ಬೆಂಗಳೂರು[ಮಾ.05]: ಬೆಂಗಳೂರಿನ ಯಶವಂತಪುರದಿಂದ ಐಆರ್ಖಂಡ್ ನ ಟಾಟಾನಗರಕ್ಕೆ ಚಲಿಸುತ್ತಿದ್ದ ರೈಲೊಂದರಲ್ಲಿ ಬೆಂಕಿ ಅವಘಡ ಸಂಭವಿಸಿದೆ. ಆಂಧ್ರ ಪ್ರದೇಶದ ಪೂರ್ವ ಗೋಧಾವರಿ ಜಿಲ್ಲೆಯ ಗೋಲ್ಲಾಪ್ರೋಲಿನಲ್ಲಿ ಸಮೀಪ ತಲುಪಿದಾಗ ಅಚಾನಕ್ಕಾಗಿ ಅಗ್ನಿ ಕಾಣಿಸಿಕೊಂಡಿರುವುದಾಗಿ ಅಧಿಕಾರಿಗಳು ತಿಳಿಸಿದ್ದಾರೆ.  ರೈಲಿನಲ್ಲಿ  ಬೆಂಕಿ ಕಾಣಿಸಿಕೊಂಡಿದೆ. 

ರೈಲಿನ ಪ್ಯಾಂಟ್ರಿಯಲ್ಲಿ ಬೆಂಕಿ ಕಾಣಿಸಿಕೊಂಡಿದೆ. ಆದರೆ ಬೆಂಕಿ ಹೊತ್ತಿಕೊಳ್ಳಲು ಏನು ಕಾರಣ ಎಂಬುವುದು ಮಾತ್ರ ಇನ್ನೂ ತಿಳಿದು ಬಂದಿಲ್ಲ. ಆದರೆ ಸಿಬ್ಬಂದಿ ಹಾಗೂ ಪ್ರಯಾಣಿಕರ ಸಮಯ ಪ್ರಜ್ಞೆಯಿಂದ ಸಂಭವಿಸಲಿದ್ದ ಬಹುದೊಡ್ಡ ದುರಂತವೊಂದನ್ನು ತಪ್ಪಿಸಿದ್ದಾರೆ.

ಬೆಂಕಿ ಕಿಡಿ ಕಾಣಿಸಿಕೊಳ್ಳುತ್ತಿದ್ದಂತೆಯೇ ಮೊದಲು ಚೈನ್ ಎಳೆದು ರೈಲನ್ನು ನಿಲ್ಲಿಸಿದ್ದಾರೆ. ಬಳಿಕ ಬೆಂಕಿ ಹೊತ್ತಿಕೊಂಡಿದ್ದ ಪ್ಯಾಂಟ್ರಿಯನ್ನು  ರೈಲಿನಿಂದ ಬೇರ್ಪಡಿಲಾಗಿದೆ. ಇದರಿಂದ ಬೆಂಕಿ ಇತರ ಬೋಗಿಗಳಿಗೆ ಹರಡುವುದು ತಪ್ಪಿದೆ. ಹೀಗೆ ಸಿಬ್ಬಂದಿ ಹಾಗೂ ಪ್ರಯಾಣಿಕರ ಜವಾಬ್ದಾರಿಯುತ ನಡೆ ರೈಲು ದುರಂತವನ್ನು ತಡೆದಿದೆ. ಹೀಗಾಗಿ ಯಾವುದೇ ಸಾವು ನೋವು ಸಂಭವಿಸಿಲ್ಲ. ಆದರೆ ಪ್ಯಾಂಟ್ರಿ ಕಾರ್ ಸಂಪೂರ್ಣವಾಗಿ ಸುಟ್ಟು ಕರಕಲಾಗಿದೆ.

ಪ್ಯಾಂಟ್ರಿ ಕಾರ್ ಅಂದ್ರೆ ಏನು?

ರೈಲಿನಲ್ಲಿ ಅಡುಗೆ ತಯಾರಿಸುವ ಸ್ಥಳವನ್ನು ಪ್ಯಾಂಟ್ರಿ ಕಾರ್ ಎನ್ನಲಾಗುತ್ತದೆ. ಇಲ್ಲಿಯೇ ಅಡುಗೆ ತಯಾರಿಸಿ ಪ್ರಯಾಣಿಕರಿಗೆ ವಿತರಿಸಲಾಗುತ್ತದೆ. ಅಮೆರಿಕನ್ ಇಂಗ್ಲೀಷ್ ನಲ್ಲಿ ಇದನ್ನು ಡೈನಿಂಗ್ ಕಾರ್ ಎನ್ನುತ್ತಾರೆ. ಸದ್ಯ ಪ್ಯಾಂಟ್ರಿಯಲ್ಲಿ ಎಚ್ಚರಿಕೆ ವಹಿಸದಿರುವುದೇ ಈ ಬೆಂಕಿ ದುರಂತ ಸಂಭವಿಸಲು ಕಾರಣ ಎನ್ನಲಾಗುತ್ತಿದೆ.

ಈ ಅಗ್ನಿ ಅವಘಡದಿಂದ ಆಂಧ್ರ ಪ್ರದೇಶದ ಹಲವು ವಿಮಾನಗಳು ತಡವಾಗಿ ಹೊರಟಿವೆ.