ಇಂದೋರ್(ಜು. 31) 23 ವರ್ಷದ ಈ ವ್ಯಕ್ತಿಗೆ ತನ್ನ ಹೆಸರೇ ಸಮಸ್ಯೆ ಆಗಿದೆ. ಇದಕ್ಕೆ ಕಾರಣ ಅವರ ಹೆಸರು ರಾಹುಲ್ ಗಾಂಧಿ! ಜವಳಿ ವ್ಯಾಪಾರಿಯಾಗಿರುವ ರಾಹುಲ್ ಇಂದೋರ್ ನಲ್ಲಿ ತಮ್ಮ ವ್ಯಾಪಾರ ವಹಿವಾಟು ನಡೆಸುತ್ತಿರುತ್ತಾರೆ. ಆದರೆ ಇವರನ್ನು ಜನ ಒಬ್ಬ ನಕಲಿ ಮನುಷ್ಯ ಎಂದು ಆಡಿಕೊಳ್ಳುತ್ತಿದ್ದಾರಂತೆ. ಅದಕ್ಕೆ ಕಾರಣ ಹೆಸರು!

ಬಾರ್ಡರ್ ಸೆಕ್ಯೂರಿಟಿ ಫೋರ್ಸ್(ಬಿಎಸ್‌ಎಫ್) ನಲ್ಲಿ ಉತ್ತಮ ಹೆಸರು ಗಳಿಸಿದ್ದ ನನ್ನ ತಂದೆಗೆ ಗಾಂಧಿ ಎಂಬ ನಿಕ್ ನೇಮ್ ಅನ್ನು ಅವರ ಹಿರಿಯ ಅಧಿಕಾರಿಗಳು ನೀಡಿದ್ದರು. ನಾನು ಹುಟ್ಟಿದಾಗ ರಾಹುಲ್ ಎಂದು ನಾಮಕರಣ ಮಾಡಿದ ನಂತರ ರಾಹುಲ್ ಹೆಸರು ಜತೆ ಸೇರಿಕೊಂಡಿತು. ಇದೇ ಕಾರಣಕ್ಕೆ ಎಲ್ಲ ಕಡೆಯೂ ರಾಹುಲ್ ಗಾಂಧಿ ಎಂದೇ ಕರೆಯಲು ಆರಂಭಿಸಿದರು. ರಾಹುಲ್ ಮಾಳವೀಯ ಬದಲಾಗಿ ರಾಹುಲ್ ಗಾಂಧಿ ಹೆಸರೆ ಉಳಿಯಿತು.

ರಾಹುಲ್ ಗಾಂಧಿಗೆ ಶೀಲಾ ದೀಕ್ಷಿತ್ ಕೊಟ್ಟ ಕೊನೆಯ ಸಂದೇಶವಿದು!

ಇದೇ ಸರ್ ನೇಮ್ ಕಾರಣಕ್ಕೆ ನನಗೆ ಟೆಲಿಕಾಂ ಕಂಪನಿ ಸಿಮ್ ನೀಡುತ್ತಿಲ್ಲ.  ಬ್ಯಾಂಕ್ ಸಾಲ, ವಾಹನ ಸಾಲದ ಸಿಗುವ ಬಗ್ಗೆಯೂ ಸಮಸ್ಯೆಯಾಗಿದೆ ಎಂದು ರಾಹುಲ್ ಅಳಲು ತೋಡಿಕೊಂಡಿದ್ದಾರೆ.

ನನ್ನದು ನಕಲಿ ಹೆಸರು ಎಂದೇ ಹಲವಾರು ಕಂಪನಿಗಳು ಮತ್ತು ಇಲಾಖೆಗಳು ಆರೋಪ ಮಾಡುತ್ತ ಕಿರುಕುಳ ನೀಡುತ್ತಿವೆ. ಕೆಲವರು ಹೆಸರನ್ನು ತಮಾಷೆ ಮಾಡುತ್ತಿದ್ದಾರೆ. ಯಾರಾದರೂ ಕರೆ ಮಾಡಿದಾಗ ನನ್ನ ಹೆಸರು ಹೇಳಿದರೆ ಆ ಕಡೆಯುಂದ ಮಾತನಾಡುವವರು ನಗುತ್ತಾರೆ ಎಂದು ರಾಹುಲ್ ತಮ್ಮ ದೈನಂದಿನ ನೋವನ್ನು ಹೊರಹಾಕುತ್ತಾರೆ.

ನಾನೊಂದು ಅಂತಿಮ ತೀರ್ಮಾನಕ್ಕೆ ಬಂದಿದ್ದದೇನೆ. ನನ್ನ ಸರ್ ನೇಮ್ ಬದಲಾಯಿಸಿಕೊಳ್ಳಲು ತೀರ್ಮಾನ ಮಾಡಿಕೊಂಡಿದ್ದೇನೆ. ಸರ್ಕಾರವೂ ನನ್ನ ನೆರವಿಗೆ ನಿಲ್ಲಬೇಕಿದ್ದು ಗಾಂಧಿ ಹೆಸರಿನ ಬದಲಾಗಿ ಮಾಳವೀಯ ಸರ್ ನಮ್ ಗೆ ಬದಲಾಯಿಸಿಕೊಳ್ಳಲು ಸಿದ್ಧವಾಗಿದ್ದೇನೆ  ಎಂದು ರಾಹುಲ್ ನೊಂದು ನುಡಿಯುತ್ತಾರೆ.