ನವದೆಹಲಿ(ಫೆ.11): ಸಮುದಾಯ ಬೇಡಿಕೆ ಇಡುವುದರಲ್ಲಿ ಯಾವುದೇ ತೊಂದರೆಯಿಲ್ಲ. ಆದರೆ, ಜವಾಬ್ದಾರಿ ಇದ್ದವರು, ಅಧಿಕಾರದಲ್ಲಿದ್ದವರು ಮೀಸಲಾತಿ ಹಿಂದೆ ಹೋಗುವುದು ಸರಿಯಲ್ಲ. ಅರ್ಹತೆ ಇದ್ದವರು ಕೇಳಬೇಕು. ಕೆಲವು ವೇಳೆ ಅರ್ಹತೆ ಇಲ್ಲದವರು ಕೇಳುವುದು ರಾಜಕೀಯ ನಾಟಕವಾಗಿದೆ. ಈ ಸಂಬಂಧ ಕುಲ ಅಧ್ಯಯನ ಮಾಡಿ ರಾಜ್ಯ ಸರ್ಕಾರ‌ ಕಳುಹಿಸಿದರೆ ನಾವು ಪರಿಶೀಲಿಸುತ್ತೇವೆ ಎಂದು ಕೇಂದ್ರ ಸಚಿವ ಸದಾನಂದ ಗೌಡ ಹೇಳಿದ್ದಾರೆ. 

ಬುಧವಾರ ದೆಹಲಿಯಲ್ಲಿ ನಡೆದ ರಾಜ್ಯದ ಬಿಜೆಪಿ ಸಂಸದರ ಸಭೆಯಲ್ಲಿ ಪಾಲ್ಗೊಂಡ ಬಳಿಕ ಮಾಧ್ಯಮದವರೊಂದಿಗೆ ಮಾತನಾಡಿದ ಸಚಿವ ಸದಾನಂದ ಗೌಡ, ಹಿಂದೆ ಮೂರು ತಿಂಗಳಿಗೊಮ್ಮೆ ಸಭೆ ಸೇರಿ ನಿರ್ಣಯ ಮಾಡಿತ್ತು. ಅದೇ ರೀತಿ ಈಗ ಸಭೆ ನಡೆಸಲಾಗಿದೆ. ಮಹಾಮಾರಿ ಕೊರೋನಾದಿಂದ ಸಭೆ ನಡೆಸಲು ಸಾಧ್ಯವಾಗಿರಲಿಲ್ಲ.  ಹೀಗಾಗಿ ಈಗ ಸಭೆ ನಡೆಸಲಾಗಿದೆ. ಸಂಘಟನತ್ಮಾಕ ವರಿಷ್ಠರನ್ನು ಕರೆಸಿ ಚರ್ಚಿಸಲಾಗಿದೆ. ರಾಜ್ಯದ ಅಭಿವೃದ್ಧಿ ಕಾರ್ಯಗಳ ಬಗ್ಗೆ ಸಮಾಲೋಚನೆ ಮಾಡಲಾಗಿದೆ ಎಂದು ತಿಳಿಸಿದ್ದಾರೆ. 

'ಮೀಸಲಾತಿ ಕೊಡಿ.. ಇಲ್ಲಾ ರಾಜೀನಾಮೆ ಕೊಡಿ' ಸಿಎಂಗೆ ಪಂಚಮಸಾಲಿ ಸ್ವಾಮೀಜಿ ಸವಾಲ್

ಇದೇ ಸಂದರ್ಭದಲ್ಲಿ ಮಾತನಾಡಿದ ಮತ್ತೋರ್ವ ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ಅವರು, ಸಭೆಗೆ ಬೇರೆ ವಿಶೇಷ ಕಾರಣಗಳಿಲ್ಲ. ಕರ್ನಾಟಕದ ಅಭಿವೃದ್ಧಿ ಬಗ್ಗೆ ಎಲ್ಲರೂ ಸೇರಿ ಚರ್ಚೆ ಮಾಡಿದ್ದೇವೆ. ರಾಜ್ಯದ ಸಂಸದರ ಅಭಿಪ್ರಾಯಗಳನ್ನ ಪಡೆಯಲಾಗಿದೆ. ಸಂಘಟನಾತ್ಮಕ ವಿಚಾರಗಳ ಬಗ್ಗೆಯೂ ಕೂಡ ಚರ್ಚೆ ನಡೆಸಲಾಗಿದೆ. ಇದೊಂದು ಸೌರ್ಹದಯುತವಾದ ಭೇಟಿಯಾಗಿದೆ. ಬೈ ಎಲೆಕ್ಷನ್‌ನಲ್ಲಿ ಬಿಜೆಪಿ ಗೆಲ್ಲಲಿದೆ ಎಂದು ತಿಳಿಸಿದ್ದಾರೆ.