ಸಾಮೂಹಿಕ ವಿವಾಹದಲ್ಲಿ 5 ಜೋಡಿಗೆ "ಕಂಕಣ ಭಾಗ್ಯ"! ಶ್ರುತಿ ಕೈಹಿಡಿದ ಶಾಸಕ ಆರಗ ಜ್ಞಾನೇಂದ್ರ ಪುತ್ರ, ಸಾಮೂಹಿಕ ವಿವಾಹಕ್ಕೆ ಸಾಕ್ಷಿಯಾದ 15,000ಕ್ಕೂ ಹೆಚ್ಚು ಜನ
ತೀರ್ಥಹಳ್ಳಿ (ಮಾ. 15) ತೀರ್ಥಹಳ್ಳಿಯಲ್ಲಿ ನಡೆದ ಸಾಮೂಹಿಕ ವಿವಾಹದಲ್ಲಿ ತೀರ್ಥಹಳ್ಳಿ ಶಾಸಕ ಆರಗ ಜ್ಞಾನೇಂದ್ರ ಅವರ ಪುತ್ರ ಅಭಿನಂದನ್, ಬಿಜೆಪಿ ಯುವ ನಾಯಕ ಕುಕ್ಕೆ ಪ್ರಶಾಂತ್ ಸೇರಿದಂತೆ ಐದು ಜೋಡಿ ದಾಂಪತ್ಯ ಜೀವನಕ್ಕೆ ಕಾಲಿರಿಸಿತು.
ಸುಮಾರು 15,000ಕ್ಕೂ ಹೆಚ್ಚು ಮಂದಿ ಭಾಗವಹಿಸಿ ದಂಪತಿಗಳಿಗೆ ಶುಭ ಹಾರೈಸಿದರು. ಮಾಜಿ ಮುಖ್ಯಮಂತ್ರಿ ಯಡಿಯೂರಪ್ಪ, ಬಿಜೆಪಿ ನಾಯಕರಾದ ಡಿ.ಎಚ್.ಶಂಕರಮೂರ್ತಿ, ಸಿ.ಟಿ.ರವಿ, ಶೋಭಾ ಕರಂದ್ಲಾಜೆ, ರಾಘವೇಂದ್ರ ಬಿ.ವೈ, ಕುಮಾರ್ ಬಂಗಾರಪ್ಪ, ಹರತಾಳು ಹಾಲಪ್ಪ, ಜೀವರಾಜ್, ಶ್ರೀ ರೇಣುಕಾನಂದ ಶ್ರೀಗಳು, ಕವಲೇದುರ್ಗ ಶ್ರೀಗಳು, ಕಲ್ಲಡ್ಕ ಪ್ರಭಾಕರ್ ಭಟ್, ಬೆಳ್ಳಿ ಪ್ರಕಾಶ್, ಕಾಂಗ್ರೆಸ್ ನಾಯಕರಾದ ಕಿಮ್ಮನೆ ರತ್ನಾಕರ್, ಪ್ರಸನ್ನ ಕುಮಾರ್, ಜೆಡಿಎಸ್ ನಾಯಕರಾದ ಮದನ್, ಮಣಿ ಹೆಗಡೆ ಸೇರಿದಂತೆ ಶಿವಮೊಗ್ಗ, ಚಿಕ್ಕಮಗಳೂರು ಜಿಲ್ಲೆಯ ಬಹುತೇಕ ಮುಖಂಡರು, ಕಾರ್ಯಕರ್ತರು ಮದುವೆಗೆ ಸಾಕ್ಷಿಯಾದರು.
ಪತಿಗೇ ತಾಳಿ ಕಟ್ಟಿ, ಬಸವ ತತ್ವ ಪಾಲಿಸಿದ ವಧು
ಭರ್ಜರಿ ಭೋಜನ: ಕ್ರೀಡಾಂಗಣದಲ್ಲಿ ಎಲ್ಲರಿಗೂ ಭೋಜನ ವ್ಯವಸ್ಥೆ ಮಾಡಲಾಗಿತ್ತು. ದಂಪತಿಗೆ ಆಶೀರ್ವಾದ ಮಾಡಲು ಸಹ ಸಾರ್ವಜನಿಕರು ಸೇರಿ ಎಲ್ಲರಿಗೂ ಅವಕಾಶ ಕಲ್ಪಿಸಲಾಗಿತ್ತು. ನೀತಿ ಸಂಹಿತೆ ಹಿನ್ನೆಲೆ ಎಲ್ಲೂ ಫೋಟೋ, ಫ್ಲೆಕ್ಸ್ ಅಬ್ಬರ ಕಂಡು ಬರಲಿಲ್ಲ.ಶಾಸಕ ಆರಗ ಜ್ಞಾನೇಂದ್ರ ಅವರು ಹಿಂದೆ ಪುತ್ರಿಯ ವಿವಾಹವನ್ನು ರಾಷ್ಟ್ರಕವಿ ಕುವೆಂಪು ಜನ್ಮ ಸ್ಥಳ ಕುಪ್ಪಳಿಯ ಹೇಮಾಂಗಣದಲ್ಲಿ ಮಂತ್ರ ಮಾಂಗಲ್ಯ ಕಾರ‍್ಯಕ್ರಮದ ಮೂಲಕ ನೆರವೇರಿಸಿದ್ದರು.
ಶಾಸಕ ಆರಗ ಜ್ಞಾನೇಂದ್ರ ಪುತ್ರ ಅಭಿನಂದನ್ ಹಳುವಾನಿಯ ಶ್ರುತಿ, ಕುಕ್ಕೆ ಪ್ರಶಾಂತ್ ಅವರು ಶ್ವೇತಾ, ಪ್ರಸನ್ನ ಅವರು ಅಶ್ವಿನಿ, ಭರತ್ ಕುಮಾರ್ ಟಿಎಸ್ ಅವರು ಶಶಿಕಲಾ, ರಾಜೇಂದ್ರ ಅವರು ಲತಾ ಅವರನ್ನು ವರಿಸಿದರು. ಖ್ಯಾತ ಸ್ಯಾಕ್ಸೋಫೋನ್ ವಾದಕ ಮಹೇಶ್ ಮೋಯ್ಲಿ ಮತ್ತು ತಂಡದ ಸಂಗೀತ ಕಾರ್ಯಕ್ರಮ ಜನರ ಗಮನ ಸೆಳೆಯಿತು.
"
Read Exclusive COVID-19 Coronavirus News updates, from Karnataka, India and World at Asianet News Kannada.
ವರ್ಚುಯಲ್ ಬೋಟ್ ರೇಸಿಂಗ್ ಗೇಮ್ ಆಡಿ ಮತ್ತು ನಿಮಗೆ ನೀವೇ ಸವಾಲು ಹಾಕಿಕೊಳ್ಳಿ ಈಗಲೇ ಆಡಲು ಕ್ಲಿಕ್ಕಿಸಿ
Last Updated Mar 15, 2019, 4:59 PM IST