Asianet Suvarna News Asianet Suvarna News

ರಾಹುಲ್ ಗಾಂಧಿಗೆ ಶೀಲಾ ದೀಕ್ಷಿತ್ ಕೊಟ್ಟ ಕೊನೆಯ ಸಂದೇಶವಿದು!

81ರ ಹರೆಯದಲ್ಲಿ ಕೊನೆಯುಸಿರೆಳೆದ ದೆಹಲಿ ಮಾಜಿ ಸಿಎಂ ಶೀಲಾ ದೀಕ್ಷಿತ್| ಲೋಕಸಭಾ ಚುನಾವಣೆಯ ಬಳಿಕ ರಾಹುಲ್ ಗಾಂಧಿ ಭೇಟಿಯಾಗಲು ಬಂದಿದ್ದ ದೀಕ್ಷಿತ್| ರಾಹುಲ್ ಗಾಂಧಿಗೆ ನೀಡಿದ್ದರು ಮಹತ್ವದ ಸಂದೇಶ

Former Chief Minister Of Delhi Sheila Dixit last Message To Rahul Gandhi
Author
Bangalore, First Published Jul 21, 2019, 12:25 PM IST

ನವದೆಹಲಿ[ಜು.21]: ದೆಹಲಿಯ ಮಾಜಿ ಮುಖ್ಯಮಂತ್ರಿ ಶೀಲಾ ದೀಕ್ಷಿತ್ ನಿನ್ನೆ ಶನಿವಾರ ಕೊನೆಯುಸಿರೆಳೆದಿದ್ದಾರೆ. ದೀರ್ಘ ಸಮಯದಿಂದ ಅನಾರೋಗ್ಯದಿಂದ ಬಳಲುತ್ತಿದ್ದ ಅವರಿಗೆ ಚಿಕಿತ್ಸೆ ನೀಡಲಾಗುತ್ತಿತ್ತು. ರಾಜಕೀಯಕ್ಕೆ ಸಂಬಂಧಿಸಿದಂತೆ ಶೀಲಾ ತಮ್ಮ ಅಭಿಪ್ರಾಯಗಳನ್ನು ವ್ಯಕ್ತಪಡಿಸುತ್ತಿದ್ದುದರಿಂದ ಅವರು ಇಷ್ಟು ಗಂಭೀರವಾಗಿ ಆರೋಗ್ಯ ಸಮಸ್ಯೆ ಎದುರಿಸುತ್ತಿದ್ದಾರೆಂಬ ವಿಚಾರ ಹಲವರಿಗೆ ತಿಳೀದಿರಲಿಲ್ಲ. ಹೀಗಾಗಿ ಅವರ ನಿಧನದ ಸುದ್ದಿ ಎಲ್ಲರನ್ನೂ ದಿಗಿಲುಗೊಳ್ಳುವಂತೆ ಮಾಡಿದೆ. 

81ರ ಹರೆಯದಲ್ಲೂ ಬಹಳಷ್ಟು ಸಕ್ರಿಯರಾಗಿದ್ದ ಶೀಲಾ ದೀಕ್ಷಿತ್ ಮನಸ್ಸಿನಲ್ಲಿ ಕಾಂಗ್ರೆಸ್ ಹಾಗೂ ದೆಹಲಿ ವಿಚಾರವಾಗಿ ಬಹಳಷ್ಟು ಚಿಂತೆ ಇತ್ತು. ಲೋಕಸಭಾ ಚುನಾವಣೆಯ ಬಳಿಕ ತೀವ್ರ ನಿರಾಸೆಗೊಳಗಾಗಿದ್ದ ರಾಹುಲ್ ಗಾಂಧಿ ಮನೆಯಲ್ಲಿ ಕೈದಿಯಂತೆ ಉಳಿದುಕೊಂಡಿದ್ದಾಗ ಶೀಲಾ ಅವರನ್ನು ಭೇಟಿಯಾಗಿದ್ದರು. ಆದರೆ ರಾಹುಲ್ ಆ ಸಂದರ್ಭದಲ್ಲಿ ಯಾವೊಬ್ಬ ನಾಯಕರನ್ನೂ ಭೇಟಿಯಾಗಲಿಚ್ಛಿಸಿರಲಿಲ್ಲ. ಹೀಗಿರುವಾಗ ಶೀಲಾ ದೀಕ್ಷಿತ್ ರಾಹುಲ್ ಗಾಂಧಿಗೊಂದು ಸಂದೇಶ ರವಾನಿಸಿದ್ದರು. 

ರಾಹುಲ್ ಗಾಂಧಿಗೆ ಸಂದೇಶ ಕಳುಹಿಸಿದ್ದ ಶೀಲಾ ದೀಕ್ಷಿತ್ 'ನೀವು ಅಧ್ಯಕ್ಷ ಸ್ಥಾನಕ್ಕೆ ರಾಜೀನಮೆ ನೀಡಬಾರದು. ನೀವು ರಾಜೀನಾಮೆ ನೀಡಿದ್ರೆ ಪಕ್ಷ ಬಹುದೊಡ್ಡ ನಷ್ಟ ಎದುರಿಸಬೇಕಾಗುತ್ತದೆ. ಸೋಲು ಗೆಲುವು ಪಕ್ಷದ ಒಂದು ಭಾಗ, ಆದರೆ ಹೋರಾಟ ಜೀವಂತವಾಗಿಡಬೇಕು ಎಂಬುವುದೇ ಮುಖ್ಯ. ಪಕ್ಷವೂ ರಾಜೀನಾಮೆ ಸ್ವೀಕರಿಸಬಾರದು' ಎಂದಿದ್ದರು.

ಜೂನ್ 18ಕ್ಕೆ ಉಪರಾಜ್ಯಪಾಲರಿಗೆ ಪತ್ರ ಬರೆದಿದ್ದ ಶೀಲಾ ದೀಕ್ಷಿತ್

ದೆಹಲಿಯ ಮಾಜಿ ಸಿಎಂ ಶೀಲಾ ದೀಕ್ಷಿನ್ ಕಳೆದ ತಿಂಗಳು ಅಂದರೆ ಜೂನ್ 18ರಂದು ಉಪರಾಜ್ಯಪಾಲ ಅನಿತ್ ಬೈಜಲ್ ಗೆ ಪತ್ರವೊಂದನ್ನು ಬರೆದು ಕ್ಷೇತ್ರದಲ್ಲಿ ನಡೆಯುತ್ತಿರುವ ಅಪರಾಧ ಪ್ರಕರಣಗಳ ಪರವಾಗಿ  ಚಿಂತೆ ವ್ಯಕ್ತಪಡಿಸಿದ್ದರು. 

Follow Us:
Download App:
  • android
  • ios