ಸಂಸತ್ತಿಗೆ ಪ್ರವೆಶಿಸಿದ ಮೊದಲ ದಿನವೇ ಪಾಶ್ಚಾತ್ಯ ಉಡುಗೆ ಧರಿಸಿದ್ದ ಟಿಎಂಸಿ ಸಂಸದೆಯರು| ಸಾಮಾಜಿಕ ಜಾಲತಾಣದಲ್ಲಿ ಇಬ್ಬರು ನಾಯಕಿಯರು ಫುಲ್ ಟ್ರೋಲ್!
ನವದೆಹಲಿ[ಮೇ.29]: ಲೋಕಸಭೆಗೆ ಆಯ್ಕೆಯಾದ ಟಿಎಂಸಿಯ ಮಿಮಿ ಚಕ್ರವರ್ತಿ ಹಾಗೂ ನುಸ್ರುತ್ ಜಹಾನ್ ಅವರು ಪಾಶ್ಚಿಮಾತ್ಯ ಸಂಸ್ಕೃತಿ ಬಿಂಬಿಸುವ ಉಡುಗೆಯಲ್ಲಿ ಸಂಸತ್ತಿನ ಎದುರು ಕಾಣಿಸಿಕೊಂಡಿದ್ದಕ್ಕಾಗಿ ಟ್ರೋಲಿಗರ ಆಕ್ರೋಶಕ್ಕೆ ತುತ್ತಾಗಿದ್ದಾರೆ.
ಹೊಸ ಲೋಕಸಭೆಯಲ್ಲಿ 29 ವರ್ಷದ ಬೆಂಗಾಲಿ ಬೆಡಗಿ, ಎಲ್ಲಿಯ ಸಂಸದೆ?
ಸಂಸತ್ತಿನ ಎದುರು ಬಂಗಾಳಿ ನಟಿಯರಾಗಿದ್ದ ಮಿಮಿ ಹಾಗೂ ನುಸ್ರುತ್ ಕ್ಯಾಮೆರಾಗೆ ಪೋಸ್ ನೀಡಿದ್ದರು. ಈ ಫೋಟೋ ಬಗ್ಗೆ ಸಾಮಾಜಿಕ ಮಾಧ್ಯಮಗಳಲ್ಲಿ ಇದು ಫೋಟೋ ಸ್ಟುಡಿಯೋ ಅಲ್ಲ. ಮಿಮಿ ಸಂಸದೆಯಾಗಲು ಅರ್ಹಳಲ್ಲ ಎಂದೆಲ್ಲಾ ಟೀಕಿಸಿದ್ದಾರೆ.
ಮತ್ತೆ ಕೆಲವರು ಸಾಮಾನ್ಯವಾಗಿ ಮಹಿಳಾ ಸಂಸದರು ಸೀರೆಯಲ್ಲಿ ಸಂಸತ್ತಿಗೆ ಆಗಮಿಸುತ್ತಾರೆ. ಆದರೆ, ಟಿಎಂಸಿಯ ಈ ಇಬ್ಬರು ಸಂಸದೆಯರು ವಿಶಿಷ್ಟಉಡುಗೆಯಲ್ಲಿ ಆಗಮಿಸಿದ್ದಾರೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
