ದಿನ ಯಾವುದೇ ಇರಲಿ ಸುದ್ದಿಗಳಿಗೇನೂ ಬರವಿರುವುದಿಲ್ಲ. ರಾಜ್ಯದಲ್ಲಿ ಉಪಚುನಾವಣೆಯ ಬಿಸಿ.ಬಿಜೆಪಿ ಸ್ಟಾರ್ ಪ್ರಚಾರಕರ ಪಟ್ಟಿಯಲ್ಲಿ ಬಿಎಸ್ ಯಡಿಯೂರಪ್ಪ ಅವರಿಗೆ ಎರಡನೇ ಸ್ಥಾನ, 20 ಲಕ್ಷ ಜನರಿಗೆ ಸಹಾಯವಾಗುವಂಥಹ ಅದ್ಭುತ ಯೋಜನೆ ಘೋಷಿಸಿದ ಮೋದಿ ಸರ್ಕಾರ, ಪುತ್ರ ಅಭಿಷೇಕ ಬರೆದ ಪತ್ತರ ರಿವೀಲ್ ಮಾಡಿದ ಬಿಗ್ ಬಿ ಅಮಿತಾಭ್ ಬಚ್ಚನ್, ಮಾಲೀಕನ ಮೇಲಿನ ಪ್ರೀತಿಗೆ  ಕಾಡುಕೋಣವನ್ನೇ ತಡದ ಪ್ರೀತಿಯ ಶ್ವಾನ.. ನವೆಂಬರ್ 17 ರ ಟಾಪ್ 10 ಸುದ್ದಿಗಳ ಗುಚ್ಛ ನಿಮ್ಮ ಮುಂದೆ..

1. ಮೋದಿ ಸರ್ಕಾರದ ಮಹತ್ವದ ಘೋಷಣೆ: 20 ಲಕ್ಷ ಮಂದಿಗೆ ಲಾಭ!ಕೇಂದ್ರ ಸರ್ಕಾರ ರಾಷ್ಟ್ರ ರಾಜಧಾನಿ ದೆಹಲಿಯ ಹಳ್ಳಿಗಾಡು ಪ್ರದೇಶದಲ್ಲಿ ನೆಲೆಸುತ್ತಿರುವ ಲಕ್ಷಾಂತರ ಮಂದಿಗೆ ಸಿಹಿ ಸುದ್ದಿ ನೀಡಿದೆ. ಪರಿಸರ ಸಚಿವ ಪ್ರಕಾಶ್ ಜಾವಡೇಕರ್ ಟ್ವೀಟ್ ಮೂಲಕ ಈ ಮಾಹಿತಿ ನೀಡಿದ್ದಾರೆ. ಟ್ವಿಟ್ ಮಾಡಿರುವ ಕೇಂದ್ರ ಸಚಿವ ಪ್ರಕಾಶ್ ಜಾವಡೇಕರ್ 'ಪ್ರಧಾನ ಮಂತ್ರಿ ನರೇಂದ್ರ ಮೋದಿ ಸರ್ಕಾರ ದೆಹಲಿ ಪರ ಐತಿಹಾಸಿಕ ನಿರ್ಧಾರ ತೆಗೆದುಕೊಳ್ಳುತ್ತಾ, 88 ಹಳ್ಳಿಗಳನ್ನು ನಗರೀಕೃತ ಗ್ರಾಮವನ್ನಾಗಿಸುವ ನಿರ್ಧಾರ ತೆಗೆದುಕೊಂಡಿದೆ' ಎಂದಿದ್ದಾರೆ.
 

2.ಬಿಜೆಪಿ ಸ್ಟಾರ್ ಪ್ರಚಾರಕರ ಪಟ್ಟಿಯಲ್ಲಿ ನಳಿನ್ ಅಗ್ರಗಣ್ಯ, BSYಗೆ ಸೆಕೆಂಡ್ ಪ್ಲೇಸ್

ಉಪಚುನಾವಣೆಯಲ್ಲಿ ಗೆಲ್ಲಲೇಬೇಕೆಂದು ಜಿದ್ದಿಗೆ ಬಿದ್ದಿರುವ ಬಿಜೆಪಿ,  40 ಸ್ಟಾರ್​ ಪ್ರಚಾರಕನ್ನು ನೇಮಿಸಿದೆ. ಅಚ್ಚರಿ ಎಂಬಂತೆ ಸ್ಟಾರ್ ಪ್ರಚಾರಕ ಪಟ್ಟಿಯಿಂದ ನಟ ಜಗ್ಗೇಶ್, ಸಂಸದ ತೇಜಸ್ವಿ ಸೂರ್ಯ ಸೇರಿ ಹಲವು ಪ್ರಮುಖರಿಗೆ ಕೊಕ್​​ ನೀಡಲಾಗಿದೆ. ರಾಜ್ಯದ ನಾಯಕರಿಗೆ ಹೆಚ್ಚಿನ ಪ್ರಾಶಸ್ತ್ಯ ನೀಡುವ ಉದ್ದೇಶದಿಂದ ಕೇಂದ್ರದ ಯಾವ ನಾಯಕರಿಗೂ ಬಿಜೆಪಿ ಸ್ಟಾರ್ ಪ್ರಚಾರಕರ ಪಟ್ಟಿಯಲ್ಲಿ ಸ್ಥಾನ ನೀಡಿಲ್ಲ. 

