ಕೊಚ್ಚಿ[ನ.24]: ಶಬರಿಮಲೆ ಅಯ್ಯಪ್ಪ ದರ್ಶನ ಪಡೆಯಲು ಎಲ್ಲಾ ವಯೋಮಾನದ ಮಹಿಳೆಯರಿಗೆ ಅವಕಾಶ ಕೊಟ್ಟಸುಪ್ರೀಂಕೋರ್ಟ್‌ ತೀರ್ಪಿನಿಂದ ಉದ್ಭವವಾಗಿರುವ ಬಿಕ್ಕಟ್ಟು, ಶೀಘ್ರವೇ ಇನ್ನೊಂದು ಮಹತ್ವದ ಘಟ್ಟತಲುಪುವ ಸಾಧ್ಯತೆ ಇದೆ. ಸುಪ್ರೀಂ ಆದೇಶದ ಹೊರತಾಗಿಯೂ, ಇದುವರೆಗೆ 10-50ರ ವಯೋಮಾನದ ಮಹಿಳೆಯರಿಗೆ ಅಯ್ಯಪ್ಪನ ದರ್ಶನ ಸಾಧ್ಯವಾಗದ ಹಿನ್ನೆಲೆಯಲ್ಲಿ, ಎರಡು ದಿನವನ್ನು ಕೇವಲ ಮಹಿಳಾ ಭಕ್ತರ ಪ್ರವೇಶಕ್ಕೆಂದೇ ಮೀಸಲಿಡಲು ಸಿದ್ಧವಿರುವುದಾಗಿ ಕೇರಳ ಸರ್ಕಾರ, ರಾಜ್ಯ ಹೈಕೋರ್ಟ್‌ಗೆ ಶುಕ್ರವಾರ ಮಾಹಿತಿ ನೀಡಿದೆ.

ಇದನ್ನೂ ಓದಿ: ಶಬರಿಮಲೆಯಲ್ಲೇಕೆ ಹೀಗಾಯ್ತು..?

ರಾಜ್ಯ ಸರ್ಕಾರದ ಈ ಕ್ರಮಕ್ಕೆ ಹಿಂದೂ ಸಂಘಟನೆಗಳಿಂದ ತೀವ್ರ ವಿರೋಧ ವ್ಯಕ್ತವಾಗುವುದು ಖಚಿತವಿರುವ ಹಿನ್ನೆಲೆಯಲ್ಲಿ, ಈಗಾಗಲೇ ಉದ್ವಿಗ್ನ ಸ್ಥಿತಿ ನೆಲೆಸಿರುವ ಶಬರಿಮಲೆ ಸುತ್ತಮುತ್ತಲ ಪ್ರದೇಶ ಹಾಗೂ ಕೇರಳದ ಹಲವು ಭಾಗಗಳು ಮತ್ತೊಮ್ಮೆ ಹೋರಾಟಕ್ಕೆ ವೇದಿಕೆಯಾಗುವ ಎಲ್ಲಾ ಸಾಧ್ಯತೆಗಳೂ ಇವೆ.

ಇದನ್ನೂ ಓದಿ: ಶಬರಿಮಲೆ ಯಾತ್ರಾರ್ಥಿಗಳಿಗೆ ಇ- ಬಸ್ ಸೌಲಭ್ಯ !

ಭದ್ರತೆ ಕೊಡಿ: ಪ್ರತಿಭಟನೆ ಹಿನ್ನೆಲೆಯಲ್ಲಿ ಇದುವರೆಗೆ ಅಯ್ಯಪ್ಪ ದರ್ಶನ ಸಾಧ್ಯವಾಗದ ಹಿನ್ನೆಲೆಯಲ್ಲಿ ನಾಲ್ವರು ಮಹಿಳೆಯರ ಗುಂಪೊಂದು ಶುಕ್ರವಾರ ಕೇರಳ ಹೈಕೋರ್ಟ್‌ನಲ್ಲಿ ಅರ್ಜಿಯೊಂದನ್ನು ಸಲ್ಲಿಸಿತ್ತು. ಅದರಲ್ಲಿ, ಶಬರಿಮಲೆ ಸುತ್ತಮುತ್ತಲ ಪ್ರದೇಶದಿಂದ ಪ್ರತಿಭಟನಾ ನಿರತರನ್ನು ತೆರವುಗೊಳಿಸಬೇಕು. ಮಹಿಳೆಯರ ಪ್ರವೇಶಕ್ಕೆ ವಿಶೇಷ ಭದ್ರತೆ ಒದಗಿಸಬೇಕು. ಮಹಿಳೆಯರ ಪ್ರವೇಶಕ್ಕೆಂದೇ 3 ದಿನ ಮೀಸಲಿಡಬೇಕು ಎಂದು ಕೋರಿದ್ದರು. ಈ ವೇಳೆ ಪ್ರತಿಕ್ರಿಯೆ ಸಲ್ಲಿಸಿದ್ದ ಕೇರಳ ಸರ್ಕಾರದ ಪರ ವಕೀಲರು 3 ದಿನ ಮೀಸಲಿಡುವುದು ಸಾಧ್ಯವಿಲ್ಲ. 2 ದಿನವನ್ನುಮಹಿಳೆಯರಿಗೆ ಮೀಸಲು ಇಡಲು ಸಿದ್ಧ ಎಂದು ಘೋಷಿಸಿತು. ಈ ವೇಳೆ ಮಧ್ಯಪ್ರವೇಶಿಸಿದ ನ್ಯಾಯಾಲಯ ಈ ವೇಳೆ, ಈ ಸಂಬಂಧ 15 ದಿನಗಳಲ್ಲಿ ವರದಿ ಸಲ್ಲಿಸುವಂತೆ ರಾಜ್ಯ ಸರ್ಕಾರಕ್ಕೆ ಕೋರ್ಟ್‌ ಸೂಚಿಸಿತು ಪ್ರಕರಣವನ್ನು ಮುಂದೂಡಿದೆ.