NRC ಲಿಸ್ಟ್‌ನಲ್ಲಿ ಗಡಿಕಾಯುವ ಯೋಧರ ಹೆಸರೇ ಇಲ್ಲ..!

ಆಗಸ್ಟ್‌ 31ರಂದು ಪ್ರಕಟವಾದ ರಾಷ್ಟ್ರೀಯ ನಾಗರಿಕ ನೊಂದಣಿ (NRC) ಲಿಸ್ಟ್‌ನಲ್ಲಿ ಅಸ್ಸಾಂನ ಯೋಧರ ಹೆರುಗಳೇ ಇಲ್ಲ. NRC ಲಿಸ್ಟ್‌ನಲ್ಲಿ ಬಹಳಷ್ಟು ಜನರ ಹೆಸರುಗಳು ನೋಂದಣಿಯಾಗದೇ ಇರುವುದು ತಿಳಿದೇ ಇದೆ. ಆದರೆ ಪ್ರಸ್ತುತ ಸೇನೆಯಲ್ಲಿ ಕಾರ್ಯ ನಿರ್ವಹಿಸುತ್ತಿರುವ ಸೖನಿಕರ ಹೆಸರುಗಳೇ ಸೇರ್ಪಡೆಯಾಗಿಲ್ಲ ಎಂಬುದು ವಿಪರ್ಯಾಸ.

Assam Serving Jawans names are missing in NRC final list

ಅಸ್ಸಾಂ(ಸೆ.03): ಅಸ್ಸಾಂನ ಬಾರ್‌ಪೇಟ ಜಿಲ್ಲೆಯ ಹಲವು ಯೋಧರ ಹೆಸರುಗಳು  ರಾಷ್ಟ್ರೀಯ ನಾಗರಿಕ ನೊಂದಣಿ (NRC) ಲಿಸ್ಟ್‌ನಲ್ಲಿಲ್ಲ ಎಂಬ ಸತ್ಯ ಬೆಳಕಿಗೆ ಬಂದಿದೆ. ಆಗಸ್ಟ್‌ 31ರಂದು ಬಿಡುಗಡೆಯಾದ NRC ಲಿಸ್ಟ್‌ನಲ್ಲಿ ಲಕ್ಷಕ್ಕೂ ಹೆಚ್ಚು ಜನರ ಹೆಸರು ಸೇರ್ಪಡೆಯಾಗಿರಲಿಲ್ಲ. ಕರ್ತವ್ಯದಲ್ಲಿರುವ ಯೊಧರ ಹೆಸರುಗಳೇ ಪಟ್ಟಿಯಲ್ಲಿ ಸೇರ್ಪಡೆಯಾಗಿಲ್ಲ ಎನ್ನುವ ವಿಚಾರ ತಡವಾಗಿ ಬೆಳಕಿಗೆ ಬಂದಿದೆ.

ರಕ್ಷಣಾ ಸಿಬ್ಬಂದಿಗಳ ಗ್ರಾಮವೆಂದೇ ಕರೆಯಲ್ಪಡುವ ಘೌಜಿಗಾನ್ ಎಂಬ ಗ್ರಾಮದಲ್ಲಿ ಸುಮಾರು 200 ಕುಟುಂಬಗಳಿವೆ. ಈ ಗ್ರಾಮದಿಂದ 20ಕ್ಕೂ ಹೆಚ್ಚು ಜನ ಸೇನೆಯಲ್ಲಿ ಸೇವೆ ಸಲ್ಲಿಸುತ್ತಿದ್ದಾರೆ. ಅವರ ಹೆಸರುಗಳು NRC ಲಿಸ್ಟ್‌ನಲ್ಲಿ ಸೇರ್ಪಡೆಯಾಗಿಲ್ಲ.

19 ಲಕ್ಷ ಜನ ಔಟ್: ಅಸ್ಸಾಂ ಮೇಲೆ NRC ಗದಾಪ್ರಹಾರ!

ಗ್ರಾಮದ ದಿಲ್‌ಬರ್ ಹುಸೈನ್ ಎಂಬರ ಕುಟುಂಬದ ದಿಲ್‌ಬರ್ ಹುಸೈನ್ ಹಾಗೂ ಅವರ ಸಹೋದರ ಮಿಝನೌರ್ ಅಲಿ ಎಂಬವರು ಸೇನೆಯಲ್ಲಿ ಸೇವೆ ಸಲ್ಲಿಸುತ್ತಿದ್ದು ಇಬ್ಬರ ಹೆಸರೂ NRC ಲಿಸ್ಟ್‌ನಿಂದ ಹೊರಗುಳಿದಿದೆ. ಹುಸೈನ್ ಎಂಬವರ ಸಹೋದರ, ಕಾರ್ಗಿಲ್ ಯುದ್ಧದಲ್ಲಿ ಭಾಗವಹಿಸಿದ್ದ ಇಸ್ಲಾಂ ಎಂಬವರ ಹೆಸರೂ ಪಟ್ಟಿಯಿಂದ ಮಿಸ್ ಆಗಿದೆ.

ಅಲ್ಲಿ ವೖರಿಗಳ ಜೊತೆ, ಇಲ್ಲಿ ಪೌರತ್ವಕ್ಕಾಗಿ ಹೋರಾಟ:

ಈ ಬಗ್ಗೆ ಪ್ರತಿಕ್ರಿಯಿಸಿದ ಹುಸೈನ್ ಅವರು, ನಾವು ವೈರಿಗಳೊಂದಿಗೆ ಹೋರಾಡುತ್ತೇವೆ. ನಾವು ಸೇನೆಯನ್ನೇ ನಮ್ಮ ಮೊದಲ ಕುಟುಂಬವಾಗಿ ಪರಿಗನಿಸುತ್ತೇವೆ. ಆದರೆ ಫೖನಲ್ NRC ಪಟ್ಟಿಯಲ್ಲಿ ನಮ್ಮ ಹೆಸರುಗಳೇ ಇಲ್ಲದಿರುವುದು ಬೇಸರವೆನಿಸುತ್ತದೆ. ಗಡಿಯಲ್ಲಿ ನಾವು ಐಓದರ, ಆದರೆ ಇಲ್ಲಿ ನಮ್ಮ ಪೌರತ್ವಕ್ಕಾಗಿಯೇ ಹೋರಾಡಬೇಕಿದೆ ಎಂದಿದ್ದಾರೆ. ಮಿಸನೌರ್ ಅಲಿ, ಅಝಿತ್ ಅಲಿ ಸೇರಿ ಹಲವು ಯೋಧರ ಹೆಸರುಗಳು NRC ಪಟ್ಟಿಯಿಂದ ಹೊರಗುಳಿದಿರುವ ಬಗ್ಗೆ ಅಲ್ಲಿನ ಗ್ರಾಮಸ್ಥರು ಬೇಸರ ವ್ಯಕ್ತಪಡಿಸಿದ್ದಾರೆ.

19 ಲಕ್ಷ ನಾಗರಿಕರು ಔಟ್: NRC ಮೇಲೆ ಅಸ್ಸಾಂ ಮಿನಿಸ್ಟರ್ ಡೌಟ್!

Latest Videos
Follow Us:
Download App:
  • android
  • ios