗೆಯುತ್ತಿರುವ ಚೀನಾಕ್ಕೆ ನೇರ ಸಂದೇಶ ರವಾನಿಸುವ ಯತ್ನ ಮಾಡಿದ್ದಾರೆ.

ಅನ್‌ಲಾಕ್‌- 2.O: ದೇಶದಲ್ಲಿ ಏನಿರತ್ತೆ? ಏನಿರಲ್ಲ?...

UP Cm Yogi adityanath to Karnataka Coronavirus top 10 news of June 27

ಕೊರೋನಾ ಅಟ್ಟಹಾಸ ದಿನದಿಂದ ದಿನಕ್ಕೆ ಮಿತಿಮೀರುತ್ತಿದೆ. ಇದರ ಬೆನ್ನಲ್ಲೇ ಎರಡನೇ ಹಂತದ ಅನ್‌ಲಾಕ್‌ ಕುರಿತಂತೆ ಚರ್ಚೆಗಳು ಆರಂಭವಾಗಿವೆ. ಮೊದಲ ಅನ್‌ಲಾಕ್ ಇದೇ ಜೂನ್ 30ಕ್ಕೆ ಮುಕ್ತಾಯವಾಗಲಿದೆ. 

ವಿಶ್ವಸಂಸ್ಥೆ ಕಾರಲ್ಲಿ ಹಾಡಹಗಲೇ ಸೆಕ್ಸ್..! ಅಧಿಕಾರಿ ಕಾಮದಾಟ ವೈರಲ್...

UP Cm Yogi adityanath to Karnataka Coronavirus top 10 news of June 27

ವಿಶ್ವಸಂಸ್ಥೆಗೆ ಸೇರಿದ ವಾಹನದಲ್ಲಿ ಅಧಿಕಾರಿಯೊಬ್ಬರೂ ಸೆಕ್ಸ್ ಮಾಡಿರೋ ವಿಡಿಯೋ ವೈರಲ್ ಆಗಿದೆ. ವಿಶ್ವಸಂಸ್ಥೆಗೆ ಸೇರಿದ ವಾಹನದಲ್ಲಿ ಅಧಿಕಾರಿಯೊಬ್ಬರು ಯುವತಿಯೊಂದಿಗೆ ಸೆಕ್ಸ್‌ನಲ್ಲಿ ತೊಡಗಿರೋ ವಿಡಿಯೋ ವೈರಲ್ ಆಗ್ತಿದ್ದಂತೆ ಅಮೆರಿಕದ ತನಿಖಾ ಸಿಬ್ಬಂದಿ ಈ ಬಗ್ಗೆ ತನಿಖೆ ಆರಂಭಿಸಿದ್ದಾರೆ.

ಗ್ರಾಮದ ಜನತೆಯ ದಿಟ್ಟ ನಿರ್ಧಾರ; ಜುಲೈ 1 ರಿಂದ ಚೀನಾ ವಸ್ತು ಬಳಕೆ ನಿಷೇಧ!.

UP Cm Yogi adityanath to Karnataka Coronavirus top 10 news of June 27

ಲಡಾಖ್ ಬಿಕ್ಕಟ್ಟಿನ ಬಳಿಕ ಚೀನಾಗೆ ಪಾಠ ಕಲಿಸಲು ಭಾರತೀಯರು ಸಜ್ಜಾಗಿದ್ದಾರೆ. ಚೀನಾ ವಸ್ತು ಬಳಕೆ ನಿಷೇಧಕ್ಕೆ ಅಭಿಯಾನಗಳು ನಡೆಯುತ್ತಿದೆ. ಇದರ ಬೆನ್ನಲ್ಲೇ ಇದೀಗ ಸಂಪೂರ್ಣ ಗ್ರಾಮವೇ ಚೀನಾ ವಸ್ತು ನಿಷೇಧಿಸಿದೆ. 

BSYಗೆ ವದರಿ ನೀಡಿದ ಟಾಸ್ಕ್ ಫೋರ್ಸ: ಅಂತರ್ ಜಿಲ್ಲಾ ಓಡಾಟಕ್ಕೆ ಬೀಳುತ್ತಾ ಬ್ರೇಕ್?

UP Cm Yogi adityanath to Karnataka Coronavirus top 10 news of June 27

ನಗರದಲ್ಲಿ ದಿನೇ ದಿನೇ ಕೊರೋನಾ ಸೋಂಕಿತರ ಸಂಖ್ಯೆ ಹೆಚ್ಚಾಗುತ್ತಲೇ ಇದೆ. ಇದನ್ನು ತಡೆಯಲು ಟಾಸ್ಕ್ ಫೋರ್ಸ್‌ ಸರ್ಕಾರಕ್ಕೆ ವರದಿ ನೀಡಿದೆ.

ಕ್ರಿಕೆಟ್ ಭವಿಷ್ಯ ಏನು? ಐಸಿಸಿ, ಬಿಸಿ​ಸಿಐಗೆ ಸ್ಟಾರ್‌ ಸಂಸ್ಥೆ ಪತ್ರ!...

