ಮಿನಿ ಸಮರಕ್ಕೆ ಬಿಜೆಪಿಯ 40 ಸ್ಟಾರ್ ಪ್ರಚಾರಕರ ನೇಮಕ: ಪ್ರಮುಖ ನಾಯಕರಿಗೆ ಕೊಕ್..!
ಸರ್ಕಾರ ಉಳಿಸಿಕೊಳ್ಳಲು ಈ ರಾಜ್ಯದ 15 ಕ್ಷೇತ್ರಗಳ ಉಪಚುನಾವಣೆಯ ಪ್ರಚಾರದ ಭರಾಟೆ ದಿನದಿಂದ ದಿನಕ್ಕೆ ಕಾವೇರುತ್ತಿದೆ. ಇದರ ಮಧ್ಯೆ ಬಿಜೆಪಿ ಆಯಾ ಕ್ಷೇತ್ರಗಳಿಗೆ ಉಸ್ತುವಾರಿಗಳನ್ನ ನೇಮಿಸಿದೆ. ಸಾಲದಕ್ಕೆ ಸ್ಟಾರ್ ಪ್ರಚಾರಕರುಗಳನ್ನ ನೇಮಿಸಿದ್ದು, ಅಚ್ಚರಿ ಎಂಬಂತೆ ಪ್ರಮುಖರನ್ನು ಕೈಬಿಟ್ಟಿದೆ. ಹಾಗಾದ್ರೆ ಬಿಜೆಪಿ ಸ್ಟಾರ್ ಪ್ರಚಾರಕರ ಪಟ್ಟಿಯಲ್ಲಿ ಯಾರೆಲ್ಲ ಇದ್ದಾರೆ ಎನ್ನುವುದನ್ನು ಈ ಕೆಳಗಿನಂತಿದೆ.
ಬೆಂಗಳೂರು, (ನ.17): ಉಪಚುನಾವಣೆಯಲ್ಲಿ ಗೆಲ್ಲಲೇಬೇಕೆಂದು ಜಿದ್ದಿಗೆ ಬಿದ್ದಿರುವ ಬಿಜೆಪಿ, 40 ಸ್ಟಾರ್ ಪ್ರಚಾರಕನ್ನು ನೇಮಿಸಿದೆ.
ಅಚ್ಚರಿ ಎಂಬಂತೆ ಸ್ಟಾರ್ ಪ್ರಚಾರಕ ಪಟ್ಟಿಯಿಂದ ನಟ ಜಗ್ಗೇಶ್, ಸಂಸದ ತೇಜಸ್ವಿ ಸೂರ್ಯ ಸೇರಿ ಹಲವು ಪ್ರಮುಖರಿಗೆ ಕೊಕ್ ನೀಡಲಾಗಿದೆ. ರಾಜ್ಯದ ನಾಯಕರಿಗೆ ಹೆಚ್ಚಿನ ಪ್ರಾಶಸ್ತ್ಯ ನೀಡುವ ಉದ್ದೇಶದಿಂದ ಕೇಂದ್ರದ ಯಾವ ನಾಯಕರಿಗೂ ಬಿಜೆಪಿ ಸ್ಟಾರ್ ಪ್ರಚಾರಕರ ಪಟ್ಟಿಯಲ್ಲಿ ಸ್ಥಾನ ನೀಡಿಲ್ಲ.
ಬೈ ಎಲೆಕ್ಷನ್‌ಗೆ ಬಿಜೆಪಿ ಪಡೆ ರೆಡಿ: 15 ಕ್ಷೇತ್ರಗಳಿಗೆ ಉಸ್ತುವಾರಿಗಳ ನೇಮಕ
ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ಅಗ್ರಸ್ಥಾನದಲ್ಲಿದ್ರೆ, ಮುಖ್ಯಮಂತ್ರಿ ಬಿಎಸ್ವೈ 2ನೇ ಸ್ಥಾನದಲ್ಲಿರುವುದು ಚರ್ಚೆಗೆ ಗ್ರಾಸವಾಗಿದೆ.
ಯಶವಂತಪುರದಿಂದ ಟಿಕೆಟ್ ಸಿಕ್ಕಿಲ್ಲ ಎನ್ನುವ ಕಾರಣಕ್ಕೆ ಅಸಮಾಧಾನಗೊಂಡಿರುವ ನಟ ಜಗ್ಗೆಶ್, ಸಂಸದ ತೇಜಸ್ವಿ ಸೂರ್ಯ, ಸಂಸದ ಅನಂತ್ ಕುಮಾರ್ ಹೆಗ್ಡೆ, ನಟಿ ಮಾಳವಿಕ ಅವರ ಹೆಸರನ್ನು ಸಹ ಕೈಬಿಡಲಾಗಿದೆ.
