Asianet Suvarna News Asianet Suvarna News

ಲವ್ ಲೈಫ್ ರಿವೀಲ್ ಮಾಡಿದ ಈ ಯಂಗ್ ಆ್ಯಂಡ್ ಬ್ಯುಟಿಫುಲ್ ಎಂಪಿ

ಪಶ್ಚಿಮ ಬಂಗಾಳದ ಬಸೀರತ್ ಲೋಕಸಭಾ ಕ್ಷೇತ್ರದಿಂದ ಗೆದ್ದ ಟಿಎಂಸಿ ಸಂಸದೆ ನುಸ್ರತ್ ಜಹಾನ್ ತಮ್ಮ ಬ್ಯೂಟಿಯಿಂದಲೇ ಹೆಚ್ಚು ಸುದ್ದಿಯಾಗುತ್ತಿದ್ದಾರೆ. ಸಂಸತ್ ಮುಂದೆ ವಿದೇಶಿ ಉಡುಗೆಯಲ್ಲಿ ಸೆಲ್ಫೀ ತೆಗೆದುಕೊಂಡು ಸುದ್ದಿಯಾಗಿದ್ದ ರಾಜಕಾರಣಿಯಾಗಿ ಟರ್ನ್ ಆದ ನಟಿ ಈಗ ತಮ್ಮ ಲವ್ ಲೈಫ್ ಹೇಳಿಕೊಂಡಿದ್ದಾರೆ. 

TMC MP Nusrat Jahan declares her love
Author
Bengaluru, First Published Jun 1, 2019, 1:29 PM IST
  • Facebook
  • Twitter
  • Whatsapp

ನವದೆಹಲಿ : ನುಸ್ರತ್ ಜಹಾನ್ ಬಂಗಾಳದಲ್ಲಿ ಪ್ರಸಿದ್ಧವಾದ ನಟಿ.ಟಿಎಂಸಿ ಟಿಕೆಟ್ ಪಡೆದು, ಬಸರತ್ ಲೋಕಸಭಾ ಕ್ಷೇತ್ರದಿಂದ ಗೆದ್ದ ಈ ನಟಿ ಸಂಸತ್ ಮುಂದೆ ವಿದೇಶಿ ಉಡುಗೆ ತೊಟ್ಟು ತೆಗೆಸಿಕೊಂಡ ಫೋಟೋದಿಂದ ಟ್ರೋಲ್ ಆಗಿದ್ದರು. TMCಯ ಮತ್ತೊಬ್ಬ ಸಂಸದೆ ಮಿಮಿ ಚಕ್ರವರ್ತಿಯೊಂದಿಗೆ ಮಂದಿ ನುಸ್ರತ್ ಬಗ್ಗೆಯೂ ಮಾತನಾಡಿಕೊಳ್ಳುತ್ತಿದ್ದಾರೆ. 

ಸಾಮಾಜಿಕ ಜಾಲತಾಣದಲ್ಲಿ ಸಿಕ್ಕಾಪಟ್ಟೆ ಆ್ಯಕ್ಟೀವ್ ಆಗಿರುವ ಈ ನಟಿ ಕಮ್ ಸಂಸದೆ ಇದೀಗ ತಮ್ಮ ಲವೇ ಲೈಫ್ ಬಗ್ಗೆಯೂ ರಿವೀಲ್ ಮಾಡಿದ್ದಾರೆ. ತಮ್ಮ ಮದುವೆ ಬಗ್ಗೆಯೂ ಹೇಳಿಕೊಂಡಿದ್ದು, ಈ ವಿಚಾರವಾಗಿ ಹುಟ್ಟಿಕೊಂಡ ಗಾಸಿಪ್‌ಗಳಿಗೆ ಅಂತ್ಯ ಹಾಡಿದ್ದಾರೆ.

ಸಂಸತ್ತಿನೆದುರು ಪಾಶ್ಚಾತ್ಯ ಉಡುಗೆ ತೊಟ್ಟು ಪೋಸ್: ಸಂಸದೆಯರು ಟ್ರೋಲ್!

ಭಾವಿ ಪತಿ ಕೈ ಹಿಡಿದಿರುವ ಚಿತ್ರವೊಂದನ್ನು ಹಾಕಿದ್ದು, ನಮ್ಮ ಕನಸಿಗಿಂತ ನೈಜತೆಯೇ ಹೆಚ್ಚು ಸುಂದರವಾಗಿದೆ.  Best Thing to Hold on to in Life.. is Each Other ಎಂದು ಪೋಸ್ಟ್ ಮಾಡಿದ್ದು ನಿಖಿಲ್ ಜೈನ್ ಎಂಬುವವರೊಂದಿಗೆ ದಾಂಪತ್ಯ ಜೀವನಕ್ಕೆ ಕಾಲಿಡುವ ಸುಳಿವು ನೀಡಿದ್ದಾರೆ.

ಹೊಸ ಲೋಕಸಭೆಯಲ್ಲಿ 29 ವರ್ಷದ ಬೆಂಗಾಲಿ ಬೆಡಗಿ, ಎಲ್ಲಿಯ ಸಂಸದೆ?

ನಿಖಿಲ್ ಜೈನ್ ಕೂಡ ಇದೇ ಫೊಟೊವನ್ನು ತಮ್ಮ ಅಕೌಂಟ್‌ನಲ್ಲಿ ಶೇರ್ ಮಾಡಿಕೊಂಡಿದ್ದಾರೆ. ಅಲ್ಲದೇ ನುಸ್ರತ್ ನನ್ನ ಜೀವನವನ್ನು ಅತ್ಯಂತ ಸುಂದರವಾಗಿಸಿದ್ದಾರೆ ಎಂದೂ ಹೇಳಿಕೊಂಡಿದ್ದಾರೆ. 

 

 
 
 
 
 
 
 
 
 
 
 
 
 

When reality is finally better than ur dreams, the best thing to hold on to in life... is each other..!! @nikhiljain09

A post shared by Nusrat (@nusratchirps) on May 27, 2019 at 6:40am PDT

Follow Us:
Download App:
  • android
  • ios