ನವದೆಹಲಿ: ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಕಚ್ಚಾತೈಲ ಬೆಲೆ ಇಳಿಕೆ ಪರಿಣಾಮ ಭಾನುವಾರ ಪೆಟ್ರೋಲ್‌ ಬೆಲೆ ಲೀ.ಗೆ 21 ಪೈಸೆ ಮತ್ತು ಡೀಸೆಲ್‌ ಬೆಲೆ 17 ಪೈಸೆ ಇಳಿಕೆ ಮಾಡಲಾಗಿದೆ. 

ಇದರೊಂದಿಗೆ ಕಳೆದ 18 ದಿನಗಳ ಅವಧಿಯಲ್ಲಿ ಒಟ್ಟಾರೆ ಪೆಟ್ರೋಲ್‌ ಬೆಲೆ ಲೀ.ಗೆ 4.05 ರು. ಮತ್ತು ಡೀಸೆಲ್‌ ಬೆಲೆ 2.33 ರು.ನಷ್ಟುಕಡಿಮೆ ಆದಂತೆ ಆಗಿದೆ. 

ಭಾನುವಾರದ ಕಡಿತದ ಬಳಿಕ ಬೆಂಗಳೂರಿನಲ್ಲಿ ಪೆಟ್ರೋಲ್‌ ಬೆಲೆ ಲೀ.ಗೆ 79.41 ರು. ಹಾಗೂ ಡೀಸೆಲ್‌ ಬೆಲೆ ಲೀ.ಗೆ 73.76ಕ್ಕೆ ತಲುಪಿದೆ. ಕಳೆದ ತಿಂಗಳು ತೈಲ ಬೆಲೆ ಭಾರೀ ಏರಿಕೆ ಕಂಡು ಜನಸಾಮಾನ್ಯರನ್ನು ಹೈರಾಣಾಗಿಸಿತ್ತು.

 

ವಾಹನ ಸವಾರರಿಗೆ ಪ್ರಧಾನಿ ಮೋದಿ ಬಿಗ್ ಗಿಫ್ಟ್

ಕರ್ನಾಟಕ ಸೇರಿ ಈ ರಾಜ್ಯಗಳಲ್ಲಿ ಮಾತ್ರ ಡೀಸೆಲ್ ಪೆಟ್ರೋಲ್ ದರ ಇಳಿಕೆ

ದೀಪಾವಳಿ, ಆನಂದ ಲೀಲಾವಳಿ: ಪೆಟ್ರೋಲ್ ರೇಟ್ ಇಳ್ದಾವ್ರಿ!