3. ಇತಿಹಾಸ ಸೃಷ್ಟಿಸಿ ತೆರೆಯ ಮರೆಗೆ ಸಿಜೆಐ ಗೊಗೋಯ್

ಗೊಗೋಯ್‌ ಅವರದು. ಅಸ್ಸಾಂನ ಮುಖ್ಯಮಂತ್ರಿಯ ಮಗನಾದ ಅವರು ಭಾರತದ ಮುಖ್ಯ ನ್ಯಾಯಮೂರ್ತಿಯಾಗಿದ್ದೇ ಒಂದು ಕುತೂಹಲದ ಕತೆ. ಸಿಜೆಐ ಆದಾಗ ಈಶಾನ್ಯದಿಂದ ಬಂದ ಮೊದಲ ಸಿಜೆಐ ಎಂಬ ಇತಿಹಾಸ ಸೃಷ್ಟಿಸಿದ್ದ ಅವರು ಈಗ ನಿವೃತ್ತಿಯಾಗುವಾಗಲೂ ಇತಿಹಾಸ ಸೃಷ್ಟಿಸಿಯೇ ತೆರಳುತ್ತಿದ್ದಾರೆ.

4. ನಾನು ನಾಟಿ ಬಾಯ್: ಅಭಿಷೇಕ್ ಬರೆದ ಪತ್ರ ರಿವೀಲ್ ಮಾಡಿದ ಅಮಿತಾಭ್ ಬಚ್ಚನ್!

ಬಾಲಿವುಡ್ ಬಿಗ್- ಬಿ ಅಮಿತಾಭ್ ಕುಟುಂಬದವರ ಜೊತೆಗಿನ ಬಾಂಧವ್ಯವನ್ನು ಪದಗಳಲ್ಲಿ ವರ್ಣಿಸಲು ಸಾಧ್ಯವಿಲ್ಲ. ಮಕ್ಕಳು ಹಾಗೂ ಮೊಮ್ಮಕ್ಕಳೊಂದಿಗೆ ಕಳೆದ ಅಮೂಲ್ಯ ಕ್ಷಣವನ್ನು ಸಾಮಾಜಿಕ ಜಾಲತಾಣದಲ್ಲಿ ಶೇರ್ ಮಾಡಿಕೊಳ್ಳುತ್ತಾರೆ. ಅಮಿತಾಭ್ ಚಿತ್ರೀಕರಣಕ್ಕೆಂದು ವಿದೇಶಕ್ಕೆ ತೆರಳಿದಾಗ ಪುತ್ರ ಅಭಿಪೇಶ್ ಬರೆದ ಪತ್ರವನ್ನು ಟ್ಟಿಟರ್‌ನಲ್ಲಿ 'ಅಭಿಷೇಕ್ ಪ್ರೀತಿಯಿಂದ ನನಗೆ ಬರೆದ ಪತ್ರವಿದು' ಎಂದು ಶೇರ್ ಮಾಡಿಕೊಂಡಿದ್ದಾರೆ.

