ಇದೀಗ ಎನ್ ಡಿಎ ಬಣದಿಂದ ಶಿವಸೇನೆ ಮಾನಸಿಕವಾಗಿ ದೂರ ಸರಿಯುತ್ತಿರುವ ಲಕ್ಷಣಗಳು ಕಾಣುತ್ತಿರುವ ಬೆನ್ನಲ್ಲೇ  ಇದೀಗ ರಾಹುಲ್ ಗಾಂಧಿ ಉದ್ಧವ್ ಠಾಕ್ರೆ ಜನ್ಮ ದಿನಕ್ಕೆ ಶುಭ ಹಾರೈಸಿರುವುದು ಹೊಸ ಬೆಣವಣಿಗೆಗೆ ಕಾರಣವಾಗಲಿದೆಯಾ ಎನ್ನುವ ಅನುಮಾನ ಮೂಡಿದೆ. 

ಮುಂಬೈ: ಶಿವಸೇನೆಯು ಎನ್‌ಡಿಎನಿಂದ ಮಾನಸಿಕ ವಾಗಿ ದೂರವಾಗುತ್ತಿರುವ ಲಕ್ಷಣಗಳು ಕಾಣುತ್ತಿರು ವಂತೆಯೇ, ಸೇನಾ ಅಧ್ಯಕ್ಷ ಉದ್ಧವ್ ಠಾಕ್ರೆ ಅವರ 58 ನೇ ಹುಟ್ಟುಹಬ್ಬಕ್ಕೆ ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ಶುಭ ಹಾರೈಸಿರುವುದು ರಾಜಕೀಯ ವಲಯದಲ್ಲಿ ಹುಬ್ಬೇರುವಂತೆ ಮಾಡಿದೆ. 

‘ಶ್ರೀ ಉದ್ಧವ್ ಠಾಕ್ರೆ ಅವರ ಜನ್ಮದಿವಸಕ್ಕೆ ಶುಭೇಚ್ಛೆಗಳು. ಅವರಿಗೆ ದೇವರು ಉತ್ತಮ ಆಯುರಾರೋಗ್ಯ, ಸಂತಸ ದಯಪಾಲಿಸಲಿ’ ಎಂದು ರಾಹುಲ್ ಗಾಂಧಿ ಅವರು ಶುಕ್ರವಾರ ಮುಂಜಾನೆ ಟ್ವೀಟ್ ಮಾಡಿದ್ದಾರೆ. 

ಇದೇ ವೇಳೆ ಪ್ರಧಾನಿ ನರೇಂದ್ರ ಮೋದಿ ಅವರೂ ಠಾಕ್ರೆ ಅವರ ಜನ್ಮದಿನಕ್ಕೆ ಶುಭ ಹಾರೈಸಿದ್ದಾರೆ. ‘ದೇವರು ಉದ್ಧವ್‌ಜಿಗೆ ಸಮಾಜಸೇವೆ ಮಾಡಲು ಉತ್ತಮ ಆಯುರಾರೋಗ್ಯ ದಯಪಾಲಿಸಲಿ’ ಎಂದು ದಕ್ಷಿಣ ಆಫ್ರಿಕಾ ಪ್ರವಾಸದಿಂದಲೇ ಮೋದಿ ಶುಭೇಚ್ಛೆಗಳನ್ನು ತಿಳಿಸಿದ್ದಾರೆ. ಇತ್ತೀಚೆಗೆ ಶಿವಸೇನೆ ಹಾಗೂ ಬಿಜೆಪಿ ನಡುವೆ ಸಂಬಂಧ ಹಳಸಿದ್ದು, ರಾಹುಲ್ ಅವರ ಶುಭ ಹಾರೈಕೆಗೆ ಮಹತ್ವ ಬಂದಿದೆ.