19 ಲಕ್ಷ ಜನ ಔಟ್: ಅಸ್ಸಾಂ ಮೇಲೆ NRC ಗದಾಪ್ರಹಾರ!

ಅಸ್ಸಾಂ ರಾಷ್ಟ್ರೀಯ ನಾಗರಿಕ ನೊಂದಣಿ ಪ್ರಕ್ರಿಯೆ| ಅಸ್ಸಾಂನಲ್ಲಿ ಕೋಲಾಹಲ ಸೃಷ್ಟಿಸಿದ NRC ಅಂತಿಮ ವರದಿ| NRC ಪಟ್ಟಿಯಿಂದ 19 ಲಕ್ಷ ನಾಗರಿಕರು ಔಟ್| 3 ಕೋಟಿ 11 ಲಕ್ಷ  21 ಸಾವಿರದ 4 ಜನ ಅಸ್ಸಾಂ ನಾಗರಿಕತೆಗೆ ಅರ್ಹ| 19 ಲಕ್ಷ  6 ಸಾವಿರದ 657 ಜನರು ಪಟ್ಟಿಯಿಂದ ಔಟ್| NRC ಅಂತಿಮ ವರದಿಯಿಂದ ಅಸ್ಸಾಂನಲ್ಲಿ ಗೊಂದಲಮಯ ವಾತಾವರಣ|

19 Lakh Assam Citizens Out From NRC List

ಗುವಹಾಟಿ(ಆ.31): ರಾಷ್ಟ್ರೀಯ ನಾಗರಿಕ ನೊಂದಣಿ ಪ್ರಕ್ರಿಯೆ ಅಸ್ಸಾಂನಲ್ಲಿ ಕೋಲಾಹಲ ಸೃಷ್ಟಿಸಿದ್ದು, ಹೊಸ NRC ಪಟ್ಟಿಯಿಂದ ಬರೋಬ್ಬರಿ 19 ಲಕ್ಷ ನಾಗರಿಕರನ್ನು ಕೈಬಿಡಲಾಗಿದೆ.

ಇಷ್ಟೊಂದು ಅಗಾಧ ಪ್ರಮಾಣದಲ್ಲಿ ನಾಗರಿಕರನ್ನು NRC ಪಟ್ಟಿಯಿಂದ ಹೊರ ಹಾಕಿರುವುದರಿಂದ ರಾಜ್ಯದಲ್ಲಿ ಗೊಂದಲಮಯ ವಾತಾವರಣ ಸೃಷ್ಟಿಯಾಗಿದೆ.

NRC ದಾಖಲಾತಿಯಲ್ಲಿ ತಮ್ಮ ಹೆಸರು ಸೇರ್ಪಡೆಗೆ ಒಟ್ಟಾರೆ 3 ಕೋಟಿ 30 ಲಕ್ಷ 27 ಸಾವಿರದ 661 ಜನ ಅರ್ಜಿ ಸಲ್ಲಿಸಿದ್ದರು. ದಾಖಲಾತಿ ಪರಿಶೀಲನೆ ಬಳಿಕ ಅಂತಿಮ NRC ವರದಿಯಲ್ಲಿ 3 ಕೋಟಿ 11 ಲಕ್ಷ  21 ಸಾವಿರದ 4 ಜನ ಅಸ್ಸಾಂ ನಾಗರಿಕತೆಗೆ ಅರ್ಹರಾಗಿದ್ದಾರೆ.

ಇನ್ನು ಅರ್ಜಿ ಸಲ್ಲಿಸದವರು ಹಾಗೂ ಅನರ್ಹ ಅರ್ಜಿಗಳು ಸೇರಿ 19 ಲಕ್ಷ  6 ಸಾವಿರದ 657 ಜನರನ್ನು ಅಸ್ಸಾಂ ನಾಗರಿಕರ ಪಟ್ಟಿಯಿಂದ ಹೊರಗಿಡಲಾಗಿದೆ.

ಇದಕ್ಕೂ ಮೊದಲು ಪ್ರಕಟಿಸಿದ್ದ NRC ಕರಡು ವರದಿಯಲ್ಲಿ ಸುಮಾರು 41 ಲಕ್ಷಕ್ಕೂ ಅಧಿಕ ಜನರನ್ನು ಅಸ್ಸಾಂ ನಾಗರಿಕರಲ್ಲ  ಎಂದು ಘೋಷಿಸಲಾಗಿತ್ತು. ಆದರೆ ಅರ್ಜಿಗಳ ಮರು ಪರಿಶೀಲನೆ ಬಳಿಕ ಪ್ರಕಟಿಸಿರುವ ಅಂತಿಮ ವರದಿಯಲ್ಲಿ 19 ಲಕ್ಷ ಜನರನ್ನು ಪಟ್ಟಿಯಿಂದ ಹೊರದಬ್ಬಲಾಗಿದೆ.

Latest Videos
Follow Us:
Download App:
  • android
  • ios