5. ವಿವಾಹಿತರಿಗೆ 'ಗುಡ್ ನ್ಯೂಸ್' ಯಾವಾಗ ಎಂದು ಕೇಳೋ ಅಭ್ಯಾಸ ಬಿಟ್ಬಿಡಿ

ಭಾರತೀಯ ಸಮಾಜದಲ್ಲಿ ಯಾರಾದರೂ 20 ದಾಟಿದರೆ ಸಾಕು, ಪಕ್ಕದ ಮನೆಯವರು, ಪರಿಚಿತರು, ದೂರದ ನೆಂಟರಿಂದ ಹಿಡಿದು ಊರವರವರೆಗೆ ಎಲ್ಲರಿಗೂ ಅವರ ಮದುವೆಯದೇ ಯೋಚನೆಯೇನೋ ಎಂಬಂತೆ ಮದುವೆ ಯಾವಾಗ, ಮದುವೆ ಯಾವಾಗ ಎಂಬ ಪ್ರಶ್ನೆ ಆ ಯುವಕ/ಯುವತಿಯ ಕಿವಿಯಲ್ಲಿ ಮೊಳಗೀ ಮೊಳಗಿ ತಲೆ ಚಿಟ್ಟು ಹಿಡಿದಿರುತ್ತದೆ. ಇಷ್ಟು ಸಾಲದೆಂಬಂತೆ ಅವರಿಗೊಂದು ಜೊತೆ ನೋಡುವ ಕಾಯಕಕ್ಕೆ ಎಲ್ಲೆಲ್ಲಿದ್ದವರೋ ಇಳಿದು ಬಿಡುತ್ತಾರೆ. ಅಬ್ಬಾ, ಅಂತೂ ಇಂತೂ ಮದುವೆಯಾಯ್ತು, ಇನ್ನು ಇವರ ಮದುವೆ ಯಾವಾಗ ಎಂಬ ಪ್ರಶ್ನೆಯಿಂದ ಬಿಡುಗಡೆ ದೊರಕಿತಲ್ಲಾ ಎಂದು ನಿಟ್ಟುಸಿರು ಬಿಡುತ್ತಿದ್ದಂತೆಯೇ ಧುತ್ತೆಂದು ಎದುರಾಗುವ ಮತ್ತೊಂದು ಪ್ರಶ್ನೆ, ಮನೆಗೆ ಮಗು ಬರೋದು ಯಾವಾಗ?!

6. ಗೌತಮ್ ಗಂಭೀರ್ ನಾಪತ್ತೆ!: ಗಲ್ಲಿ ಗಲ್ಲಿಯಲ್ಲೂ ಪೋಸ್ಟರ್‌ಗಳ ಭರಾಟೆ!

ಮಾಜಿ ಕ್ರಿಕೆಟಿಗ ಹಾಗೂ ರಾಜಕಾರಣಿ ಗೌತಮ್ ಗಂಭೀರ್ ನಾಪತ್ತೆಯಾಗಿದ್ದಾರೆ, ಇಡೀ ದೆಹಲಿ ಇವರಿಗಾಗಿ ಹುಡುಕಾಟ ನಡೆಸುತ್ತಿದೆ ಎಂಬ ಮಿಸ್ಸಿಂಗ್ ಪೋಸ್ಟರ್‌ಗಳು ರಾಷ್ಟ್ರ ರಾಜಧಾನಿಯ ಮೂಲೆ ಮೂಲೆಯಲ್ಲೂ ಕಾಣಲಾರಂಭಿಸಿವೆ. 

7. ಅಯೋಧ್ಯೆ ಹೊರ ಭಾಗದಲ್ಲಿ ಮಸೀದಿಗೆ ಜಾಗ ನೀಡಿ, ಸರ್ಕಾರಕ್ಕೆ ವಿಹಿಂಪ ಒತ್ತಾಯ!

ಸುಪ್ರೀಂಕೋರ್ಟ್‌ ಆದೇಶದಂತೆ ಮಸೀದಿ ನಿರ್ಮಾಣಕ್ಕೆ ಅಯೋಧ್ಯೆಯಲ್ಲಿ ನೀಡಲಾಗುವ 5 ಎಕರೆ ಜಮೀನು ರಾಮ ಜನ್ಮಭೂಮಿ ಭೂಮಿ ಅಯೋಧ್ಯೆಯಿಂದ 15-20 ಕಿ.ಮೀ ದೂರದಲ್ಲಿರಬೇಕು ಎಂದು ವಿಶ್ವ ಹಿಂದೂ ಪರಿಷತ್‌ ಒತ್ತಾಯಿಸಿದೆ. ಈ ಬಗ್ಗೆ ಪ್ರತಿಕ್ರಿಯಿಸಿರುವ ವಿಶ್ವ ಹಿಂದೂ ಪರಿಷತ್‌ ಪ್ರಾಂತೀಯ ವಕ್ತಾರ ಶರದ್‌ ವರ್ಮಾ, ‘ನಾವು ಈ ಹಿಂದಿನಿಂದಲೂ ಮೊಘಲ್‌ ದೊರೆ ಬಾಬರ್‌ ಹೆಸರಿನಲ್ಲಿ ಯಾವುದೇ ಮಸೀದಿ ನಿರ್ಮಾಣ ಮಾಡಬಾರದೆಂದು ಒತ್ತಾಯಿಸುತ್ತಾ ಬಂದಿದ್ದೇವೆ. ಅದೇ ರೀತಿ ಇದೀಗ ಅಯೋಧ್ಯೆಯಲ್ಲಿ ನಿರ್ಮಾಣವಾಗುವ ಮಸೀದಿಯು ಚೌಧಾ ಕೋಶಿ ಪರಿಕ್ರಮ ಪ್ರದೇಶದಿಂದ ಹೊರಗಿರಬೇಕು’ ಎಂದು ಹೇಳಿದ್ದಾರೆ.