UP Cm Yogi adityanath to Karnataka Coronavirus top 10 news of June 27

ಕೊರೋನಾ ಸೋಂಕಿ​ನಿಂದಾಗಿ ಕ್ರಿಕೆಟ್‌ ಚಟು​ವ​ಟಿಕೆಗಳು ಸ್ಥಗಿತಗೊಂಡಿದ್ದು, ಸ್ಟಾರ್‌ ಸಂಸ್ಥೆ ಕೋಟ್ಯಂತರ ರುಪಾಯಿ ಆದಾಯ ನಷ್ಟ ಅನು​ಭ​ವಿ​ಸು​ತ್ತಿದೆ. ಈ ಕುರಿತಂತೆ ಸ್ಟಾರ್ ಸ್ಫೋರ್ಟ್ಸ್ ಐಸಿಸಿ, ಬಿಸಿಸಿಐ ಪತ್ರ ಬರೆದಿದೆ. ಈ ಕುರಿತಾದ ಒಂದು ರಿಪೋರ್ಟ್ ಇಲ್ಲಿದೆ ನೋಡಿ.

ಬೆಳ್ಳಂಬೆಳಗ್ಗೆ ಸಲ್ಮಾನ್‌ ಖಾನ್ ಪೋಸ್ಟ್‌: ವಾವ್ ಎಂದ ಫ್ಯಾನ್ಸ್‌..!...

UP Cm Yogi adityanath to Karnataka Coronavirus top 10 news of June 27

ಬಾಲಿವುಡ್ ನಟ ಸಲ್ಮಾನ್‌ ಖಾನ್ ಮಾಡಿರೋ ಪೋಸ್ಟ್‌ ನೋಡಿ ಫ್ಯಾನ್ಸ್ ಸಖತ್ ಖುಷಿಯಾಗಿದ್ದಾರೆ. ಸ್ಕ್ರೀನ್‌ ಮೇಲೆ ನಟಿಸಿ ಜನರ ಮನ ಗೆದ್ದ ಸಲ್ಮಾನ್ ಅದರ ಹೊರತಾಗಿಯೂ ಜನರ ಮನಸಲ್ಲಿ ವಿಶೇಷ ಸ್ಥಾನ ಹೊಂದಿದ್ದಾರೆ.

ಸ್ಯಾಂಡಲ್‍ವುಡ್‍ ಕ್ಯೂಟ್ ಕಪಲ್ ದಿಗಂತ್-ಐಂದ್ರಿತಾ ಜಾಲಿ ಟ್ರಿಪ್: ಇದು ಯಾವ ಸ್ಥಳ ಹೇಳಿ..?

UP Cm Yogi adityanath to Karnataka Coronavirus top 10 news of June 27

ಕಳೆದ ಮೂರು ತಿಂಗಳಗಳ ಕಾಲ ಲಾಕ್​ಡೌನ್​ನಿಂದಾಗಿ ಮನೆಯಲ್ಲೇ ಲಾಕ್​ ಆಗಿದ್ದ ಸೆಲೆಬ್ರಿಟಿಗಳು ಇದೀಗ ಮೆಲ್ಲನೆ ಮೆನಗಳಿಂದ ಹೊರ ಬೀಳುತ್ತಿದ್ದಾರೆ. ಲಾಕ್​ಡೌನ್​ ಸಡಿಲಗೊಳ್ಳುತ್ತಿದ್ದಂತೆಯೇ ಸ್ಯಾಂಡಲ್‍ವುಡ್‍ನ ಕ್ಯೂಟ್ ಕಪಲ್ ದಿಗಂತ್ ಹಾಗೂ​ ಐಂದ್ರಿತಾ ರೇ ಜಾಲಿ ಟ್ರಿಪ್ ಹೋಗಿದ್ದಾರೆ. ತಾವಷ್ಟೇ ಅಲ್ಲದೇ ಕುಟುಂಬದೊಂದಿಗೆ ಪ್ರವಾಸ ಹೋಗಿದ್ದಾರೆ. ಅಂದ್ಹಾಗೆ ಇವರು ಹೋಗಿರುವ ಪ್ಲೇಸ್ ಯಾವುದು..?

ಚೀನಾ ವಸ್ತು ಬಹಿಷ್ಕರಿಸಲು ಭಾರತದ ಆಟೋಮೊಬೈಲ್ ಕ್ಷೇತ್ರ ಹಿಂದೇಟು!.

UP Cm Yogi adityanath to Karnataka Coronavirus top 10 news of June 27

 ಚೀನಿ ವಸ್ತುಗಳನ್ನು ಬಹಿಷ್ಕರಿಸುವ ಬಹುದೊಡ್ಡ ಅಭಿಯಾನ ನಡೆಯುತ್ತಿದೆ. ಹಲವು ಕ್ಷೇತ್ರಗಳು ಚೀನಿ ವಸ್ತುಗಳನ್ನು ನಿಷೇಧಿಸಿದೆ. ಆದರೆ ಭಾರತದ ಆಟೋಮೊಬೈಲ್ ಕ್ಷೇತ್ರ ಚೀನಾ ವಸ್ತು ಬಹಿಷ್ಕರಿಸಲು ಹಿಂದೇಟು ಹಾಕಿದೆ.

Latest Videos
Follow Us:
Download App:
  • android
  • ios