ದೇಶದ ಮಹಾನಗರಗಳಲ್ಲಿ ಮತ್ತೆ ಇಳಿಕೆಯತ್ತ ಮುಖ ಮಾಡಿದ ತೈಲದರ! ಪೆಟ್ರೋಲ್, ಡೀಸೆಲ್ ಬೆಲೆಯಲ್ಲಿ ಅಲ್ಪ ಪ್ರಮಾಣದ ಇಳಿಕೆ! ಪೆಟ್ರೋಲ್ ದರದಲ್ಲಿ 21 ಪೈಸೆ ಮತ್ತು ಡೀಸೆಲ್ ದರದಲ್ಲಿ 17 ಪೈಸೆ ಇಳಿಕೆ!ದೀಪಾವಳಿ ಸಮಯದಲ್ಲಿ ಜನತೆಯಲ್ಲಿ ಸಂತಸ ತಂದ ತೈಲದರ ಇಳಿಕೆ
ಮುಂಬೈ(ನ.4): ತೈಲೋತ್ಪನ್ನಗಳ ದರಗಳು ಮತ್ತೆ ಇಳಿಕೆಯಾಗಿದ್ದು, ಭಾನುವಾರ ಪೆಟ್ರೋಲ್ ಮತ್ತು ಡೀಸೆಲ್ ಎರಡೂ ಪ್ರಮುಖ ಇಂಧನಗಳ ಬೆಲೆಯಲ್ಲಿ ಅಲ್ಪ ಪ್ರಮಾಣದ ಇಳಿಕೆಯಾಗಿದೆ.
ಇಂದು ಪೆಟ್ರೋಲ್ ದರಲ್ಲಿ 21 ಪೈಸೆಯಷ್ಟು ಇಳಿಕೆಯಾಗಿದ್ದು, ಡೀಸೆಲ್ ದರದಲ್ಲಿ 17 ಪೈಸೆಯಷ್ಟು ಇಳಿಕೆ ಕಂಡು ಬಂದಿದೆ. ರಾಜಧಾನಿ ದೆಹಲಿಯಲ್ಲಿ ಪ್ರತೀ ಲೀಟರ್ ಪೆಟ್ರೋಲ್ ದರ 78.78 ರೂ. ಆಗಿದ್ದು, ಡೀಸೆಲ್ ದರ 73.36 ರೂ. ಆಗಿದೆ.
ಇನ್ನು ವಾಣಿಜ್ಯ ರಾಜಧಾನಿ ಮುಂಬೈನಲ್ಲೂ ಪೆಟ್ರೋಲ್ ದರದಲ್ಲಿ 21ಪೈಸೆಯಷ್ಟು ಇಳಿಕೆಯಾಗಿದ್ದು, ಪ್ರತೀ ಲೀಟರ್ ಪೆಟ್ರೋಲ್ ದರ 84.28 ರೂ. ಮತ್ತು ಡೀಸೆಲ್ ದರ ಕೂಡ 18 ಪೈಸೆಯಷ್ಟು ಕಡಿಮೆಯಾಗಿ ಪ್ರತೀ ಲೀಟರ್ ಡೀಸೆಲ್ ದರ 76.88 ರೂ. ಆಗಿದೆ.
ಇನ್ನು ರಾಜ್ಯ ರಾಜಧಾನಿ ಬೆಂಗಳೂರಿನಲ್ಲಿ ಪೆಟ್ರೋಲ್ ಬೆಲೆ 79.61 ರೂ. ಮತ್ತು ಡೀಸೆಲ್ ಬೆಲೆ 73.76 ರೂ. ಆಗಿದೆ.
