ಲಾಹೋರ್‌[ನ.17]: ಪಾಕಿಸ್ತಾನ ಕ್ರಿಕೆಟ್‌ ತಂಡ​ದಲ್ಲಿ ತಪ್ಪು ಮಾಡಿ​ದ​ವರ ಜತೆಯಲ್ಲಿ ಆಡ​ಬೇ​ಕಾದ ಅನಿ​ವಾ​ರ್ಯತೆ ಇತ್ತು ಎಂದು ಮಾಜಿ ನಾಯಕ ಮೊಹ​ಮದ್‌ ಹಫೀಜ್‌ ಹೇಳಿ​ಕೊಂಡಿ​ದ್ದಾರೆ. ಮಾಜಿ ವೇಗಿ ಶೋಯೆಬ್‌ ಅಖ್ತರ್‌ ನಡೆ​ಸಿ​ರುವ ಯೂ-ಟ್ಯೂಬ್‌ ಸಂದ​ರ್ಶ​ನ​ದಲ್ಲಿ ಹಫೀಜ್‌, ಪಾಕಿ​ಸ್ತಾ​ನ ಕ್ರಿಕೆಟ್‌ನ ಸ್ಥಿತಿ ಬಗ್ಗೆ ವಿವ​ರಿ​ಸಿ​ದ್ದಾರೆ. 

ನನ್ನ ಸುತ್ತಲೂ ಮ್ಯಾಚ್‌ ಫಿಕ್ಸರ್‌ಗಳಿದ್ದರು: ಸ್ಫೋಟಕ ಮಾಹಿತಿ ಬಿಚ್ಚಿಟ್ಟ ಪಾಕ್ ವೇಗಿ..!

‘ತಂಡ​ದಲ್ಲಿ ಕಳಂಕಿತ ಆಟ​ಗಾ​ರ​ರಿ​ದ್ದರು. ಅವರು ಮೋಸ​ದಾಟದಲ್ಲಿ ಭಾಗಿ​ಯಾ​ಗಿ​ದ್ದಾ​ರೆ ಎಂದು ಗೊತ್ತಿ​ದ್ದರೂ ಕ್ರಿಕೆಟ್‌ ಮಂಡಳಿ ಯಾವುದೇ ಕ್ರಮ ಕೈಗೊ​ಳ್ಳ​ಲಿಲ್ಲ. ಇದನ್ನು ಪ್ರಶ್ನಿ​ಸಿ​ದಾಗ ತಂಡ​ದಲ್ಲಿ ಮುಂದು​ವ​ರಿ​ಯ​ಬೇ​ಕಿ​ದ್ದರೆ ತುಟಿ ಬಿಚ್ಚ​ದಂತೆ ಆಗ್ರ​ಹಿ​ಸಿ​ದರು. ಹೀಗಾಗಿ ಅನಿ​ವಾರ್ಯ ಕಾರ​ಣ​ಗ​ಳಿಂದ ಕಳಂಕಿತರೊಂದಿಗೆ ಆಡಿದೆ’ ಎಂದು ಹಫೀಜ್‌ ಬೇಸರ ವ್ಯಕ್ತ​ಪ​ಡಿ​ಸಿ​ದ್ದಾರೆ. 

ನಾಯಕತ್ವದಲ್ಲಿ ಕೊಹ್ಲಿಗಿಲ್ಲ ಸರಿಸಾಟಿ; ಪಾಕ್ ಕ್ರಿಕೆಟಿಗನಿಂದ ಫುಲ್ ಮಾರ್ಕ್ಸ್!

ಇತ್ತೀ​ಚೆ​ಗಷ್ಟೇ ಟೀವಿ ಕಾರ್ಯ​ಕ್ರ​ಮ​ವೊಂದ​ರಲ್ಲಿ ಅಖ್ತರ್‌ ತಾವು ಆಡುತ್ತಿದ್ದ ವೇಳೆ ಪಾಕ್‌ ತಂಡ ಮ್ಯಾಚ್‌ ಫಿಕ್ಸರ್‌ಗಳಿಂದ ಕೂಡಿತ್ತು ಎಂದಿದ್ದರು. ನಾನು ಒಟ್ಟು 21 ಆಟಗಾರರ ವಿರುದ್ಧ ಆಡುತ್ತಿದ್ದೆ ಎನ್ನುವ ಮೂಲಕ ಮ್ಯಾಚ್ ಫಿಕ್ಸಿಂಗ್ ಕರಾಳ ಜಗತ್ತಿನ ರಹಸ್ಯವನ್ನು ಅನಾವರಣ ಮಾಡಿದ್ದರು.