Asianet Suvarna News Asianet Suvarna News

ರಾಮ ಮಂದಿರ ನಿರ್ಮಾಣಕ್ಕೆ ಹೊರಟ ಶಿವ ಸೇನೆ

ಶಿವ ಸೇನಾ ಮುಖಂಡ ಉದ್ದವ್ ಠಾಕ್ರೆ ಅಯೋಧ್ಯೆಗೆ ತೆರಳಲಿದ್ದು, ರಾಮಮಂದಿರ ನಿರ್ಮಾಣ ಕಾರ್ಯ ಕೈಗೊಳ್ಳಲಿದ್ದಾರೆ ಎಂದು ಶಿವಸೇನಾ ಮುಖವಾಣಿ ಸಾಮ್ನಾದಲ್ಲಿ  ಹೇಳಲಾಗಿದೆ. 

Uddhav will build temple in Ayodhya Shiv Sena mouthpiece
Author
Bengaluru, First Published Oct 5, 2018, 3:03 PM IST
  • Facebook
  • Twitter
  • Whatsapp

ಮುಂಬೈ :  ಶಿವ ಸೇನೆ ಮುಖ್ಯಸ್ಥ ಉದ್ದವ್ ಠಾಕ್ರೆ ಉದ್ದವ್ ಅವರು ಶೀಘ್ರದಲ್ಲೇ ಅಯೋಧ್ಯೆಗೆ ತೆರಳಲಿದ್ದು, ರಾಮಮಂದಿರವನ್ನು ನಿರ್ಮಾಣ ಮಾಡಲಿದ್ದಾರೆ. 

ಅಕ್ಟೋಬರ್ 18ರಿಂದ ಅವರು ದಸರಾ ರ್ಯಾಲಿ ನಡೆಸಲಿದ್ದು,  ಈ ವೇಳೆ ಅವರ ಕಾರ್ಯಕ್ರಮದ ಬಗ್ಗೆ ಸೂಕ್ತ ಮಾಹಿತಿ ಹೊರಬೀಳಲಿದೆ ಎಂದು ಶಿವ ಸೇನೆ ಮುಖವಾಣಿ ಸಾಮ್ನಾದಲ್ಲಿ ಹೇಳಲಾಗಿದೆ. 

ರಾಮ ಜನ್ಮಭೂಮಿ  ಟ್ರಸ್ಟ್ ಮುಖಂಡರೊಂದಿಗೆ ಸಭೆಯನ್ನು ನಡೆಸಿದ ಬಳಿಕವೇ ಈ ನಿರ್ಧಾರ ಕೈಗೊಳ್ಳಲಾಗಿದೆ ಎಂದು ಸಾಮ್ನಾದಲ್ಲಿ ಹೇಳಲಾಗಿದೆ. 

ಅಲ್ಲದೇ ಈ ಸಭೆಯಲ್ಲಿ ಮಾತನಾಡಿರುವ ಟ್ರಸ್ಟ್ ಮುಖಂಡರು ರಾಮ ಮಂದಿರವನ್ನು ನಿರ್ಮಾಣ ಮಾಡುವ ಧೈರ್ಯ ಇರುವುದು ಕೇವಲ ಶಿವ ಸೇನೆಗೆ ಮಾತ್ರವೇ ಎಂದು ಹೇಳಿದ್ದಾರೆ ಎಂದೂ ಕೂಡ ಸಾಮ್ನಾದಲ್ಲಿ ತಿಳಿಸಲಾಗಿದೆ. 

Follow Us:
Download App:
  • android
  • ios