ಅಷ್ಟೇ ಅಲ್ಲದೇ ಹಿರಿಯ ನಾಯಕರಾದ ಎಸ್ ಎಂ ಕೃಷ್ಣ, ಸಂಸದ ವಿ ಶ್ರೀನಿವಾಸ್ ಪ್ರಸಾದ್ ಹೆಸರೂ ಸಹ ಸ್ಟಾರ್ ಪ್ರಚಾರಕರ ಪಟ್ಟಿಯಲ್ಲಿ ಇಲ್ಲ.
ಪ್ರಧಾನಿ ನರೇಂದ್ರ ಮೋದಿ, ಕೇಂದ್ರ ಸಚಿವ ಅಮಿತ್ ಶಾ, ಜೆ ಪಿ ನಡ್ಡಾ, ಸ್ಮೃತಿ ಇರಾನಿ, ಪ್ರಕಾಶ್ ಜಾವಡೇಕರ್, ಪಿಯೂಶ್ ಗೋಯಲ್, ರಾಜ್ಯದಿಂದ ಆಯ್ಕೆಯಾಗಿ ಹೋಗಿರುವ ಕೇಂದ್ರ ಸಚಿವೆ ನಿರ್ಮಲಾ ಸೀತಾರಮನ್ ಈ ಬಾರಿಯ ಉಪಚುನಾವಣೆಯಲ್ಲಿ ಪ್ರಚಾರಕ್ಕೆ ಇಳಿಯುತ್ತಿಲ್ಲ.
ಸ್ಟಾರ್ ಪ್ರಚಾರಕರ ಹೆಸರು ಪಟ್ಟಿ:
1. ನಳಿನ್ ಕುಮಾರ್ ಕಟೀಲ್
2. ಬಿ.ಎಸ್.ಯಡಿಯೂರಪ್ಪ
3 ಡಿ.ವಿ ಸದಾನಂದಗೌಡ
4 ಪ್ರಹ್ಲಾದ್ ಜೋಷಿ
5 ಬಿ.ಎಲ್ ಸಂತೋಷ್
6 ಮುರುಳೀಧರರಾವ್
7 ಅರುಣ್ ಕುಮಾರ್
8 ಜಗದೀಶ್ ಶೆಟ್ಟರ್
9 ಲಕ್ಷ್ಮಣ ಸವದಿ
10 ಗೋವಿಂದ ಕಾರಜೋಳ
11 ಡಾ.ಸಿ.ಎನ್ ಅಶ್ವತ್ಥನಾರಾಯಣ್
12 ಕೆ.ಎಸ್.ಈಶ್ವರಪ್ಪ
13 ಅರವಿಂದ ಲಿಂಬಾವಳಿ
14 ಸಿ.ಟ ರವಿ
15 ಶೋಭಾ ಕರಂದ್ಲಾಜೆ
16 ಎನ್.ರವಿಕುಮಾರ್
17 ಮಹೇಶ್ ತೆಂಗಿನಕಾಯಿ
18 ಆರ್.ಅಶೋಕ್
19 ಪಿ.ಸಿ ಮೋಹನ್
20 ಶ್ರೀರಾಮುಲು
21 ಪ್ರತಾಪ್ ಸಿಂಹ
22 ವಿ.ಸೋಮಣ್ಣ
23 ಬಸವರಾಜ ಬೊಮ್ಮಾಯಿ
24 ರಮೇಶ್ ಜಿಗಜಿಣಗಿ
25 ಪ್ರಭಾಕರ್ ಕೋರೆ
26 ನಿರ್ಮಲ್ ಕುಮಾರ್ ಸುರಾನಾ
27 ಶಶಿಕಲಾ ಜೊಲ್ಲೆ
28 ಸುರೇಶ್ ಅಂಗಡಿ
29 ಚಲವಾದಿ ನಾರಾಯಣಸ್ವಾಮಿ
30 ಶ್ರುತಿ
31 ತಾರಾ ಅನೂರಾಧ
32 ರಾಜೂಗೌಡ
33 ಭಾರತಿ ಶೆಟ್ಟಿ
34 ಸಿ.ಸಿ ಪಾಟೀಲ್
35 ಬಿ.ಜೆ ಪುಟ್ಟಸ್ವಾಮಿ
36 ಉಮೇಶ್ ಕತ್ತಿ
37 ಕೋಟಾ ಶ್ರೀನಿವಾಸ ಪೂಜಾರಿ
38 ಪ್ರಭು ಚೌಹಾಣ್
39 ಎಸ್.ಆರ್.ವಿಶ್ವನಾಥ್
40 ಮಾಧುಸ್ವಾಮಿ