ನವದೆಹಲಿ[ನ.26]: ರಾಮಮಂದಿರ ನಿರ್ಮಾಣ ಮಾಡದೇ ಹೋದರೆ ಕೇಂದ್ರದ ಬಿಜೆಪಿ ಸರ್ಕಾರ ಬಹುಕಾಲ ಬಾಳಲಿಕ್ಕಿಲ್ಲ ಎಂದು ಶಿವಸೇನೆ ನಾಯಕ ಉದ್ಧವ್‌ ಠಾಕ್ರೆ ಗುಡುಗಿದ್ದಾರೆ. ಮಂದಿರ ನಿರ್ಮಾಣಕ್ಕೆ ಶೀಘ್ರ ಸುಗ್ರೀವಾಜ್ಞೆ ಜಾರಿಗೆ ತರಬೇಕು ಎಂದು ಅವರು ಆಗ್ರಹಿಸಿದ್ದಾರೆ.

ಅಯೋಧ್ಯೆಯಲ್ಲಿ ರಾಮಮಂದಿರ ನಿರ್ಮಾಣವಾಗಬೇಕು ಎಂದು ಆಗ್ರಹಪಡಿಸಲು ಅಯೋಧ್ಯೆ ಪ್ರವಾಸ ಕೈಗೊಂಡಿರುವ ಉದ್ಧವ್‌ ಭಾನುವಾರ ವಿವಾದಿತ ರಾಮಜನ್ಮಭೂಮಿ ಸ್ಥಳಕ್ಕೆ ಭೇಟಿ ನೀಡಿ ತಾತ್ಕಾಲಿಕ ರಾಮಮಂದಿರದಲ್ಲಿರುವ ರಾಮಲಲ್ಲಾನ ದರ್ಶನ ಪಡೆದರು. ಬಳಿಕ ಮಾತನಾಡಿದ ಅವರು, ‘ಮಂದಿರ ನಿರ್ಮಾಣ ನೋಡಲಾಗದೇ ಅನೇಕ ತಲೆಮಾರುಗಳು ಗತಿಸಿ ಹೋದವು. ದಿನಗಳು, ವರ್ಷಗಳು ಉರುಳಿದವು’ ಎಂದು ವಿಷಾದ ವ್ಯಕ್ತಪಡಿಸಿದ್ದಾರೆ.

ಇದನ್ನೂ ಓದಿ: ರಾಮ ಮಂದಿರ ನಿರ್ಮಾಣಕ್ಕೆ ಹೊರಟ ಶಿವ ಸೇನೆ

ಹಾಗಾಗಿ ಈಗ ಸರ್ಕಾರದ ಈಗಿನ ಅವಧಿ ಮುಗಿಯಲು ಕೆಲವೇ ತಿಂಗಳು ಬಾಕಿ ಇದ್ದು, ಒಂದು ಅಧಿವೇಶನ ಮಾತ್ರ ನಡೆಯಲು ಬಾಕಿ ಇದೆ. ಈ ಕೂಡಲೇ ಮಂದಿರ ನಿರ್ಮಾಣಕ್ಕೆ ಅಧ್ಯಾದೇಶ ಹೊರಡಿಸಬೇಕು. ಶಿವಸೇನೆ ಇದನ್ನು ಬೆಂಬಲಿಸಲಿದೆ’ ಎಂದಿದ್ದಾರೆ.

ಇದನ್ನೂ ಓದಿ: ಹಿಂದೂಗಳಿಗೇನಾದ್ರೂ ಮಾಡ್ರಿ: ಮೋದಿಗೆ ಗದರಿದ ಠಾಕ್ರೆ!

‘ಬಿಜೆಪಿಯವರು ಚುನಾವಣಾ ಸಭೆಗಳಲ್ಲಿ ಮಂದಿರ ನಿರ್ಮಾಣಕ್ಕೆ ಸಂಬಂಧಿಸಿದ ಎಲ್ಲ ಸಾಧ್ಯಾಸಾಧ್ಯತೆಗಳನ್ನು ಸಂವಿಧಾನಕ್ಕೆ ಅನುಗುಣವಾಗಿ ಪರಿಶೀಲಿಸುತ್ತೇವೆ ಎನ್ನುತ್ತಾರೆ. ಹಾಗಿದ್ದರೆ ಇಷ್ಟುವರ್ಷ ಸಂವಿಧಾನದಲ್ಲಿ ಏನನ್ನು ನೀವು ಪರಿಶೀಲಿಸಿದಿರಿ?’ ಎಂದು ಪ್ರಶ್ನಿಸಿದ್ದಾರೆ.

ಇದನ್ನೂ ಓದಿ: ಎನ್ ಡಿಎ ಬಣ ಬಿಟ್ಟು - ಯುಪಿಎಯತ್ತ ಶಿವಸೇನಾ ಒಲವು..?

ಮಂದಿರ ನಿರ್ಮಾಣವಾಗದೇ ಹೋದರೆ ಬಿಜೆಪಿ ಸರ್ಕಾರ ಪತನಗೊಳ್ಳಬಹುದು. ಆದರೆ ಮಂದಿರ ನಿರ್ಮಾಣವಾಗಿಯೇ ತೀರುತ್ತದೆ ಎಂದು ಅವರು ಹೇಳಿದ್ದಾರೆ.