ಅಸ್ಸಾಂ NRC ಮುಖ್ಯಸ್ಥರ ದಿಢೀರ್ ಎತ್ತಂಗಡಿ| ಪ್ರತೀಕ್ ಹಜೆಲ್ ವರ್ಗಾವಣೆಗೆ ಆದೇಶ ಹೊರಡಿಸಿದ ಸುಪ್ರೀಂಕೋರ್ಟ್| ಅಸ್ಸಾಂ NRC ತಂಡವನ್ನು ಯಶಸ್ವಿಯಾಗಿ ಮುನ್ನಡೆಸಿದ್ದ ಪ್ರತೀಕ್ ಹಜೆಲ್| ಹೆಜಲಾ ವರ್ಗಾವಣೆಗೆ ಆದೇಶಿಸಿದ ಮುಖ್ಯ ನ್ಯಾಯಮೂರ್ತಿ ರಂಜನ್ ಗೊಗೊಯ್ ನೇತೃತ್ವದ ಪೀಠ| ವರ್ಗಾವಣೆಗೆ ಕಾರಣ ಕೇಳಿದ ಕೇಂದ್ರ ಸರ್ಕಾರದ ಅಟಾರ್ನಿ ಜನರಲ್ ಕೆಕೆ ವೇಣುಗೋಪಾಲ್| ವರ್ಗಾವಣೆಗೆ ನಿರ್ದಿಷ್ಟ ಕಾರಣದ ಅವಶ್ಯಕತೆಯಿಲ್ಲ ಎಂಧ ನ್ಯಾಯಪೀಠ| ಅಸ್ಸಾಂನಿಂದ ಮಧ್ಯಪ್ರದೇಶಕ್ಕೆ ವರ್ಗಾವಣೆಗೊಂಡ ಪ್ರತೀಕ್ ಹಜೆಲಾ|

ನವದೆಹಲಿ(ಅ.18): ಮಹತ್ವದ ಬೆಳವಣಿಗೆಯೊಂದರಲ್ಲಿ ಅಸ್ಸಾಂನ ರಾಷ್ಟ್ರೀಯ ಪೌರತ್ವ ನೋಂದಣಿ(NRC)ಮುಖ್ಯಸ್ಥರನ್ನು ವರ್ಗಾವಣೆ ಮಾಡಿ ಸುಪ್ರೀಂಕೋರ್ಟ್ ಆದೇಶ ಹೊರಡಿಸಿದೆ.

19 ಲಕ್ಷ ಜನ ಔಟ್: ಅಸ್ಸಾಂ ಮೇಲೆ NRC ಗದಾಪ್ರಹಾರ!

ಅಸ್ಸಾಂನಲ್ಲಿ NRC ಪ್ರಕ್ರಿಯೆ ಬಹುತೇಕ ಅಂತ್ಯಗೊಂಡಿದ್ದು, ಇಡೀ ಪ್ರಕ್ರಿಯೆ ಜವಾಬ್ದಾರಿ ಹೊತ್ತಿದ್ದ ಪ್ರತೀಕ್ ಹಜೆಲಾ ಅವರನ್ನು ಸುಪ್ರೀಂಕೋರ್ಟ್ ಮಧ್ಯಪ್ರದೇಶಕ್ಕೆ ದಿಢೀರ್ ವರ್ಗಾವಣೆ ಮಾಡಿದೆ.

Scroll to load tweet…

ಮುಖ್ಯ ನ್ಯಾಯಮೂರ್ತಿ ರಂಜನ್ ಗೊಗೊಯ್ ನೇತೃತ್ವದ ಪೀಠ ಹಜೆಲಾ ವರ್ಗಾವಣೆಯ ಆದೇಶ ಹೊರಡಿಸಿದ್ದು, ದಿಢೀರ್ ಆದೇಶಕ್ಕೆ ಕಾರಣವನ್ನೂ ನೀಡದಿರುವುದು ತೀವ್ರ ಕುತೂಹಲ ಮೂಡಿಸಿದೆ.

19 ಲಕ್ಷ ನಾಗರಿಕರು ಔಟ್: NRC ಮೇಲೆ ಅಸ್ಸಾಂ ಮಿನಿಸ್ಟರ್ ಡೌಟ್!

ಹಜೆಲಾ ವರ್ಗಾವಣೆಗೆ ಕಾರಣ ಏನೆಂದು ಕೇಳಿದ ಕೇಂದ್ರ ಸರ್ಕಾರದ ಅಟಾರ್ನಿ ಜನರಲ್ ಕೆಕೆ ವೇಣುಗೋಪಾಲ್ ಅವರಿಗೆ, ನ್ಯಾಯಪೀಠದಿಂದ ವರ್ಗಾವಣೆಗೆ ನಿರ್ದಿಷ್ಟ ಕಾರಣದ ಅವಶ್ಯಕತೆ ಇಲ್ಲ ಎಂಬ ಉತ್ತರ ದೊರೆತಿದೆ.

NRC ಲಿಸ್ಟ್‌ನಲ್ಲಿ ಗಡಿಕಾಯುವ ಯೋಧರ ಹೆಸರೇ ಇಲ್ಲ..!

ಅಸ್ಸಾಂ NRC ಅಂದ್ರೇನು? ಪಟ್ಟಿಯಲ್ಲಿ ಹೆಸರಿಲ್ಲದವರ ಗತಿ ಏನು? ಸಿಂಪಲ್ ಆಗಿ ತಿಳ್ಕೊಳ್ಳಿ

1995ರ ಅಸ್ಸಾಂ-ಮೇಘಾಲಯ ಕೆಡರ್'ನ ಐಎಎಸ್ ಅಧಿಕಾರಿಯಾಗಿರುವ ಹಜೆಲಾ, ಸುಮಾರು 50 ಸಾವಿರ ಸಿಬ್ಬಂದಿ ಸಹಾಯದೊಂದಿಗೆ ಅಸ್ಸಾಂನಲ್ಲಿ NRC ಪ್ರಕ್ರಿಯೆ ಆರಂಭಿಸಿದ್ದರು.

Scroll to load tweet…

ಕೇಂದ್ರ ಸರ್ಕಾರದ NRC ಪ್ರಕ್ರಿಯೆಯನ್ನು ವಿಪಕ್ಷಗಳು ಟೀಕಿಸಿದ್ದು, 19 ಲಕ್ಷ ಜನರನ್ನು NRC ಪಟ್ಟಿಯಿಂದ ಹೊರಗಿಟ್ಟ ಹಜೆಲಾ ನೇತೃತ್ವದ NRC ತಂಡ ಹಲವು ಆರೋಪಗಳನ್ನು ಎದುರಿಸಬೇಕಾಗಿ ಬಂದಿದ್ದನ್ನು ಇಲ್ಲಿ ಸ್ಮರಿಸಬಹುದು.

ಅಕ್ರಮ ವಲಸಿಗರನ್ನು ಹೊರ ದಬ್ಬುತ್ತೇವೆ: ಅಸ್ಸಾಂನಲ್ಲಿ ಶಾ ಗುಡುಗು!

ಗುಡುಗಿದ ಶಾ: ದೇಶದಾದ್ಯಂತ ನೆಲೆಸಿರುವ ಅಕ್ರಮ ವಲಸಿಗರಲ್ಲಿ ನಡುಕ ಆರಂಭ!