19 ಲಕ್ಷ ನಾಗರಿಕರು ಔಟ್: NRC ಮೇಲೆ ಅಸ್ಸಾಂ ಮಿನಿಸ್ಟರ್ ಡೌಟ್!

ಅಸ್ಸಾಂ ರಾಷ್ಟ್ರೀಯ ನಾಗರಿಕ ನೊಂದಣಿ ಪ್ರಕ್ರಿಯೆ| ಅಸ್ಸಾಂನಲ್ಲಿ ಕೋಲಾಹಲ ಸೃಷ್ಟಿಸಿದ NRC ಅಂತಿಮ ವರದಿ| NRC ಪಟ್ಟಿಯಿಂದ 19 ಲಕ್ಷ ನಾಗರಿಕರು ಔಟ್| 3 ಕೋಟಿ 11 ಲಕ್ಷ  21 ಸಾವಿರದ 4 ಜನ ಅಸ್ಸಾಂ ನಾಗರಿಕತೆಗೆ ಅರ್ಹ| 19 ಲಕ್ಷ  6 ಸಾವಿರದ 657 ಜನರು ಪಟ್ಟಿಯಿಂದ ಔಟ್| NRC ಅಂತಿಮ ವರದಿಯಿಂದ ಅಸ್ಸಾಂನಲ್ಲಿ ಗೊಂದಲಮಯ ವಾತಾವರಣ| NRC ಪ್ರಕ್ರಿಯೆ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದ ಅಸ್ಸಾಂ ಸಚಿವ| NRC ಬಗ್ಗೆ ವಿಶ್ವಾಸ ಕಡಿಮೆಯಾಗಿದೆ ಎಂದ ಹೀಮಾಂತಾ ಬಿಸ್ವಾ ಶರ್ಮಾ|

Assam Minister Himanta Sarma Says We Have Lost Hope In NRC

ಗುವಹಾಟಿ(ಆ.31): ರಾಷ್ಟ್ರೀಯ ನಾಗರಿಕ ನೊಂದಣಿ ಪ್ರಕ್ರಿಯೆ ಅಸ್ಸಾಂನಲ್ಲಿ ಕೋಲಾಹಲ ಸೃಷ್ಟಿಸಿದ್ದು, ಹೊಸ NRC ಪಟ್ಟಿಯಿಂದ ಬರೋಬ್ಬರಿ 19 ಲಕ್ಷ ನಾಗರಿಕರನ್ನು ಕೈಬಿಡಲಾಗಿದೆ.

ಇಷ್ಟೊಂದು ಅಗಾಧ ಪ್ರಮಾಣದಲ್ಲಿ ನಾಗರಿಕರನ್ನು NRC ಪಟ್ಟಿಯಿಂದ ಹೊರ ಹಾಕಿರುವುದರಿಂದ ರಾಜ್ಯದಲ್ಲಿ ಗೊಂದಲಮಯ ವಾತಾವರಣ ಸೃಷ್ಟಿಯಾಗಿದೆ.

ಈ ಮಧ್ಯೆ NRC ಪ್ರಕ್ರಿಯೆ ಕುರಿತು ಅಸ್ಸಾಂ ಸಚಿವ ಹಾಗೂ ಹಿರಿಯ ಬಿಜೆಪಿ ನಾಯಕ ಹೀಮಾಂತಾ ಬಿಸ್ವಾ ಶರ್ಮಾ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

NRC ಪ್ರಕ್ರಿಯೆ ಅವೈಜ್ಞಾನಿಕವಾಗಿದ್ದು, ಪಟ್ಟಿಯಿಂದ ಬಹಳಷ್ಟು ಜನ ನೈಜ ಭಾರತೀಯರನ್ನು ಕೈಬಿಟ್ಟಿರುವುದು ಸರಿಯಲ್ಲ ಎಂದು ಬಿಸ್ವಾ ಶರ್ಮಾ ಅಭಿಪ್ರಾಯಪಟ್ಟಿದ್ದಾರೆ.

ಬಾಂಗ್ಲಾದೇಶ ಗಡಿಗೆ ಹೊಂದಿಕೊಂಡ ಜಿಲ್ಲೆಗಳಲ್ಲಿ ಕಡಿಮೆ ವಲಸಿಗರು ಹಾಗೂ ರಾಜ್ಯದ ಮಧ್ಯ ಭಾಗದ ಜಿಲ್ಲೆಗಳಲ್ಲಿ ಹೆಚ್ಚು ವಲಸಿಗರನ್ನು ಪತ್ತೆ ಹಚ್ಚಿರುವ NRC ಪ್ರಕ್ರಿಯೆಯನ್ನು ಶರ್ಮಾ ಪ್ರಶ್ನಿಸಿದ್ದಾರೆ. ಅಲ್ಲದೇ NRC ಪ್ರಕ್ರಿಯೆ ಕುರಿತು ತಮಗೆ ವಿಶ್ವಾಸ ಕಡಿಮೆಯಾಗಿದೆ ಎಂದು ಹರಿಹಾಯ್ದಿದ್ದಾರೆ.

ಇಷ್ಟೇ ಅಲ್ಲದೇ 1971ರಿಂದ ಬಾಂಗ್ಲಾದೇಶದಿಂದ ಭಾರತಕ್ಕೆ ವಲಸ ಬಂದ ಭಾರತೀಯರನ್ನೂ NRC ಪಟ್ಟಿ ಗುರುತಿಸಿಲ್ಲ ಎಂದು ಬಿಸ್ವಾ ಆರೋಪಿಸಿದ್ದಾರೆ. 

ಆದರೆ NRC ವರದಿ ಅಂತಿಮವಲ್ಲ ಎಂದಿರುವ ಶರ್ಮಾ, ಮುಂದಿನ ದಿನಗಳಲ್ಲಿ ಮತ್ತಷ್ಟು ಕರಾರುವಕ್ಕಾದ ಪರಿಶೀಲನೆ ಮೂಲಕ ಅಸ್ಸಾಂ ನಾಗರಿಕರಿಗೆ ನ್ಯಾಯ ಒದಗಿಸಲಾಗುವುದು ಎಂದು ಭರವಸೆ ನೀಡಿದ್ದಾರೆ.

Latest Videos
Follow Us:
Download App:
  • android
  • ios