ಮತ್ತೆ ಪಿಒಕೆ ನುಗ್ಗಿದ್ದ ಭಾರತೀಯ ಸೇನೆ| ಶೆಲ್ ದಾಳಿಗೆ ಪಾಕ್’ನ 50 ಉಗ್ರರು ಮಟಾಷ್| ಏಳು ಉಗ್ರರ ಕ್ಯಾಂಪ್’ಗಳನ್ನು ಧ್ವಂಸಗೊಳಿಸಿರುವ ಭಾರತೀಯ ಸೇನೆ|  3 ಸಾವಿರಕ್ಕೂ ಅಧಿಕ ಶೆಲ್’ಗಳನ್ನು ಉಡಾಯಿಸಿ ಪಿಒಕೆ ಮೇಲೆ ದಾಳಿ| ಪಾಕ್’ನ ನೋಸೆರಾ ಆಣೆಕಟ್ಟಿಗೆ ತೀವ್ರ ಹಾನಿ| ಪಾಕ್ ಸೇನೆಯ ಏಳು ಕಮಾಂಡೋಗಳು ಮಟಾಷ್| ಇಸ್ಲಾಮಾಬಾದ್’ನಲ್ಲಿ ತುರ್ತು ಸಭೆ ಕರೆದ ಪಾಕ್ ಸೇನಾಧಿಕಾರಿಗಳು| 

ನವದೆಹಲಿ(ಅ.22): ಮೊನ್ನೆಯಷ್ಟೇ ಪಾಕ್ ಆಕ್ರಮಿತ ಕಾಶ್ಮೀರದಲ್ಲಿ ಫಿರಂಗಿ ದಾಳಿ ನಡೆಸಿ 35 ಉಗ್ರರನ್ನು ಕೊಂದು ಹಾಕಿದ್ದ ಭಾರತೀಯ ಸೇನೆ, ಇಂದು ಮತ್ತೊಮ್ಮೆ ಪಿಒಕೆ ಒಳಗೆ ಶೆಲ್ ದಾಳಿ ನಡೆಸಿದೆ.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

ಗಡಿಯಲ್ಲಿ ಭಾರತೀಯ ಸೇನೆ ಕಾರ್ಯಾಚರಣೆ: PoKಯಲ್ಲಿದ್ದ ಉಗ್ರರ 4 ಕ್ಯಾಂಪ್ ಉಡೀಸ್‌!

ಪಿಒಕೆಯಲ್ಲಿದ್ದ ಏಳು ಉಗ್ರರ ಕ್ಯಾಂಪ್’ಗಳನ್ನು ಧ್ವಂಸಗೊಳಿಸಿರುವ ಭಾರತೀಯ ಸೇನೆ, ಸುಮಾರು 50ಕ್ಕೂ ಹೆಚ್ಚು ಉಗ್ರರನ್ನು ಕೊಂದು ಹಾಕಿದೆ ಎಂದು ಮೂಲಗಳು ತಿಳಿಸಿವೆ.

Scroll to load tweet…

ಸುಮಾರು 3 ಸಾವಿರಕ್ಕೂ ಅಧಿಕ ಶೆಲ್’ಗಳನ್ನು ಉಡಾಯಿಸಿ ಪಿಒಕೆ ಮೇಲೆ ಭಾರತೀಯ ಸೇನೆ ದಾಳಿ ಮಾಡಿದೆ. ಈ ವೇಳೆ ನೋಸೆರಾ ಆಣೆಕಟ್ಟಿಗೂ ತೀವ್ರ ಹಾನಿಯಾಗಿದೆ ಎನ್ನಲಾಗಿದೆ.

ಇದೇ ವೇಳೆ ಪಾಕಿಸ್ತಾನದ ಶಸ್ತ್ರಾಗಾರದ ಮೇಲೆ ದಾಳಿ ಮಾಡಲಾಗಿದ್ದು, ಪಾಕ್ ಸೇನೆಯ ಏಳು ಕಮಾಂಡೋಗಳನ್ನು ಹೊಡೆದುರುಳಿಸಲಾಗಿದೆ.

Scroll to load tweet…

ಇನ್ನು ಭಾರತದ ಆಘಾತಕಾರಿ ದಾಳಿಗೆ ಬೆಚ್ಚಿರುವ ಪಾಕಿಸ್ತಾನ, ಗಡಿಯಿಂದ ಉಗ್ರ ಶಿಬಿರಗಳನ್ನು ಸ್ಥಳಾಂತರಿಸುವತ್ತ ಚಿತ್ತ ಹರಿಸಿದೆ. ಈ ಕುರಿತು ಇಸ್ಲಾಮಾಬಾದ್’ನಲ್ಲಿ ಸೇನಾಧಿಕಾರಿಗಳು ತುರ್ತು ಸಭೆ ಕರೆದಿದ್ದಾರೆ.

"