ನವ​ದೆ​ಹ​ಲಿ(ಜೂ.27): ಟಿ20 ವಿಶ್ವ​ಕಪ್‌, ಐಪಿ​ಎಲ್‌ ಹಾಗೂ ಭಾರತ ತಂಡದ ದ್ವಿಪ​ಕ್ಷೀಯ ಸರ​ಣಿ​ಗಳ ಭವಿ​ಷ್ಯದ ಬಗ್ಗೆ ಗೊಂದಲ ಸೃಷ್ಟಿ​ಯಾ​ಗಿ​ರುವ ಹಿನ್ನೆಲೆಯಲ್ಲಿ ಪ್ರಸಾರ ಹಕ್ಕು ಹೊಂದಿ​ರುವ ಸ್ಟಾರ್‌ ಸ್ಪೋರ್ಟ್ಸ್ ವಾಹಿನಿ, ಅಂತಾ​ರಾ​ಷ್ಟ್ರೀಯ ಕ್ರಿಕೆಟ್‌ ಸಮಿತಿ (ಐ​ಸಿ​ಸಿ) ಹಾಗೂ ಭಾರ​ತೀಯ ಕ್ರಿಕೆಟ್‌ ನಿಯಂತ್ರಣ ಮಂಡಳಿ (ಬಿ​ಸಿ​ಸಿಐ)ಗೆ ಪತ್ರ ಬರೆ​ದಿದೆ ಎಂದು ಮಾಧ್ಯ​ಮ​ವೊಂದು ವರದಿ ಮಾಡಿದೆ. ಟೂರ್ನಿ​ಗಳ ಆಯೋ​ಜನೆ ಬಗ್ಗೆ ಸ್ಪಷ್ಟತೆ ನೀಡು​ವಂತೆ ಪತ್ರದಲ್ಲಿ ತಿಳಿ​ಸ​ಲಾ​ಗಿದೆ ಎನ್ನ​ಲಾ​ಗಿದೆ.

ಕೊರೋನಾ ಸೋಂಕಿ​ನಿಂದಾಗಿ ಕ್ರಿಕೆಟ್‌ ಚಟು​ವ​ಟಿಕೆಗಳು ಸ್ಥಗಿತಗೊಂಡಿದ್ದು, ಸ್ಟಾರ್‌ ಸಂಸ್ಥೆ ಕೋಟ್ಯಂತರ ರುಪಾಯಿ ಆದಾಯ ನಷ್ಟ ಅನು​ಭ​ವಿ​ಸು​ತ್ತಿದೆ. ಟಿ20 ವಿಶ್ವ​ಕಪ್‌ ಹಾಗೂ ಐಪಿ​ಎಲ್‌ ನಡೆ​ಸು​ವು​ದಾ​ದರೆ, ಈಗಿಂದಲೇ ಜಾಹೀ​ರಾತು ಬುಕ್ಕಿಂಗ್‌ ನಡೆ​ಸ​ಬೇಕು ಎಂದು ಪತ್ರದಲ್ಲಿ ಸಂಸ್ಥೆ ತಿಳಿ​ಸಿದೆ ಎಂದು ಹೇಳ​ಲಾ​ಗಿದೆ.

ಟಿ20 ವಿಶ್ವ​ಕಪ್‌ ಭವಿಷ್ಯ ಜುಲೈ​ನಲ್ಲಿ ನಿರ್ಧಾ​ರ?

ನವ​ದೆ​ಹ​ಲಿ: ಟಿ20 ವಿಶ್ವ​ಕಪ್‌ ಭವಿ​ಷ್ಯದ ಬಗ್ಗೆ ನಿರ್ಧಾರ ಪ್ರಕ​ಟಿ​ಸುವು​ದ​ನ್ನು ಅಂತಾ​ರಾ​ಷ್ಟ್ರೀಯ ಕ್ರಿಕೆಟ್‌ ಸಮಿತಿ (ಐ​ಸಿ​ಸಿ) ಮತ್ತಷ್ಟು ವಿಳಂಬಗೊಳಿ​ಸು​ತ್ತಿದೆ. ಗುರು​ವಾರ ನಡೆದ ಆನ್‌ಲೈನ್‌ ಸಭೆಯಲ್ಲಿ ವಿಶ್ವ​ಕಪ್‌ ನಡೆ​ಸುವ ಬಗ್ಗೆ ಯಾವುದೇ ನಿರ್ಧಾರ ಕೈಗೊ​ಳ್ಳ​ಲಾ​ಗ​ಲಿಲ್ಲ. 

ಗಂಗೂಲಿ, ಧೋನಿ ಕೊಹ್ಲಿಗೆ ಸಿಕ್ಕ ಪ್ರಶಂಸೆ ದ್ರಾವಿಡ್‌ಗೆ ಸಿಗಲಿಲ್ಲ; ಗಂಭೀರ್!

ಜುಲೈ 2ನೇ ವಾರದಲ್ಲಿ ವಾರ್ಷಿಕ ಸಭೆ ನಡೆ​ಯ​ಲಿದ್ದು, ಆ ವೇಳೆ ತೀರ್ಮಾನ ಕೈಗೊ​ಳ್ಳುವ ಸಾಧ್ಯತೆ ಇದೆ ಎಂದು ಮೂಲ​ಗಳು ತಿಳಿ​ಸಿ​ರು​ವುದಾಗಿ ಮಾಧ್ಯ​ಮ​ವೊಂದು ವರದಿ ಮಾಡಿದೆ. ವಿಶ್ವ​ಕಪ್‌ ಭವಿಷ್ಯ ನಿರ್ಧಾರವಾಗುವ ವರೆಗೂ ಈ ವರ್ಷದ ಐಪಿ​ಎಲ್‌ ಟೂರ್ನಿಯ ಭವಿಷ್ಯವೂ ನಿರ್ಧಾರವಾಗು​ವು​ದಿಲ್ಲ. ಅಕ್ಟೋ​ಬರ್‌-ನವೆಂಬರ್‌ನಲ್ಲಿ ಆಸ್ಪ್ರೇ​ಲಿ​ಯಾ​ದಲ್ಲಿ ವಿಶ್ವ​ಕಪ್‌ ನಡೆ​ಯ​ಬೇ​ಕಿದೆ.

#NewsIn100Seconds | ಈ ಕ್ಷಣದ ಪ್ರಮುಖ ಹೆಡ್‌ಲೈನ್ಸ್

"