Asianet Suvarna News Asianet Suvarna News

ಕೊರೋನಾ ನಡು​ವೆ ದಾಖಲೆ ರಸಗೊಬ್ಬರ ಪೂರೈಕೆ: ಸದಾನಂದ ಗೌಡ

ಬಿತ್ತನೆ ಪ್ರದೇಶವೃದ್ಧಿಸಿ ರಸಗೊಬ್ಬರ ಬೇಡಿಕೆ ಹೆಚ್ಚಾ​ದಾಗ ಅದಕ್ಕೆ ತಕ್ಕಂತೆ ಪೂರೈಕೆ ವ್ಯವಸ್ಥೆ ಮಾಡಿ ಎಲ್ಲೂ ರಸಗೊಬ್ಬರ ಕೊರತೆಯಾಗದಂತೆ ನೋಡಿಕೊಳ್ಳಲಾಯಿತು. ಇದರಿಂದಾಗಿ ಕೃಷಿವಲಯ ಶೇ. 3.7ರಷ್ಟು ಬೆಳವಣಿಗೆ ಸಾಧಿಸಲು ಸಾಧ್ಯವಾಯಿತು ಎಂದು ಮಾಹಿತಿ ನೀಡಿ​ದ​ ಸಚಿವ ಡಿ.ವಿ.ಸದಾನಂದ ಗೌಡ  

Union Minister Sadananda Gowda Fertilizer supply grg
Author
Bengaluru, First Published Feb 13, 2021, 9:41 AM IST

ನವದೆಹಲಿ(ಫೆ.13): ಕೊರೋನಾ ಸಂಕಷ್ಟದ ನಡು​ವೆಯೂ ದೇಶದ ಯಾವುದೇ ಭಾಗದಲ್ಲಿ ರಸಗೊಬ್ಬರ ಕೊರತೆಯಾಗದಂತೆ ನೋಡಿಕೊಳ್ಳಲಾಗಿದ್ದು, ಕಳೆದ ವರ್ಷಕ್ಕೆ ಹೋಲಿಸಿದರೆ ಈ ಸಲ ರಸಗೊಬ್ಬರ ಪೂರೈಕೆ ಶೇ.25ರಷ್ಟು ಹೆಚ್ಚಾಗಿದೆ ಎಂದು ಕೇಂದ್ರ ರಾಸಾಯನಿಕ ಮತ್ತು ರಸಗೊಬ್ಬರ ಸಚಿವ ಡಿ.ವಿ.ಸದಾನಂದ ಗೌಡ ಹೇಳಿದ್ದಾರೆ.

ರಾಜ್ಯ ಸಭೆಯಲ್ಲಿ ಶುಕ್ರ​ವಾರ ಪ್ರಶ್ನೋತ್ತರ ವೇಳೆ ಉತ್ತ​ರ​ಪ್ರ​ದೇ​ಶದ ಜಿ.ಬಿ.ಎಲ್‌. ನರಸಿಂಹರಾವ್‌ ಅವರು ಕೇಳಿದ ಪೂರಕ ಪ್ರಶ್ನೆಗೆ ಉತ್ತ​ರಿ​ಸಿದ ಸದಾ​ನಂದ ಗೌಡ, ಕೊರೋನಾ ಅವ​ಧಿಯಲ್ಲಿ ರಸಗೊಬ್ಬರ ಉತ್ಪಾದನೆ ಮತ್ತು ಸಾಗಣೆ ಬಹು​ದೊ​ಡ್ಡ ಸವಾ​ಲಾ​ಗಿತ್ತು. ಆದರೆ ಇವನ್ನೆಲ್ಲ ಸಮರ್ಪಕವಾಗಿ ನಿಭಾಯಿ​ಸ​ಲಾ​ಯಿತು. ಬಿತ್ತನೆ ಪ್ರದೇಶವೃದ್ಧಿಸಿ ರಸಗೊಬ್ಬರ ಬೇಡಿಕೆ ಹೆಚ್ಚಾ​ದಾಗ ಅದಕ್ಕೆ ತಕ್ಕಂತೆ ಪೂರೈಕೆ ವ್ಯವಸ್ಥೆ ಮಾಡಿ ಎಲ್ಲೂ ರಸಗೊಬ್ಬರ ಕೊರತೆಯಾಗದಂತೆ ನೋಡಿಕೊಳ್ಳಲಾಯಿತು. ಇದರಿಂದಾಗಿ ಕೃಷಿವಲಯ ಶೇ. 3.7ರಷ್ಟು ಬೆಳವಣಿಗೆ ಸಾಧಿಸಲು ಸಾಧ್ಯವಾಯಿತು ಎಂದು ಸಚಿವರು ಮಾಹಿತಿ ನೀಡಿ​ದ​ರು.

ಅರ್ಹತೆ ಇಲ್ಲದವರು ಮೀಸಲಾತಿ ಕೇಳೋದು ರಾಜಕೀಯ ನಾಟಕ: ಸದಾನಂದ ಗೌಡ

ಉಪ ರಾಷ್ಟ್ರ​ಪತಿ ಮೆಚ್ಚು​ಗೆ: 

ಸಭಾ​ಪತಿ ಪೀಠ​ದ​ಲ್ಲಿದ್ದ ಉಪ​ರಾ​ಷ್ಟ್ರ​ಪತಿ ವೆಂಕಯ್ಯ ನಾಯ್ಡು ಅವರು ಕೊರೋನಾದ ನಡು​ವೆಯೂ ರಸಗೊಬ್ಬರ ಕೊರತೆಯಾಗದಂತೆ ನೋಡಿಕೊಂಡದ್ದಕ್ಕೆ ಸಚಿವ ಡಿ.ವಿ. ಸದಾನಂದಗೌಡರನ್ನು ಅಭಿನಂದಿಸಿದರು.
 

Follow Us:
Download App:
  • android
  • ios