 

8. ಮೇಕಪ್ ಅವತಾರದಲ್ಲಿ ರಾನು ಮಂಡಲ್‌ ನೋಡಿ ದಂಗಾದ ನೆಟ್ಟಿಗರು!

ಅದೃಷ್ಟ ಹೇಗೆ ಬದಲಾಗುತ್ತೆ ಅಂತ ಹೇಳುವುದಕ್ಕೆ ಆಗುವುದಿಲ್ಲ. ರೈಲ್ವೇ ಸ್ಟೇಷನ್‌ನಲ್ಲಿ ಲತಾ ಮಂಗೇಶ್ಕರ್ ಹಾಡು ಹೇಳಿಕೊಂಡು ಇದ್ದ ರಾನು ಮಂಡಾಲ್‌ ರಿಯಾಲಿಟಿ ಶೋಗೆ ಗೆಸ್ಟ್‌ ಆಗಿ ಬಂದಿದ್ದೇ ಇದಕ್ಕೆ ತಾಜಾ ಉದಾಹರಣೆ. ಲತಾ ಮಂಗೇಶ್ಕರ್ 'ಏಕ್ ಪ್ಯಾರ್‌ ಕ ನಗ್ಮಾ ಹೇ' ಹಾಡು ಇವರ ಬದುಕಿನ ನಗ್ಮಾವನ್ನೇ ಬದಲಾಯಿಸಿತು.  ರಾತ್ರೋರಾತ್ರಿ ಸೋಷಿಯಲ್  ಮೀಡಿಯಾ ಸ್ಟಾರ್ ಆದರು. 

 

9. ಕಳಂಕಿತ ಆಟ​ಗಾ​ರರ ಜತೆ ಆಡಿದ್ದೆ:  ಸ್ಫೋಟಕ ಮಾಹಿತಿ ಬಿಚ್ಚಿಟ್ಟ ಮತ್ತೊಬ್ಬ ಪಾಕ್ ಕ್ರಿಕೆಟಿಗ..!

ಪಾಕಿಸ್ತಾನ ಕ್ರಿಕೆಟ್‌ ತಂಡ​ದಲ್ಲಿ ತಪ್ಪು ಮಾಡಿ​ದ​ವರ ಜತೆಯಲ್ಲಿ ಆಡ​ಬೇ​ಕಾದ ಅನಿ​ವಾ​ರ್ಯತೆ ಇತ್ತು ಎಂದು ಮಾಜಿ ನಾಯಕ ಮೊಹ​ಮದ್‌ ಹಫೀಜ್‌ ಹೇಳಿ​ಕೊಂಡಿ​ದ್ದಾರೆ. ಮಾಜಿ ವೇಗಿ ಶೋಯೆಬ್‌ ಅಖ್ತರ್‌ ನಡೆ​ಸಿ​ರುವ ಯೂ-ಟ್ಯೂಬ್‌ ಸಂದ​ರ್ಶ​ನ​ದಲ್ಲಿ ಹಫೀಜ್‌, ಪಾಕಿ​ಸ್ತಾ​ನ ಕ್ರಿಕೆಟ್‌ನ ಸ್ಥಿತಿ ಬಗ್ಗೆ ವಿವ​ರಿ​ಸಿ​ದ್ದಾರೆ. 

 

10. ಸಿನಿಮೀಯವಾಗಿ ಕಿಡ್ನಾಪ್‌, ಬಸ್‌ ನಿಲ್ದಾಣ ಬಳಿ ನಿಂತಿದ್ದವನ ಹೊತ್ತೊಯ್ದರು!

ಹಾಡಹಗಲೇ ಅಪರಿಚಿತ ನಾಲ್ಕು ಜನರ ತಂಡವೊಂದು ಸಾರ್ವಜನಿಕರಿಗೆ ಮಚ್ಚು ಮತ್ತು ಪಿಸ್ತೂಲ್‌ ತೋರಿ ವ್ಯಕ್ತಿಯೊಬ್ಬರನ್ನು ಅಪಹರಣ ಮಾಡಿರುವ ಸಿನಿಮೀಯ ಮತ್ತು ಜನರನ್ನು ಬೆಚ್ಚಿ ಬೀಳಿಸುವ ಘಟನೆ ಲಿಂಗಸೂಗುರು ಪಟ್ಟಣದ ಬಸ್‌ ನಿಲ್ದಾಣ ಬಳಿ ನಡೆದಿದೆ.